ಹೊಸದಿಗಂತ ಆನ್ ಲೈನ್ ಡೆಸ್ಕ್:
ಹಿಮದ ಹೊದಿಕೆಯನ್ನು ಹಾಸಿಕೊಂಡಿರುವ ಪವಿತ್ರ ಕೇದಾರನಾಧ ದೇವಾಲಯವನ್ನು ಇಂದು ಮುಚ್ಚಲಾಯಿತು.
ಚಳಿಗಾಲ ಆರಂಭವಾಗುತ್ತಿದ್ದಂತೆ ಹಿಮಾಲಯದ ತಪ್ಪಲಲ್ಲಿರುವ ಕೇದಾರನಾಥ ದೇವಾಲಯವು ಹಿಮದಿಂದ ಆವೃತ್ತವಾಗಿದ್ದು, ಇಂದು ಬೆಳಗ್ಗೆ 8:30ಕ್ಕೆ ಶಿವನಿಗೆ ವಿಶೇಷ ಪೂಜೆ ಸಲ್ಲಸಿ ದೇವಾಲಯದ ಬಾಗಿಲು ಮುಚ್ಚಲಾಯಿತು.
ಉತ್ತಕಾಶಿ,ರುದ್ರಪ್ರಯಾಗ್,ಚಮೋಲಿ,ಬಾಗೇಶ್ವರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹಿಮಪಾತವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ವೇಳೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉತ್ತರಖಂಡ್ ನ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಹಿಮದಲ್ಲಿ ನಡೆದು ಬಂದು ಪೂಜೆಯಲ್ಲಿ ಭಾಗಿಯಾಗಿದ್ದರು.
#WATCH Uttarakhand: CM Trivendra Singh Rawat & UP CM Yogi Adityanath today participated in the portal closing ceremony of Kedarnath temple amidst heavy snowfall.
Visuals of UP CM & Uttarakhand CM departing from snow-clad Kedarnath temple premises after the closing day ceremony. pic.twitter.com/Bc5EaCwvxh
— ANI (@ANI) November 16, 2020