Wednesday, August 10, 2022

Latest Posts

ಭಾರತ – ಚೀನಾ ಬಿಕ್ಕಟ್ಟು| ಕಾರ್ಪ್ಸ್ ಕಮಾಂಡರ್ಸ್ ಸತತ 13 ಗಂಟೆಗಳ ಮಾತುಕತೆ

ಹೊಸದಿಲ್ಲಿ: ಲಡಾಖ್ ಬಿಕ್ಕಟ್ಟಿನ ಕುರಿತು ಭಾರತ ಮತ್ತು ಚೀನಾ ನಡುವಿನ ಆರನೇ ಕಾರ್ಪ್ಸ್ ಕಮಾಂಡರ್ ಮಟ್ಟದ ಸಭೆಯು ಬರೋಬ್ಬರಿ 13 ಗಂಟೆಗಳ ಮಾತುಕತೆಯ ನಂತರ ಮುಕ್ತಾಯವಾಯಿತು.

ಸಭೆಯಲ್ಲಿ ಭಾರತೀಯ ಸೇನಾ ನಾಯಕರು ಹಾಗೂ ಚೀನಾ ನಾಯಕರ ನಡುವೆ ಚರ್ಚೆ ನಡೆದಿದ್ದು, ಕಾರ್ಪ್ಸ್ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ಮತ್ತು ಅವರ ಉತ್ತರಾಧಿಕಾರಿ ಲೆಫ್ಟಿನೆಂಟ್ ಜನರಲ್ ಪಿಜಿಕೆ ಮೆನನ್ ಮತ್ತು ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯದರ್ಶಿ ಭಾಗಿಯಾಗಿದ್ದರು.

ಮೊಲ್ಡೊದ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ನಡೆದ ಸಭೆಯು ಸೋಮವಾರ ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಗಿ ರಾತ್ರಿ 11 ಗಂಡೆಯ ವೇಳೆಗೆ ಮುಕ್ತಾಯವಾಗಿದ್ದು, ಉಭಯ ರಾಷ್ಟ್ರಗಳು ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ನಡೆಯುತ್ತಿರುವ ಉದ್ವಿಘ್ನ ಸ್ಥಿತಿಯ ಕುರಿತು ಚರ್ಚೆ ನಡೆಸಿದೆ.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ಉನ್ನತ ಮಟ್ಟದ ಸಭೆ ನಡೆಸಿದ್ದು, ಭಾರತದ ಕಾರ್ಯಸೂಚಿ ಮತ್ತು ಸಮಸ್ಯೆಗಳನ್ನು ಚರ್ಚಿಸಿದರು.

1962ರಲ್ಲಿ ಭಾರತ ಚೀನಾ ಯುದ್ಧದ ವೇಳೆ ಚೀನಾ 6 ಪರ್ವತಗಳನ್ನು ತನ್ನ ವಶಕ್ಕೆ ಪಡೆದಿತ್ತು. ತದನಂತರ ಕಳೆದ 20 ದಿನಗಳಲ್ಲಿ ಭಾರತ ಚೀನಾದ 6 ಪ್ರಮುಖ ಪರ್ವತಗಳನ್ನು ಸ್ವಾಧೀನಕ್ಕೆ ಪಡೆದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss