Sunday, August 14, 2022

Latest Posts

ಭಾರತ ರತ್ನ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನ: ಗೌರವ ಸಲ್ಲಿಸಿದ ಸಿಎಂ ಯಡಿಯೂರಪ್ಪ, ಸಚಿವ ಸುಧಾಕರ್

ಬೆಂಗಳೂರು: ಇಂದು ದಿವಂಗತ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮಜಯಂತಿಯಾಗಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಜನ್ಮಜಯಂತಿಯ ಶುಭ ಹಾರೈಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿದ್ದು, ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಪ್ರಾಮಾಣಿಕತೆ ಮತ್ತು ದೇಶಭಕ್ತಿಗಳ ಸಾಕಾರ ರೂಪದಂತಿದ್ದ ಮಾಜಿ ಪ್ರಧಾನಮಂತ್ರಿ ದಿವಂಗತ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿಯವರು ಜನ್ಮಜಯಂತಿಯಂದು ಅವರಿಗೆ ನಮ್ಮ ಅನಂತ ನಮನಗಳನ್ನು ಸಲ್ಲಿಸೋಣ. ಅವರ ಮೌಲ್ಯಯುತ ಸಾರ್ವಜನಿಕ ಜೀವನ,ಸಿದ್ಧಾಂತ, ಸಾಧನೆಗಳು ಸದಾ ಆದರ್ಶಪ್ರಾಯವಾಗಿದೆ.
ಸಚಿವ ಡಾ.ಕೆ. ಸುಧಾಕರ್ ಕೂಡ ಟ್ವೀಟ್ ಮಾಡಿದ್ದು, ಸರಳ ಸಜ್ಜನಿಕೆಯ ಸಾಕಾರ ಮೂರ್ತಿ, ಭಾರತದ ಮಾಜಿ ಪ್ರಧಾನಮಂತ್ರಿ ಜೈ ಜವಾನ್ ಜೈ ಕಿಸಾನ್ ಎಂಬ ಘೋಷವಾಕ್ಯದ ಮೂಲಕ ನಮ್ಮ ಸೈನಿಕರ ಮತ್ತು ರೈತರ ಮಹತ್ವವನ್ನು ಸಾರಿದ ಅಪ್ರತಿಮ ನಾಯಕ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ಜಯಂತಿಯಂದು ಆ ಮಹಾನ್ ಚೇತನಕ್ಕೆ ಅನಂತ ಪ್ರಣಾಮಗಳು ಎಂದು ಟ್ವೀಟ್ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss