Wednesday, August 10, 2022

Latest Posts

ಭಾರತ -ಚೀನಾ ಸಂಘರ್ಷ: ಜೂನ್ 19 ರಂದು ಸರ್ವಪಕ್ಷ ಸಭೆ

ನವದೆಹಲಿ: ಪೂರ್ವ ಲಡಾಕ್‌ನ ಗಾಲ್ವಾನ್ ಕಣಿವೆಯಲ್ಲಿ ಭಾರತ -ಚೀನಾ ಸಂಘರ್ಷದಲ್ಲಿ ೨೦ ಮಂದಿ ಯೋಧರು ಹುತಾತ್ಮರಾದ ಘಟನೆಯನ್ನು ಕೇಂದ್ರ ಸರಕಾರ ಗಭೀರವಾಗಿ ಪರಿಗಣಿಸಿದ್ದು, ಈ ಸ ಂಬಂಧ ಚರ್ಚಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜೂನ್ ೧೯ ರಂದು ಸರ್ವಪಕ್ಷ ಸಭೆ ಕರೆದಿದ್ದಾರೆ.
ಪ್ರಧಾನಿ ಕಚೇರಿಯ ಟ್ವಿಟರ್ ಖಾತೆಯಲ್ಲಿ ಈ ವಿಚಾರ ಹಂಚಿಕೊಂಡಿದ್ದು, ಱಇದೇ ಜೂನ್ ೧೯ನೇ ತಾರೀಕಿನಂದು ಸಂಜೆ ೫ ಗಂಟೆಗೆ ಭಾರತ ಮತ್ತು ಚೀನಾ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿಯವರು ಸರ್ವಪಕ್ಷಗಳ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ದೇಶದ ಪ್ರಮುಖ ಪಕ್ಷಗಳ ರಾಷ್ಟ್ರೀಯ ನಾಯಕರು ಭಾಗಿಯಾಗಲಿದ್ದಾರೆೞ ಎಂದಿದೆ.
ಗಲ್ವಾನ್ ಗಡಿಯಲ್ಲಿ ಸೋಮವಾರ ರಾತ್ರಿ ಏಕಾಏಕಿ ಚೀನಾ ಸೈನಿಕರು ಭಾರತೀಯ ಸೈನಿಕರೊಂದಿಗೆ ದೈಹಿಕ ಸಂಘರ್ಷಕ್ಕಿಳಿದಿದ್ದು ಇದರ ಪರಿಣಾಮ ಭಾರತೀಯ ೨೦ ಮಂದಿ ಯೋಧರು ಮೃತಪಟ್ಟಿದ್ದರು. ಈ ಮಾಹಿತಿ ಖಚಿತವಾಗುತ್ತಿದಂತೆಯೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ವಿರೋಧ ಪಕ್ಷದ ನಾಯಕರು ಮುಗಿಬಿದ್ದಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss