ಮುಂಬೈ: ಭಾರೀ ಮಳೆ ಕಾರಣದಿಂದಾಗಿ ಬಾಂಬೆ ಹೈಕೋರ್ಟ್ ವರ್ಚುಯಲ್ ಸೇರಿದಂತೆ ಎಲ್ಲಾ ವಿಚಾರಣೆಗಳನ್ನು ಬುಧವಾರ ರದ್ದು ಮಾಡಿದೆ.
ಇಂದು ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಮುಖ ಆರೋಪಿಗಳಾದ ರಿಯಾ ಚರ್ಕವರ್ತಿ ಹಾಗೂ ಸಹೋದರ ಶೋವಿಕ್ ಚರ್ಕವರ್ತಿಯ ಜಾಮೀನು ಅರ್ಜಿ ವಿಚಾರಣೆ ನಡೆಯಬೇಕಿದ್ದು, ಮಳೆಯ ಕಾರಣದಿಂದ ವಿಚಾರಣೆಗಳು ರದ್ದಾಗಿವೆ.
ಜೊತೆಗೆ ಕಂಗನಾ ರನೌತ್ ಮುಂಬೈ ಕಚೇರಿ ನೆಲಸಮ ಪ್ರಕರಣದ ವಿಚಾರಣೆ ಕೂಡ ಇತ್ತು. ಆದರೆ ಮಳೆಯಿಂದಾಗಿ ಎಲ್ಲ ವಿಚಾರಣೆಗಳನ್ನು ಮುಂದೂಡಲಾಗಿದೆ. ಪ್ರಕರಣ ಸಂಬಂಧಿತ ಪೀಠಗಳು ಗುರುವಾರ ವಿಚಾರಣೆ ನಡೆಸುವಂತೆ ಬಾಂಬೆ ಹೈಕೋರ್ಟ್ ಹೇಳಿದೆ.