ಯಾದಗಿರಿ: ಕಲಬುರ್ಗಿ, ಬಾಗಲಕೋಟೆ, ಬೀದರ್, ಯಾದಗಿರಿಯಲ್ಲಿ ಕಳೆದ ನಾಲ್ಕುದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ನದಿಗಳು ಉಕ್ಕಿ ಹರಿಯುತ್ತಿದೆ. ಇದರಿಂದ ಭೀಮಾನದಿ ಸೇರಿದಂತೆ ಹಲವು ನದಿ, ಹಳ್ಳ-ಕೊಳ್ಳಗಳು ಉಕ್ಕಿಹರಿಯುತ್ತಿದೆ. ಸೊನ್ನ ಬ್ಯಾರೇಜಿನಿಂದ 1 ಲಕ್ಷಕ್ಕೂ ಹೆಚ್ಚು ಕ್ಯೂಸೆಕ ನೀರು ನದಿಗೆ ಬಟ್ಟ ಪ್ರಯುಕ್ತ ಗುರುಸಣಗಿ ಬ್ರಿಡ್ಜ್ ಕಂ ಬ್ಯಾರೇಜ್ ನೀರಿನ ಸಂಗ್ರಹ ಸಾಮರ್ಥ್ಯ ತುಂಬಿದೆ.
ಮಹಾರಾಷ್ಟ್ರದಲ್ಲಿ ಸತತ ಮಳೆ ಬೀಳುತ್ತದ್ದರಿಂದ ಉಜನೀಯ ಜಲಾಸಯದಲ್ಲಿ ಹೆಚ್ಚುವರಿ ನೀರನ್ನು ನದಿಗೆ ಬಿಡಲಾಗಿದೆ.
ಅದೇ ರೀತಿ ಬೀದರ ಮತ್ತು ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚಿದ ಮಳೆಯಿಂದ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಹೋಗಾಗಿ ಕಾಗಿನಾ ನದಿ ತುಂಬಿ ಹರಿಯುತ್ತಿದ್ದು ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡದ ಉತ್ತರಾದಿ ಮಠ ಪೂರ್ಣ ಜಲಾವೃತ್ತಗೊಂಡಿದೆ. ಅಲ್ಲಿರುವ ಜಯತೀರ್ಥರ ವೃಂದಾವನ ಸಹ ಮುಳುಗಡೆಯಾಗಿದೆ. ಅಲ್ಲಿರುವ ವ್ಯವಸ್ಥಾಪಕರನ್ನು, ಆರ್ಚಕರನ್ನು ಮತ್ತು ಶಿಷ್ಯವೃಮದದವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಆ ನದಿಯ ನೀರು ಭೀಮೆಗೆ ಬಂದು ಸೇರುವುದರಿಂದ ಭೀಮಾ ನದಿಯಲ್ಲಿ ಪ್ರವಾಹ ಹೆಚ್ಚಾಗಿದ್ದು, ಸನ್ನತಿ ಬ್ಯಾರೇಜು ಸೇರಿಂದಂತೆ ಯಾದಗಿರಿ ಜಲಾಸಯ ಸಹ ತುಂಬಿ ಹೋಗಿದ್ದು ಹೆಚ್ಚಿನ ಪ್ರಮಾಣದ ನೀರು ನದಿಗೆ ಬಿಡಲಾಗುತ್ತಿದೆ. ಇದರಿಂದಾಗಿ ಬ್ಯಾರೇಜ ಕೆಲಗಡೆ ಇರುವ ಕಂಗಳೇಶ್ವರ ಮತ್ತುಉ ವೀರಾಂಜನೆಯ ದೇವಸ್ಥಾನಗಳನ್ನು ಸಂಪುರ್ಣ ಜಲಾವೃತಗೋಂಡಿವೆ.
ಜಿಲ್ಲೆಯಲ್ಲಿ ಸತತ ಮಳೆ ಸುರಿಯುತ್ತಿರುವುದರಿಂದ ಹತ್ತಿ ಮತ್ತು ತೊಗರಿ ಬೆಲೆಯ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈಗಾಗಲೇ ಹತ್ತು ಹೂ ಕಾಯಿ ಬಿಡುತ್ತಿದ್ದು, ಮಳೆಯಿಂದ ಕೊಳೆತು ಹೋಗುತ್ತಿದ್ದು ರೈತರನ್ನು ಚೀಂತೆಗೆ ಈಡುಮಾಡಿದೆ.
ನದಿ ಪಾತ್ರಕ್ಕೆ ತೆರಳದಂತೆ ಸೂಚನೆ :
ಭೀಮಾ ನದಿಗೆ ಕಾಗಿಣಾದಿಂದ 60ಸಾವಿರ ಕ್ಯೂಸೆಕ್ ಹಾಗೂ ಸೊನ್ನ ಬ್ಯಾರೆಜ್ ನಿಂದ ಸುಮಾರು 1,05,000 ಕ್ಯೂಸೆಕ್ ನೀರು ಬಿಡುವ ಹಿನ್ನೆಲೆಯಲ್ಲಿ ನದೀ ಪಾತ್ರದ ಗ್ರಾಮಗಳ ಜನರು ಸುರಕ್ಷತೆಯ ದೃಷ್ಟಿಯಿಂದ ಸ್ಥಳಕ್ಕೆ ಹೋಗಬಾರದು ಎಂದು ಜಿಲ್ಲಾಡಳಿತ ತಿಳಿಸಿದೆ.
ಅಲ್ಲದೇ ಜನ ಜಾನುವಾರುಗಳಿಗೆ ನದಿ ಪಾತ್ರದಲ್ಲಿ ಯಾವುದೇ ಚಟುವಟಿಕೆ ಮಾಡದಂತೆ ನಿರ್ಭಂದಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದ್ದು, ಯಾವುದೇ ತುರ್ತು ಸಂದರ್ಭದಲ್ಲಿ 08473-253950 ಸಂಖ್ಯೆಗ ಕರೆ ಮಾಡಬಹುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.