Wednesday, August 10, 2022

Latest Posts

ಭಾರೀ ಮಳೆ: ಯಗಚಿ ಜಲಾಶಯ ಭತಿ೯

ಹಾಸನ : ಜಿಲ್ಲೆಯಲ್ಲಿ ಭಾರೀ ಮಳೆ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು,ಜಿಲ್ಲೆಯ ಜಲಾಶಯಗಳಲ್ಲಿ ಒಂದಾದ ಬೇಲೂರಿನ ಯಗಚಿ ಜಲಾಶಯ ಭರ್ತಿಯಾಗಿದೆ.

ಚಿಕ್ಕಮಗಳೂರು ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನಲೆ ಜಲಾಶಯದ ಒಳ ಹರಿವು ಹೆಚ್ಚುತ್ತಿದೆ. ಹಾಗಾಗೀ ಮುಂಜಾಗ್ರತಾ ಕ್ರಮವಾಗಿ ಜಲಾಶಯದ ನಾಲ್ಕು‌ ಕ್ರಸ್ಟ್ ಗೇಟ್ ಮೂಲಕ 1500 ಕ್ಯೂಸೆಕ್ಟ್ ನೀರು ಹೊರಕ್ಕೆ ಹರಿಸಲಾಗುತ್ತಿದೆ.
ಚಿಕ್ಕಮಗಳೂರು, ಮೂಡಿಗೆರೆ, ಬೇಲೂರು ತಾಲೂಕಿನಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ 1700 ಕ್ಕೂ ಅಧಿಕ ಕ್ಯೂಸೆಕ್ಸ್ ಒಳಹರಿವು ಇದೆ.

ಜಲಾಶಯದ ಗರಿಷ್ಟ ಮಟ್ಟ – 964.60 ಅಡಿಗಳಾಗಿದ್ದು, ಇಂದಿನ ಮಟ್ಟ – 964.40 ಅಡಿ ಇದೆ. ಮುನ್ನೆಚರಿಕೆ ಕ್ರಮವಾಗಿ
ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರಲು ಜಿಲ್ಲಾಡಳಿತ ಸೂಚನೆ ಹೊರಡಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss