Sunday, August 14, 2022

Latest Posts

ಭಾರೀ ಮಳೆಗೆ ಬ್ರಹ್ಮಾವರದಲ್ಲಿ ಮೂರು ಮನೆಗಳಿಗೆ ಹಾನಿ: ಸೂರಿಲ್ಲದೇ ಅತಂತ್ರವಾಗಿದೆ ಬದುಕು!

ಉಡುಪಿ: ಜಿಲ್ಲೆಯಲ್ಲಿ ಸೋಮವಾರ ಸುರಿದ ಮಳೆಗೆ ಬ್ರಹ್ಮಾವರ ತಾಲೂಕುಗಳಲ್ಲಿ ಮೂರು ಮನೆಗಳು ಕುಸಿದು ಸಂಪೂರ್ಣ ಹಾನಿಗೊಳಗಾಗಿವೆ. ಇದರಿಂದ ಮೂರು ಕುಟುಂಬಗಳ ಸದಸ್ಯರು ವಾಸ್ತವ್ಯಕ್ಕೆ ಸ್ವಂತ ಸೂರಿಲ್ಲದೇ ಅತಂತ್ರರಾಗಿದ್ದಾರೆ.
ಹೆರಾಡಿ ಗ್ರಾಮದ ಆಶಾ ಗಾಣಿಗ ಅವರ ಮನೆ ಕುಸಿದು 3ಲಕ್ಷ ರೂ., ಪಾರಂಪಳ್ಳಿ ಗ್ರಾಮದ ದಯಾನಂದ ಅವರ ಮನೆ ಬಿದ್ದು 1ಲಕ್ಷ ರೂ. ಹಾಗೂ ನೀಲಾವರ ಗ್ರಾಮದ ಪ್ರೇಮ ಅವರ ಮನೆ ಸಂಪೂರ್ಣ ಹಾನಿಯಾಗಿ 1.5ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ. ಕುಂದಾಪುರ ತಾಲೂಕಿನ ಹಂಗಳೂರು ಗ್ರಾಮದ ಶೀನ ಅವರಮನೆಗೆ ಭಾಗಶಃ ಹಾನಿಯಾಗಿ 25ಸಾವಿರ ರೂ. ಹಾಗೂ ಬೈಂದೂರು ತಾಲೂಕು ಶಿರೂರು ಗ್ರಾಮದ ಮೋಹಿನಿ ಸಿ. ದೇವಾಡಿಗ ಅವರ ಮನೆ ಭಾಗಶಃ ಹಾನಿ ಸಂಭವಿಸಿ 50ಸಾವಿರ ರೂ. ನಷ್ಟ ಉಂಟಾಗಿದೆ. ಮನೆ ಹಾನಿಯಿಂದ ಒಟ್ಟು 6.25ಲಕ್ಷ ರೂ. ನಷ್ಟವಾಗಿದೆ.
ಬೆಳೆ ಹಾನಿಯಿಂದ 52ಸಾವಿರ ರೂ. ನಷ್ಟ
ವಿಪರೀತ ಗಾಳಿ ಮಳೆಗೆ ಹೆಬ್ರಿ ತಾಲೂಕಿನಲ್ಲಿ ಬೆಳೆ ಹಾನಿ ಉಂಟಾಗಿದೆ. ಇದರಿಂದ ಆರು ಕುಟುಂಬಗಳಿಗೆ ಒಟ್ಟು 52ಸಾವಿರ ರೂ. ನಷ್ಟ ಅಂದಾಜಿಸಲಾಗಿದೆ. ಮಡಾಮಕ್ಕಿ ಗ್ರಾಮದ ಕುಷ್ಟಪ್ಪ ಶೆಟ್ಟಿ, ಗುಂಡು ಪೂಜಾರಿ ಮತ್ತು ಜಲಜ ಕುಲಾಲ್ತಿ ಅವರಿಗೆ ತಲಾ 10ಸಾವಿರ ರೂ., ಸುರೇಂದ್ರ ಶೆಟ್ಟಿ ಅವರಿಗೆ 7ಸಾವಿರ ರೂ., ಗುಲಾಬಿ ಶೆಟ್ಟಿ ಅವರಿಗೆ 15ಸಾವಿರ ರೂ., ಸಾಕು ಪೂಜಾರ್ತಿ ಅವರಿಗೆ 12ಸಾವಿರ ರೂ. ನಷ್ಟವಾಗಿದೆ.
ಜಿಲ್ಲೆಯಲ್ಲಿ ಸರಾಸರಿ 64 ಮಿ.ಮೀ. ಮಳೆ
ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ 24 ತಾಸುಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 64 ಮಿ.ಮೀ. ಮಳೆಯಾಗಿದೆ. ಉಡುಪಿ ತಾಲೂಕಿನಲ್ಲಿ ಗರಿಷ್ಠ 82.6 ಮಿ.ಮೀ. ಮಳೆ ದಾಖಲಾಗಿದೆ. ಕುಂದಾಪುರ ತಾಲೂಕಿನಲ್ಲಿ 52.5 ಮಿ.ಮೀ. ಹಾಗೂ ಕಾರ್ಕಳ ತಾಲೂಕಿನಲ್ಲಿ 68 ಮಿ.ಮೀ. ಮಳೆ ಬಿದ್ದಿದೆ. ಇದೇ ಅವಧಿಯಲ್ಲಿ ಐರೋಡಿ ಗ್ರಾಮದಲ್ಲಿ ಅತ್ಯಧಿಕ 180 ಮಿ.ಮೀ. ಮಳೆಯಾಗಿದೆ. ಬೊಮ್ಮರಬೆಟ್ಟು ಗ್ರಾಮದಲ್ಲಿ 142 ಮಿ.ಮೀ., ಇನ್ನಂಜೆಯಲ್ಲಿ 135 ಮಿ.ಮೀ., ಹೆಗ್ಗುಂಜೆಯಲ್ಲಿ 133 ಮಿ.ಮೀ., ಬಳ್ಕೂರಿನಲ್ಲಿ 112 ಮಿ.ಮೀ., ಕೋಣಿ ಗ್ರಾಮದಲ್ಲಿ 103 ಮಿ.ಮೀ. ಮಳೆ ಸುರಿದಿದೆ.
ಜಿಲ್ಲೆಯಲ್ಲಿ ಮಂಗಳವಾರ ದಿನವಿಡೀ ಮೋಡ ಮತ್ತು ಬಿಸಿಲಿನ ವಾತಾವರಣವಿತ್ತು. ಆಗಾಗ್ಗೆ ಲಘುವಾದ ಮಳೆಯಾದರೆ, ಇನ್ನು ಕೆಲವೆಡೆ ತುಂತುರು ಮಳೆ ಬಿದ್ದಿದೆ. ಮಳೆಯ ಜೊತೆಗೆ ಬಲವಾಗಿ ಗಾಳಿ ಬೀಸುತ್ತಿತ್ತು. ಅರಬ್ಬಿ ಸಮುದ್ರದ ಅಬ್ಬರ ಕೊಂಚ ಕಡಿಮೆಯಾಗಿದ್ದರೂ ಕಡಲುಕೊರೆತ ಮುಂದುವರಿದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss