ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಭಾರಿ ಮಳೆಯಿಂದಾಗಿ ಇಂಡೊನೇಷ್ಯಾದ ಸುಮೆದಾಂಗ್ ಜಿಲ್ಲೆಯ ಸಿಂಚಾನುಜುಂಗ್ ಗ್ರಾಮದಲ್ಲಿ ಭಾನುವಾರ ಭೂಕುಸಿತ ಸಂಭವಿಸಿದ್ದು, 13 ಜನರು ಮೃತಪಟ್ಟಿದ್ದು, 29 ಜನರಿಗೆ ಗಾಯವಾಗಿದೆ.
ಭೀಕರ ಭೂ ಕುಸಿತದಲ್ಲಿ ನಾಪತ್ತೆಯಾಗಿರುವ 26 ಮಂದಿಗಾಗಿ ಶೋಧಕಾರ್ಯ ಮುಂದುವರೆದಿದೆ. ಮಳೆಯಿಂದಾಗಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಂದರೆ ಉಂಟಾಗುತ್ತಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿರ್ವಹಣಾ ಸಂಸ್ಥೆಯ ವಕ್ತಾರ ರಾದಿತ್ಯ ಜಾತಿ ಅವರು ಮಂಗಳವಾರ ತಿಳಿಸಿದ್ದಾರೆ.