ಭಾರತ ವಿರುದ್ಧ ಚೀನಾ ಸೈಬರ್ ಸಮರ|ನೆರೆ ರಾಷ್ಟ್ರದ ಹ್ಯಾಕರ್‌ಗಳಿಂದ 40,300 ಬಾರಿ ಹ್ಯಾಕ್ ಮಾಡಲು ಯತ್ನ!

0
60

ಹೊಸದಿಲ್ಲಿ: ಗಡಿಯಲ್ಲಿ ನಮ್ಮ ದೇಶದ ಯೋಧರಿಂದ ಪೆಟ್ಟು ತಿಂದಿರುವ ಚೀನಾ ಈಗ ಹಿಂಬಾಗಿಲಿನ ಮೂಲಕ ಭಾರತ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದು, ಭಾರತದ ಸೈಬರ್ ತಂತ್ರಜ್ಞಾನದ ಮೇಲೆ ಡಿಜಿಟಲ್ ದಾಳಿಗೆ ೪೦,೩೦೦ ಬಾರಿ ಯತ್ನಿಸಿದೆ ಎಂದು ತಿಳಿದುಬಂದಿದೆ.

ಚೀನಾದ ಹ್ಯಾಕರ್‌ಗಳಿಂದ ಸತತವಾಗಿ ಭಾರತದ ಸೈಬರ್ ತಂತ್ರಜ್ಞಾನ ಹ್ಯಾಕ್ ಮಾಡಲು ಜೂನ್ ೧೫ರಿಂದ ಇದುವರೆಗೆ ಯತ್ನ ನಡೆದಿದ್ದು, ಇದರಲ್ಲಿ ಒಮ್ಮೆ ಯೂ ಹ್ಯಾಕ್ ಮಾಡಲು ಚೀನಾ ಹ್ಯಾಕರ್‌ಗಳಿಂದ ಆಗಿಲ್ಲ ಎಂದು ಮೂಲಗಳು ತಿಳಿಸಿವೆ. ಗ್ಯಾಲ್ವಾನ್ ಕಣಿವೆ ಯಲ್ಲಿ ಚೀನಾ ಸೈನಿಕರ ದಾಳಿಯನ್ನೂ ಭಾರತೀಯ ಸೇನೆ ಹಿಮ್ಮೆಟ್ಟಿಸಿದ್ದು, ಇತ್ತ ರಾಜತಾಂತ್ರಿಕವಾಗಿಯೂ ಭಾರತ ನೆರೆ ರಾಷ್ಟ್ರದ ಮೇಲೆ ಒತ್ತಡ ಹೇರುತ್ತಿದೆ. ಏಟಿಗೆ ತಿರುಗೇಟು ಎನ್ನುತ್ತಿದೆ.

ಇದರಿಂದ ಅಸಹಾಯಕವಾಗಿರುವ ಚೀನಾ ಭಾರ ತ ವಿರುದ್ಧ ಸೈಬರ್ ಸಮರ ಸಾರಲು ಇಂತಹ ಯತ್ನ ಮಾಡಿದೆ ಎಂದು ತಿಳಿದುಬಂದಿದೆ. ಚೀನಾದ ಸಿಚುವಾನ್ ಪ್ರಾಂತ್ಯದಿಂದ ಭಾರತೀಯ ಸೈಬರ್ ತಂತ್ರಜ್ಞಾನದ ಮೇಲೆ ದಾಳಿ ಮಾಡಲು ಯತ್ನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ದೇಶದ ರಕ್ಷಣಾ ಕ್ಷೇತ್ರ ಗುರಿ: ಏತನ್ಮಧ್ಯೆ, ಚೀನಾದ ಸೈಬರ್ ಸಮರದ ಕುರಿತು ಅಮೆರಿಕದ ಸಿಫರ್ಮಾ ಸಂಶೋಧನಾ ಸಂಸ್ಥೆಯೂ ವರದಿಯೊಂದು ಬಿಡುಗಡೆ ಮಾಡಿದ್ದು, ಭಾರತದ ರಕ್ಷಣಾ ಸಚಿವಾಲಯ, ರಿಲಯನ್ಸ್‌ನ ಜಿಯೋ, ಏರ್‌ಟೆಲ್, ಬಿಎಸ್‌ಎನ್‌ಎಲ್ ಸೇರಿ ಹಲವು ಕಂಪನಿಗಳ ಸೈಬರ್ ತಂತ್ರಜ್ಞಾನ ಹ್ಯಾಕ್ ಮಾಡಲು ಸಹ ಚೀನಾ ಹ್ಯಾಕರ್‌ಗಳು ಯತ್ನಿಸಿದ್ದಾರೆ ಎಂದು ಮಾಹಿತಿ ನೀಡಿದೆ.

LEAVE A REPLY

Please enter your comment!
Please enter your name here