Sunday, August 14, 2022

Latest Posts

ಭೀಕರ ರಸ್ತೆ ಅಪಘಾತ: ಸ್ಥಳದಲ್ಲಿಯೇ ಇಬ್ಬರ ದುರ್ಮರಣ

ಹೊಸ ದಿಗಂತ ವರದಿ, ಬಸವಕಲ್ಯಾಣ:

ಸಸ್ತಾಪೂರ ಬಂಗ್ಲಾ ಮತ್ತು ಇಲ್ಹಾಳ ನಡುವೆ ಮಂಗಳವಾರ ರಾತ್ರಿ ನಡೆದ ದ್ವಿಚಕ್ರ ಅಪಘಾತದಲ್ಲಿ ಸ್ಥಳದಲ್ಲಿಯೇ ಇಬ್ಬರು ಮರಣ ಹೊಂದಿದ್ದಾರೆ. ರವಿ ಶಿವಪ್ಪ ಸುತಾರ್ (37) ಮತ್ತು ಅಂಬಾದಾಸ ತಿಪ್ಪಣ್ಣ ಸುತಾರ್ (27) ಸ್ಥಳದಲ್ಲಿಯೇ ಮೃತಪಟ್ಟವರು. ಇನೋರ್ವ ತಮ್ಮನಾದ ತುಳಸಿ ತಿಪ್ಪಣ್ಣ ಸುತಾರ್ (25) ಗಂಭೀರ ಗಾಯಗೊಂಡಿದ್ದು ಬಸವಕಲ್ಯಾಣ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೀದರನ ಬೀಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ಘಟನೆಯ ವಿವರ
ಚಿಕ್ಕಪ್ಪ ರವಿ ಶಿವಪ್ಪಾ ತನ್ನ ಸಹೋದರ ಮಕ್ಕಳಾದ ಅಂಬಾದಾಸ ಮತ್ತು ತುಳಸಿ ಇವರ ಜೊತೆ ಬುಧವಾರ ರಾತ್ರಿ ಸಸ್ತಾಪೂರ ಬಂಗ್ಲಾದಿಂದ ಸ್ವಗ್ರಾಮ ಗುಂಡೂರಕ್ಕೆ ತೆರಳುವ ಸಮಯದಲ್ಲಿ ಅತಿ ವೇಗವಾಗಿ ಚಲಾಯಿಸುತ್ತಿದ್ದ ಬೈಕ್ ಕತ್ತಲಿನಲ್ಲಿ ತಿರುವು ಕಾಣದ ಕಾರಣ ವಿದ್ಯುತ ಕಂಬಕ್ಕೆ ರಭಸವಾಗಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರ ಸ್ಥಳದಲ್ಲಿ ಮೃತಹೊಂದಿದ್ದಾರೆ. ತುಳಸಿಯೊಂಬವನು ಗಂಭಿರವಾಗಿ ಗಾಯಗೊಂಡಿರುತ್ತಾರೆ. ಸ್ಥಳಕ್ಕೆ ಮಂಠಾಳ ವೃತ್ತ ಸಿಪಿಐ ನ್ಯಾನುಗೌಡಾ ಪಾಟೀಲ ನಗರ ಠಾಣೆ ಪಿಎಸ್‍ಐ ಗುರುಪಾಟೀಲ ಹಾಗೂ ಸಿಬ್ಬಂದ್ಧಿ ಭೇಟಿ ನೀಡಿ ಪರಿಶೀಲಿಸಿದರು ಹಾಗೂ ಬಸವಕಲ್ಯಾಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss