Thursday, August 11, 2022

Latest Posts

ಭಾರಿ ಮಳೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ 32 ಮನೆ, 199.2 ಹೆಕ್ಟೇರ್ ಕೃಷಿ ಭೂಮಿಗೆ ಹಾನಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಸೋಮವಾರ ದೊರೆತ ಮಾಹಿತಿಯಂತೆ ಕಳೆದ 24 ಗಂಟೆ ಅವಧಿಯಲ್ಲಿ 32 ಮನೆಗಳು ಹಾನಿಗೀಡಾಗಿವೆ.
ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯಲ್ಲಿ 49.0 ಮಿ.ಮೀ. ಮಳೆಯಾಗಿದೆ. ಪ್ರಾಕೃತಿಕ ವಿಕೋಪದಲ್ಲಿ ಮಂಗಳೂರು ತಾಲೂಕಿನಲ್ಲಿ 5 ಮನೆಗಳು ಪೂರ್ಣ, 6 ಮನೆಗಳು ಭಾಗಶಃ, ಬಂಟ್ವಾಳದಲ್ಲಿ 5 ಪೂರ್ಣ, 8 ಭಾಗಶಃ ಹಾನಿಗೀಡಾಗಿವೆ. ಪುತ್ತೂರಿನಲ್ಲಿ 2 ಭಾಗಶಃ, ಸುಳ್ಯದಲ್ಲಿ 1 ಪೂರ್ಣ, ಮೂಡುಬಿದಿರೆಯಲ್ಲಿ 4 ಭಾಗಶಃ ಮತ್ತು ಕಡಬದಲ್ಲಿ 1 ಮನೆ ಭಾಗಶಃ ಹಾನಿಗೀಡಾಗಿವೆ. ನೆರೆಯಿಂದಾಗಿ ಮೂಲ್ಕಿ ಭಾಗದಲ್ಲಿ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದವರು ತಮ್ಮ ಮನೆಗಳಿಗೆ ತೆರಳಿದ್ದಾರೆ. 199.2 ಹೆಕ್ಟೇರ್‌ನಷ್ಟು ಕೃಷಿ ಭೂಮಿ ಹಾನಿಗೀಡಾಗಿವೆ. ತೋಟಗಾರಿಕಾ ಬೆಳೆ ನಷ್ಟದ ಬಗ್ಗೆ ಇನ್ನಷ್ಟೆ ಮಾಹಿತಿ ಸಿಗಬೇಕಿದೆ ಎಂದು ದ.ಕ. ಜಿಲ್ಲಾಡಳಿತ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss