Monday, August 15, 2022

Latest Posts

ಭೀಮಾ ಪ್ರವಾಹಕ್ಕೆ ಒಳಗಾದ ಜಿಲ್ಲೆಗಳಿಗೆ 60 ಕೋಟಿ ಪರಿಹಾರ

ಯಾದಗಿರಿ : ಭೀಮಾ ಪ್ರವಾಹಕ್ಕೆ ಒಳಗಾದ ಯಾದಗಿರಿ, ರಾಯಚೀರು, ವಿಜಯಪೂರ, ಕಲಬುರಗಿ ಹಾಗೂ ಬೀದರ ಜಿಲ್ಲೆಗಳೊಗೆ ರಾಜ್ಯ ಸರಕಾರ 60 ಕೋಟಿ ರೂಗಳನ್ನು ಬಿಡುಗಡೆ ಮಾಡಿದೆ.
ಬುಧವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಭೀಮಾ ನದಿಯ ಪ್ರವಾಹಕ್ಕೆ ಒಳಗಾದ ಜಿಲ್ಲೆಗಳಿಗೆ ವೈಮಾನಿಕ ಸಮೀಕ್ಷೆ ನಡೆಸಿ ಹನಿಯ ಬಗ್ಗೆ ಮಾಹಿತಿಯನ್ನು ಸಂಗ್ರಹಿಸದ್ದರು. ಗುರುವಾರದಂದು ಈ ಜಿಲ್ಲೆಗಳಿಗೆ ಸರಕಾರ ಪ್ರಹಾರ ಪ್ರಕಟಿಸಿದ್ದಾರೆ.
ವಿಜಯಪುರ ಜಿಲ್ಲೆಗ 10 ಕೋಟಿ, ಬೀದರ ಜಿಲ್ಲೆಗ 10, ಕಲಬುರಗಿ ಜಿಲ್ಲೆಗೆ 20, ಯಾದಗಿರಿ ಜಿಲ್ಲೆಗೆ 12 ಹಾಗೂ ರಾಯಚೂರು ಜಿಲ್ಲೆಗೆ 2 ಕೋಟಿ ಪರಿಹಾರವನ್ನು ಬಿಡುಗಡೆ ಮಾಡಲಾಗಿದೆ.
ಮುಖ್ಯಮಂತ್ರಿಗಳು 16.10.2020 ರಂದು ಜಿಲ್ಲಾಧಿಕಾರಿಗಳ ಜೊತೆಗೆ ವಿಡಿಯೂ ಸಂವಾದ ಮಾಡಿ ಪ್ರವಾದಹದ ಪರಸ್ಥಿಯ ಬಗ್ಗೆ ವರದಿ ಸಂಗ್ರಹಿಸಿದ್ದರು. ಇನ್ನೂ ಬುಧವಾರ ವೈಮಾನಿಕ ಸಮೀಕ್ಷೆ ನಡೆಸಿದ ಅವರು ಚುನಾವಣೆ ನೀತಿ ಸಂಹಿತಿಯ ಹಿನ್ನಲೆಯಲ್ಲಿ ಯಾವುದೆ ಘೋಷಣೆ ಮಾಡುವುದಿಲ್ಲ ಎಂದು ಸುದ್ದಿಗಾರರಿಗೆ ತಿಳಿಸಿದ್ದರು. ಗುರುವಾರದಂದು ಜಿಲ್ಲೆಯ ಸಂತ್ರಸ್ತರ ಪರಿಹಾರಕ್ಕಾಗಿ 60 ಕೋಟಿ ರೂಗಳನ ಪರಿಹಾರವನ್ನು ಘೋಷಣೆ ಮಾಡಿದ್ದಾರೆ.
ಭೀಮ ಪ್ರವಾಹಕ್ಕೆ ಒಳಗಾದ 130 ಗ್ರಾಮಗಳ 43158 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿತ್ತು. ಇದರ ಜೊತೆಗೆ ಪ್ರವಾಹದ ಸುಳಿಗೆ ಸಿಕ್ಕ 5013 ಜನರನ್ನು ಪಾರು ಮಾಡಲಾಗಿದೆ ಎಂದು ಸರಕಾರ ತಿಳಿಸಿದೆ. 5 ಜಿಲ್ಲೆಗಳ14 ತಾಲೂಕುಗಳ 247 ಗ್ರಾಮಗಳು ಪ್ರವಾಹಕ್ಕೆ ಒಳಗಾಗುತ್ತವೆ ಎಂದು ಗುರತಿಸಲಾಗಿತ್ತು.
ವಿಯಯಪುರ ಜಿಲ್ಲೆಯ ಇಂಡಿ, ಚಡಚಣ, ಹಾಗೂ ಸಿಂದಗಿ, ಕಲಬುರಗಿ ಜಿಲ್ಲೆಯ ಅಫಜಲಪೂರ, ಜೇವಗಿ, ಸೇಡಂ, ಶಹಾಬಾದ ಮತ್ತು ಚಿತ್ತಾಪೂರ, ಯಾದಗಿರಿ ಜಿಲ್ಲೆಯ ಯಾದಗಿರಿ, ಶಹಪುರ ಮತ್ತು ವಡಗೇರಾ ಹಾಗೂ ರಾಯಚೂರು ಜಿಲ್ಲೆಯ ರಾಯಚೂರು ತಾಲೂಕು ಮಾತ್ರ ಪ್ರವಹಕ್ಕೆ ಒಳಗಾಗಿದೆ ಎಂದು ತಿಳಿಸಿದೆ.
ಭೀಮಾ ಪ್ರವಾಹದಿಂದ ಕಲ್ಯಾಣ ಕರ್ನಾಟಕದ ಜನರು ತತ್ತರಿಸಿಹೋಗಿದ್ದರು. ಅವರಿಗೆ ಸರಕಾರ ಪರಿಹಾರ ಒದಗಿಸಿದ್ದು, ಅಧಿಕಾರಿಗಳು ಕೂಡಲೆ ಅವರಿಗೆ ಒದಗಿಸಿ ಸಂತ್ರಸ್ತರ ಬದಕನ್ನು ಹಸನ ಮಾಡಬೇಕಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss