Sunday, August 14, 2022

Latest Posts

ಭಾರತ, ತೈವಾನ್, ವಿಯಟ್ನಾಂ ಬಲವರ್ಧನೆಗೆ ಅಮೆರಿಕ ಶಪಥ: ಚೀನಾ ದಿಗ್ಬಂಧನಕ್ಕೆ ಅಷ್ಟಾದಶ ಸೂತ್ರ!

ವಾಷಿಂಗ್ಟನ್: ಚೀನಾ ದೇಶದ ಸರ್ವಶಕ್ತಿಯನ್ನು ದುರ್ಬಲಗೊಳಿಸುವ ಹದಿನೆಂಟು ಪ್ರಮುಖಾಂಶಗಳನ್ನು ಈಗ ಅಮೆರಿಕ ಅಸ್ತ್ರವಾಗಿಸಿಕೊಂಡಿದೆ.

ಭಾರತ, ತೈವಾನ್ ಹಾಗೂ ವಿಯಟ್ನಾಂ ದೇಶಗಳಿಗೆ ಪ್ರಬಲ ಶಸ್ತ್ರಾಸ್ತಗಳನ್ನು ಪೂರೈಸುವುದಲ್ಲದೆ, ಹುವಾಯ್ ಅಂತಹ ಚೀನಾ ದೇಶದ ಬಹುದೊಡ್ಡ ಕಂಪನಿಯ ಎಲ್ಲ ವ್ಯವಹಾರಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ರದ್ದುಗೊಳಿಸುವ ಕಾರ್ಯತಂತ್ರವನ್ನು ರೂಪಿಸಿದೆ.

ಚೀನಾದಲ್ಲಿ ನೆಲೆಯಾಗಿರುವ ಅಮೆರಿಕನ್ ಕಂಪನಿಗಳನ್ನು ಮುಚ್ಚಿ, ಅವುಗಳನ್ನು ಅಮೆರಿಕದಲ್ಲಿಯೇ ಆರಂಭಿಸುವುದು ಮತ್ತು ಚೀನಾ ದೇಶದ ಪ್ರಮುಖ ನಗರಗಳ ಜೊತೆ ಅಮೆರಿಕ ಸೇರಿದಂತೆ ಯೂರೋಪ್ ಹಾಗೂ ಮತ್ತಿತರ ದೇಶಗಳ ಜೊತೆ ಹೊಂದಿರುವ ಎಲ್ಲ ರೀತಿಯ ವಿದೇಶಿ ಸಂಬಂಧಗಳನ್ನು ಮುರಿಯುವುದು ದೊಡ್ಡಣ್ಣನ ಗುರಿಯಾಗಿದೆ.

ಅಮೆರಿಕದಲ್ಲಿರುವ ನೂರಾರು ಚೀನಾ ಕಂಪನಿಗಳನ್ನು ಮುಚ್ಚುವುದು ಮತ್ತು ಚೀನಾ ಇದುವರೆಗೆ ಉತ್ಪಾದಿಸಿದ ವಸ್ತುಗಳನ್ನು ಭಾರತ ತೈವಾನ್ ಮತ್ತು ಕೊರಿಯಾ ದೇಶಗಳಲ್ಲಿ ಅವುಗಳ ಉತ್ಪಾದನೆಯನ್ನು ಆರಂಭಿಸುವುದು ಕೂಡಾ ಅಮೆರಿಕ ಈಗ ರೂಪಿಸಿರುವ ಹದಿನೆಂಟು ಅಂಶಗಳ ಮಾರ್ಗಸೂಚಿ ಪಟ್ಟಿಯಲ್ಲಿ ಸೇರಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss