ಭಾರತ ಮಾತಾಕಿ ಜೈ ಘೋಷಣೆ ಪುರುಷತ್ವದ ಸಂಕೇತ: ರಾಜ್ಯಪಾಲ

0
194

ಬೆಂಗಳೂರು: ಭಾರತ ಮಾತಾಕಿ ಜೈ ಎಂಬುದು ಪುರುಷತ್ವದ ಸಂಕೇತ ಎಂದು ರಾಜ್ಯಪಾಲ ವಜುಭಾಯಿ ಆರ್. ವಾಲಾ ತಿಳಿಸಿದ್ದಾರೆ.

ರಾಜಭವನದಲ್ಲಿ ಮಾತನಾಡಿದ ಅವರು, ಭಾರತ ಮಾತೆಗೆ ಜೈಕಾರ ಕೂಗಲು ಸಾಧ್ಯವಿಲ್ಲದವರು, ಭಾರತ ಮಾತಾಕಿ ಜೈ ಎನ್ನಲು ಗಂಟಲಲ್ಲಿ ಧ್ವನಿ ಇಲ್ಲದವರು ಗಂಡಸರೇ ಅಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದ ರಾಜ್ಯಪಾಲ ವಿ.ಆರ್.ವಾಲಾ, ಭಾರತ ಮಾತೆಗೆ ಜೈಕಾರ ಕೂಗುವುದು ಪುರುಷತ್ವದ ಸಂಕೇತ ಎಂದು ಹೇಳಿದ್ದಾರೆ.

ಶಿಕ್ಷಣ ಸಂಸ್ಥೆಗಳಿಗೆ ಮೌಲ್ಯಾಂಕ ನೀಡುವ ನ್ಯಾಕ್ ಸಮಿತಿ ಕುರಿತು ಮಾತನಾಡಿರುವ ವಾಲಾ, ನ್ಯಾಕ್ ಸಮಿತಿ ಇಂದಿಗೆ 25 ವರ್ಷಗಳನ್ನು ಪೂರೈಸಿದೆ. ಹಲವು ಸಂಸ್ಥೆಗಳು ನೂರಾರು ವರ್ಷಗಳನ್ನು ಪೂರೈಸುತ್ತವೆ. ಆದರೆ ಅವು ಸಮಾಜಕ್ಕೆ ಯಾವ ಕೊಡುಗೆ ನೀಡುತ್ತಿವೆ ಎಂಬುದು ಮುಖ್ಯ ಎಂದರು.

ನ್ಯಾಕ್ ಸಮಿತಿ ಶಿಕ್ಷಣ ಸಂಸ್ಥೆಗಳಿಗೆ ಮೌಲ್ಯಾಂಕನ ನೀಡುತ್ತದೆ. ಪ್ರತಿಯೊಂದು ಶಿಕ್ಷಣ ಸಂಸ್ಥೆಗಳು ಎ ಗ್ರೇಡ್ ಪಡೆದುಕೊಳ್ಳಬೇಕು. ಇಲ್ಲವಾದರೆ ಆ ಶಿಕ್ಷಣ ಸಂಸ್ಥೆಗಳನ್ನು ಮುಚ್ಚುವುದು ಸೂಕ್ತ ಎಂದು ತಿಳಿಸಿದರು.

ಈಗಲೂ ಬಿ ಮತ್ತು ಸಿ ಗ್ರೇಡ್ ಪಡೆಯುವ ವಿದ್ಯಾರ್ಥಿಗಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಹಿಂದುಳಿದವರು ಎಂದು ಗುರುತಿಸುತ್ತವೆ. ಈ ಮಾನದಂಡ ಶಿಕ್ಷಣ ಸಂಸ್ಥೆಗಳಿಗೂ ಅನ್ವಯವಾಗಬೇಕು. ಯಾವ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ವಿಕಸನಕ್ಕೆ ಸೂಕ್ತ ರೀತಿಯ ಶಿಕ್ಷಣ ಇಲ್ಲವೂ ಅಂತಹ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲು ನ್ಯಾಕ್ ಶಿಫಾರಸ್ಸು ಮಾಡುವುದು ಒಳ್ಳೆಯದು ಎಂದು ಸಲಹೆ ನೀಡಿದರು.

LEAVE A REPLY

Please enter your comment!
Please enter your name here