Monday, July 4, 2022

Latest Posts

ಭಾರತದ ವನಿತೆಯರಿಗೆ ರೋಚಕ ಗೆಲುವು

ಬ್ರಿಸ್ಬೇನ್: ಐಸಿಸಿ ಮಹಿಳಾ ಟಿ-20 ವಿಶ್ವಕಪ್ ಗೂ ಪೂರ್ವಭಾವಿಯಾಗಿ ನಡೆದ ಅಭ್ಯಾಸ ಪಂದ್ಯದಲ್ಲಿ ಭಾರತ ಎದುರಾಳಿ ವೆಸ್ಟ್ ಇಂಡೀಸ್ ವಿರುದ್ದ ಎರಡು ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ.

ಪಾಕಿಸ್ತಾನ ವಿರುದ್ದ ನಡೆಯಬೇಕಿದ್ದ ಮೊದಲ ಅಭ್ಯಾಸ ಪಂದ್ಯ ಮಹಿಳೆಯಿಂದಾಗಿ ರದ್ದುಗೊಂಡಿತು. ಆದರೆ ವೆಸ್ಟ್ ಇಂಡೀಸ್ ವಿರುದ್ದ ಬ್ರಿಸ್ಬೇನ್ ನ ಅಲನ್ ಬಾರ್ಡರ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರೂ ಕರಾರುವಾಕ್ ಬೌಲಿಂಗ್ ಪ್ರದರ್ಶಿಸುವ ಮೂಲಕ ರೋಚಕ ಗೆಲುವು ದಾಖಲಿಸಿತು. ಈ ಮೂಲಕ ಪ್ರತಿಷ್ಠಿತ ಟೂರ್ನಿಗೂ ಮೊದಲು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಎದುರಾಳಿ ಆಟಗಾರ್ತಿಯರ ಪರಿಣಾಮಕಾರಿ ಬೌಲಿಂಗ್ ದಾಳಿಗೆ ಸಿಲುಕಿ ಎಂಟು ವಿಕೆಟ್ ನಷ್ಟಕ್ಕೆ 107 ರನ್ ಗಳಿಸಿತು. 52 ರನ್ ಮಾಡುವಷ್ಟರಲ್ಲಿ ಐದು ವಿಕೆಟ್ ಕಳೆದುಕೊಂಡಿದ್ದ ಭಾರತ ನಂತರ ಸ್ಕೋರು 80 ರನ್ ಆಗುವಷ್ಟರಲ್ಲಿ ಎಂಟು ವಿಕೆಟ್ ಕಳೆದುಕೊಂಡು ಭಾರಿ ಸಂಕಷ್ಟಕ್ಕೆ ಸಿಲುಕಿತ್ತು.

27 ರನ್ ಜತೆಯಾಟ: ಆದರೆ 10ನೇ ಕ್ರಮಾಂಕದಲ್ಲಿ ಆಡಲು ಬಂದ ಶಿಖಾ ಪಾಂಡೆ ಕೇವಲ 16 ಎಸೆತ ಎದುರಿಸಿ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ನ ಅಜೇಯ 24 ರನ್ ಬಾರಿಸಿ ತಂಡದ ಮೊತ್ತ 100ರನ್ ಗಡಿ ದಾಟಿಸಿದರು. ಪೂನಂ ಯಾದವ್ (ಅಜೇಯ 4) ಜೊತೆ ಸೇರಿಕೊಂಡು ಮುರಿಯದ ಒಂಬತ್ತನೇ ವಿಕೆಟ್ ಗೆ 27 ರನ್ ಜೊತೆಯಾಟದಲ್ಲಿ ಭಾಗಿಯಾಗಿ ಗಮನ ಸೆಳೆದರು. ಉಳಿದಂತೆ ದೀಪ್ತಿ ಶರ್ಮಾ 21 ರನ್ ಗಳಿಸಿದರು. 32 ಎಸೆತ ಎದುರಿಸಿದ ಆಕೆಯ ಮೊತ್ತದಲ್ಲಿ ಎರಡು ಬೌಂಡರಿ ಇದೆ. ವಿಂಡೀಸ್ ಪರ ಶಮಿಲಿಯಾ ಕಾನೆಲ್ ಹಾಗೂ ಅನಿಸಾ ಮಹಮ್ಮದ್ ತಲಾ ಎರಡು ವಿಕೆಟ್ ಸಂಪಾದಿಸಿದರು.

ವಿಂಡೀಸ್ ಬಿರುಸಿನ ಆರಂಭ: ಗೆಲುವಿನ ಗುರಿ ಬೆನ್ನಟ್ಟಿದ ವಿಂಡೀಸ್ ಗೆ ಆರಂಭ ಆಟಗಾರ್ತಿ ಲೀ ಆ್ಯನ್ ಕಿರ್ಬಿ(42) ಬಿರುಸಿನ ಆರಂಭ ಒದಗಿಸಿದರು. ಒಂದು ಹಂತದಲ್ಲಿ ಅದು 13 ಓವರ್ ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 57 ರನ್ ಗಳಿಸಿ ಸುಸ್ಥಿತಿಯಲ್ಲಿತ್ತು. 41 ಎಸೆತ ಎದುರಿಸಿದ ಲೀ ಆ್ಯನ್ ಮೂರು ಬೌಂಡರಿ ಹಾಗೂ ಎರಡು ಸಿಕ್ಸರ್ ನ 42 ರನ್ ಗಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss