ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, June 22, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಹೇಳಿದ್ದು ಖರ್ಜೂರ, ಬಿಸ್ಕತ್ತು, ನೂಡಲ್ಸ್… ಇದ್ದಿದ್ದು 30 ಕಿಲೋ ಚಿನ್ನ: ಕೇಸಲ್ಲಿ ಕೇರಳ ಸಿಎಂ ಕಾರ್ಯದರ್ಶಿ ಶಾಮೀಲು?

ತಿರುವನಂತಪುರಂ: ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಕಸ್ಟಮ್ಸ್ ಅಧಿಕಾರಿಗಳು ಭಾರೀ ಚಿನ್ನಕಳ್ಳಸಾಗಣೆ ಪ್ರಕರಣವೊಂದನ್ನು ಭೇದಿಸಿದ್ದು, ಇದರಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಕಾರ್ಯದರ್ಶಿಯೇ ಶಾಮೀಲಾಗಿರುವ ಆಘಾತಕಾರಿ ಪ್ರಕರಣವೀಗ ಕೇರಳದಲ್ಲಿ ಭಾರೀ ಕೋಲಾಹಲ ಸೃಷ್ಟಿಸಿದೆ.
ಯನೈಟೆಡ್ ಅರಬ್ ಎಮಿರೇಟ್ಸ್‌ನ ತಿರುವನಂತಪುರಂನಲ್ಲಿನ ಕಾನ್ಸುಲೇಟ್‌ಗೆ ಅರಬ್ ಏರ್‌ವೇಸ್ ಮೂಲಕ ಬಂದ ಪಾರ್ಸೆಲ್‌ನಲ್ಲಿ 13.5ಕೋ.ರೂ.ಮೌಲ್ಯದ ೩೦ಕಿಲೋ ಚಿನ್ನದ ಕಳ್ಳಸಾಗಣೆಯಾಗುತ್ತಿದ್ದುದು ಈಗ ಬಯಲಿಗೆ ಬಂದಿದೆ. ಈ ಕಳ್ಳಸಾಗಣೆಯ ಪ್ರಮುಖ ಆರೋಪಿ ಕೇರಳ ಐಟಿ ಇಲಾಖೆಯ ಉದ್ಯೋಗಿ ಸ್ವಪ್ನಾ ಸುರೇಶ್ ಎಂಬಾಕೆ.ಈ ಕಳ್ಳಸಾಗಣೆ ಪ್ರಕರಣ ಬೆಳಕಿಗೆ ಬರುತ್ತಲೇ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಚೇರಿಯಿಂದ ಆರೋಪಿಗಳ ರಕ್ಷಣೆಗಾಗಿ ಕರೆ ಬಂದಿದೆ . ಇದೀಗ ಇದರ ಬೆನ್ನಿಗೇ ಪಿಣರಾಯಿ ವಿಜಯನ್ ಅವರ ಕಾರ್ಯದರ್ಶಿ ಎಂ.ಶಿವಶಂಕರ್ ಅವರನ್ನು ವಜಾಗೊಳಿಸಿರುವುದು ಕುತೂಹಲ ಮೂಡಿಸಿದೆ.
ಘಟನೆ ಹೇಗೆ ಬೆಳಕಿಗೆ ಬಂತು?
ಜುಲೈ 3ರಂದು ಅರಬ್ ಏರ್‌ವೇಸ್‌ನಲ್ಲಿ ಅರಬ್ ಎಮಿರೇಟ್ ಕಾನ್ಸುಲೇಟ್ ಹೆಸರಿನಲ್ಲಿ ಬ್ಯಾಗೇಜೊಂದು ಬಂದಿದೆ. ಕಸ್ಟಮ್ಸ್ ಅಧಿಕಾರಿಗಳು ಅನುಮಾನಗೊಂಡು ಈ ಬಗ್ಗೆ ಕೇಂದ್ರ ವಿದೇಶಾಂಗ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಅಲ್ಲಿಂದ ಅರಬ್ ಎಮಿರೇಟ್ಸ್ ಕಾನ್ಸುಲೇಟ್‌ನಲ್ಲಿ ವಿಚಾರಿಸಿದ್ದಾರೆ. ಅರಬ್ ಕಾನ್ಸುಲೇಟ್ ಈ ಬ್ಯಾಗೇಜ್‌ನಲ್ಲಿ ಖರ್ಜೂರ, ಬಿಸ್ಕತ್ತು ಮತ್ತು ನೂಡಲ್ಸ್ ಇರುವುದು ಎಂದು ಉತ್ತರಿಸಿದೆ.ಆದರೆ ಎಕ್ಸ್-ರೇ ಯಂತ್ರದಲ್ಲಿ ಪರೀಕ್ಷಿಸಿದಾಗ ಭಾರೀ ಪ್ರಮಾಣದ ಚಿನ್ನ ಕಂಡುಬಂದಿದೆ.
ಘಟನೆಯಲ್ಲಿ ಯಾರ್ಯಾರು ಶಾಮೀಲು?
ಸದಸ್ಯ ತಿರುವನಂತಪುರಂನಲ್ಲಿರುವ ಅರಬ್ ಎಮಿರೇಟ್ಸ್ ಕಾನ್ಸುಲೇಟ್‌ನ ಸಾರ್ವಜನಿಕ ಸಂಪರ್ಕಾಧಿಕಾರಿ ಸರಿತ್ ಮುಖ್ಯ ಆರೋಪಿ.ಹಾಗೆಯೇ ಕೇರಳ ಐಟಿ ಇಲಾಖೆಯ ಪ್ರಾಜೆಕ್ಟ್ ಒಂದರ ಅಧಿಕಾರಿ ಸ್ವಪ್ನಾ ಸುರೇಶ್ ಇದರಲ್ಲಿ ಶಾಮೀಲಾಗಿದ್ದು, ಮುಖ್ಯಮಂತ್ರಿ ಕಚೇರಿ ಆರೋಪಿಗಳನ್ನು ರಕ್ಷಿಸಲು ಯತ್ನಿಸಿರುವ ಗಂಭೀರ ಆರೋಪ ಬಂದಿದೆ. ಇದರ ಬೆನ್ನಿಗೇ ಮುಖ್ಯಮಂತ್ರಿ ಪಿಣರಾಯಿ ಅವರ ಕಾರ್ಯದರ್ಶಿ ಎಂ.ಶಿವಶಂಕರ್ (ಐಎಎಸ್) ಅವರನ್ನು ವಜಾಗೊಳಿಸಿ ಅವರ ಸ್ಥಾನಕ್ಕೆ ಇನ್ನೊಬ್ಬ ಐಎಎಸ್ ಅಕಾರಿ ಮೀರ್ ಮೊಹಮ್ಮದ್ ಅವರ ನೇಮಕವಾಗಿದೆ.
ಯಾರಿಗೆ ಹೋಗಲಿತ್ತು ಈ ಚಿನ್ನ?
ಮುಖ್ಯ ಆರೋಪಿ ಸರಿತ್‌ನನ್ನು ವಿಚಾರಿಸಿದಾಗ ತಾನು ಈ ಚಿನ್ನ ಸ್ವೀಕರಿಸಲು ಯೋಜಿತನಾಗಿದ್ದುದನ್ನು ಒಪ್ಪಿಕೊಂಡಿದ್ದಾನೆ.ಕೊಚ್ಚಿಯ ಫೈಸಲ್ ಫರೀದ್‌ಗಾಗಿ ಈ ಚಿನ್ನವನ್ನು ತಾನು ಸ್ವೀಕರಿಸಿದ್ದಾಗಿ ಸರಿತ್ ತಿಳಿಸಿದ್ದಾನೆ. ಆದರೆ ಈ ರೀತಿ ಈ ಹಿಂದೆ ಕನಿಷ್ಠ ೧೦ಬಾರಿಯಾದರೂ ಇಂತಹ ಚಿನ್ನ ಕಳ್ಳಸಾಗಣೆ ನಡೆದಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ಬಲವಾದ ಶಂಕೆ ವ್ಯಕ್ತಪಡಿಸಿದ್ದಾರೆ.
ಸ್ವಪ್ನಾ ಸುರೇಶ್ ಎಂಬಾಕೆ ಈ ಹಿಂದೆಯೂ ವಿವಾದ ಸೃಷ್ಟಿಸಿದ್ದ ಮಹಿಳೆ ಎಂಬುದು ಈ ಕಳ್ಳಸಾಗಣೆ ಜಾಲದ ಹಿಂದೆ ಇರುವ ಭಾರೀ ಕೈಗಳ ಬಗ್ಗೆ ಅನುಮಾನ ಮೂಡಿಸಿದೆ. ಸ್ವಪ್ನಾ ಸುರೇಶ್ ಇರುವ ಐಟಿ ಇಲಾಖೆ ನೇರ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ನಿಯಂತ್ರಣದಲ್ಲಿರುವುದು ಈಗ ವಿವಾದದ ಕೇಂದ್ರ ಬಿಂದುವಾಗಿದೆ.
ಆದರೆ ಮುಖ್ಯಮಂತ್ರಿ ಪಿಣರಾಯಿ ಈ ವಿವಾದಕ್ಕೂ ತನಗೂ ಸಂಬಂಧವಿಲ್ಲ. ಮಹಿಳೆಯೊಬ್ಬಳು ಪ್ರಕರಣದಲ್ಲಿ ಶಾಮೀಲಾಗಿದ್ದು ಎಂದು ಉಲ್ಲೇಖಿಸಿರುವ ಪಿಣರಾಯಿ ಆಕೆಗೂ ತನಗೂ ಯಾವುದೇ ಸಂಬಂಧ ಇಲ್ಲ ಎಂಬುದಾಗಿ ಸ್ಪಷ್ಟನೆ ನೀಡಿದ್ದಾರೆ.
ಬಿಜೆಪಿ ಈ ಹಗರಣದ ಬಗ್ಗೆ ಗಂಭೀರ ತನಿಖೆ ನಡೆಯಬೇಕು, ಮುಖ್ಯಮಂತ್ರಿ ಕಚೇರಿಯಿಂದ ಆರೋಪಿಗಳ ರಕ್ಷಣೆಗೆ ಬಂದಿರುವ ಕರೆ ಬಗ್ಗೆ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದರೆ, ಕಾಂಗ್ರೆಸ್ ಈ ಕಳ್ಳಸಾಗಣೆ ಬಗ್ಗೆ ಸಿಬಿಐ ತನಿಖೆ ನಡೆಯಬೇಕೆಂದು ಆಗ್ರಹಿಸಿದೆ.
ಕೇರಳದಲ್ಲಿ ಈ ಹಿಂದೆ ಸರಿತಾ ನಾಯರ್ ಹಗರಣ, ಲಾವ್ಲಿನ್ ಹಗರಣಗಳಂತಹ ಕುಖ್ಯಾತ ಹಗರಣಗಳ ಸಾಲಿಗೆ ಈ ಭಾರೀ ಕಳ್ಳಸಾಗಣೆ ಜಾಲ ಪ್ರಕರಣವೂ ಸೇರುವ ಸಾಧ್ಯತೆ ಇದೆಯಾ ಎಂಬುದೀಗ ಕೇರಳದಾದ್ಯಂತ ನಡೆಯುತ್ತಿರುವ ಚರ್ಚೆಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss