Monday, August 8, 2022

Latest Posts

ಭಾರತ ಸರ್ಕಾರದ 7 ನೆಟ್ ವರ್ಕ್ ಸಹಿತ ವಿಶ್ವದ 100 ಕ್ಕೂ ಹೆಚ್ಚು ಕಂಪನಿಗಳ ಡೇಟಾ ಮೇಲೆ ಚೀನಾ ಹ್ಯಾಕರ್ ಕಣ್ಣು!

ಹೊಸದಿಲ್ಲಿ: ಚೀನಾದಿಂದ ಭಾರತದ ಮೇಲೆ ಡಿಜಿಟಲ್ ಆಕ್ರಮಣ ಮಾಡಲು ಮುಂದಾಗಿದ್ದು, ಕೇಂದ್ರ ಸರ್ಕಾರದ 7 ನೆಟ್ ವರ್ಕ್ ಗಳೂ ಸೇರಿದಂತೆ ವಿಶ್ವದ 100 ಕ್ಕೂ ಹೆಚ್ಚು ಕಂಪನಿಗಳ ಡೇಟಾಗಳಿಗೆ ಚೀನಾ ಹ್ಯಾಕರ್ ಗಳು ಕನ್ನಾ ಹಾಕಿದ್ದಾರೆ.
ಗಡಿಯಲ್ಲಿ ಪದೇ ಪದೇ ಕ್ಯಾತೆ ತೆಗೆಯುತ್ತಿರುವ ಚೀನಾವು ಇದೀಗ ಹ್ಯಾಕರ್ ಗಳ ಮೂಲಕ ಕೇಂದ್ರ ಸರ್ಕಾರದ ಏಳು ನೆಟ್ ವರ್ಕ್ ಗಳು ಸೇರಿದಂತೆ ವಿಶ್ವದ 100 ಕ್ಕೂ ಹೆಚ್ಚು ಕಂಪನಿಗಳ ಡೇಟಾಗಳಿಗೆ ಕನ್ನ ಹಾಕಿದ್ದು, ಮಹತ್ವದ ಮಾಹಿತಿಗಳನ್ನು ಪಡೆಯುತ್ತಿದೆ ಎಂದು ಅಮೆರಿಕ ನ್ಯಾಯಾಂಗ ಇಲಾಖೆ ಆರೋಪಿಸಿದೆ.
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಭಾರತದ 1,350 ಕ್ಕೂ ಹೆಚ್ಚು ಗಣ್ಯರ ಮಾಹಿತಿಗಳನ್ನು ಚೀನಾ ಸಂಗ್ರಹಿಸಿ ಬೇಹುಗಾರಿಕೆ ಮಾಡುತ್ತಿದೆ ಎಂಬ ವರದಿಗಳ ಬೆನ್ನಲ್ಲೇ ಚೀನಾ ಇದೀಗ ವಿಶ್ವದ 100 ಕ್ಕೂ ಹೆಚ್ಚು ಕಂಪನಿಗಳ ಡೇಟಾಗಳಿಗೆ ಕನ್ನ ಹಾಕಿದೆ ಎನ್ನಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss