Saturday, July 2, 2022

Latest Posts

ಭೂಮಿಯ ಮೇಲಿನ ಆಸೆಯಿಂದ ಮಾನವೀಯತೆ ಮರೆತ ದುಷ್ಕರ್ಮಿಗಳು: ಅರ್ಚಕನನ್ನು ಜೀವಂತವಾಗಿ ಸುಟ್ಟು ಕೊಲೆ

ಜೈಪುರ: ರಾಜಸ್ಥಾನದ ಕರೌಲಿ ಜಿಲ್ಲೆಯಲ್ಲಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ದೇವಸ್ಥಾನದ ಅರ್ಚಕರೊಬ್ಬರನ್ನ ಜೀವಂತವಾಗಿ ಸುಟ್ಟು ಕೊಲೆ ಮಾಡಲಾಗಿದೆ.
ಭೂಮಿಯ ಮೇಲಿನ ಆಸೆಯಿಂದ ಮಾನವೀಯತೆ ಮರೆತ ದುಷ್ಕರ್ಮಿಗಳು, ತಡರಾತ್ರಿ ಅರ್ಚಕರ ಮೇಲೆ ದಾಳಿ ನಡೆಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ.
ಕರೌಲಿ ಜಿಲ್ಲೆಯ ಗ್ರಾಮವೊಂದರರಲ್ಲಿ ಬಾಬುಲಾಲ್ ಎನ್ನುವ ಅರ್ಚಕ ಅಲ್ಲಿನ ರಾಧಾ ಕೃಷ್ಣ ದೇವಾಲಯದ ಟ್ರಸ್ಟ್ ಗೆ ಸೇರಿದ ಸುಮಾರು 5.2 ಎಕರೆ ಭೂಮಿಯನ್ನ ಹೊಂದಿದ್ದರು. ಈ ಭೂಮಿಯನ್ನು ಅರ್ಚಕರಿಗೆ ಪ್ರಮುಖ ಆದಾಯದ ಮೂಲವಾಗಿ ನೀಡಲಾಗಿತ್ತು. ಇದು ದೇವಾಲಯದ ಟ್ರಸ್ಟ್ ಗೆ ಸೇರಿದ ಭೂಮಿಯಾಗಿದ್ರು ಕೂಡ ಉಸ್ತುವಾರಿಯನ್ನ ಈ ಅರ್ಚಕರಿಗೆ ನೀಡಲಾಗಿತ್ತು.
ಆದರೆ ಈ ಭೂಮಿಯ ಮೇಲೆ ಕಣ್ಣಿಟ್ಟಿದ್ದ ಗುಂಪೊಂದು ವಿವಾದವನ್ನ ಸೃಷ್ಟಿ ಮಾಡಿ ಅರ್ಚಕ ಬಾಬುಲಾಲ್ ಹೊಂದಿದ್ದ ಜಮೀನು ತಮ್ಮದೆಂದು ಗಲಾಟೆ ಮಾಡಿತ್ತು. ತಡರಾತ್ರಿಯಾಗುವುದನ್ನೇ ಕಾದು ಕುಳಿತ ದುಷ್ಕರ್ಮಿಗಳು ಅರ್ಚಕರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದ್ದಾರೆ.
ತೀವ್ರ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಅರ್ಚಕರನ್ನ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅರ್ಚಕರು ಸಾವನ್ನಪ್ಪಿದ್ದರು.
ಇನ್ನು ಈ ಸಂಬಂಧ ಓರ್ವನನ್ನು ಬಂಧಿಸಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ .
ಆದರೆ ಪೊಲೀಸ್ ತನಿಖೆಗೆ ಅಸಮಾಧಾನ ವ್ಯಕ್ತಪಡಿಸಿರುವ ಅರ್ಚಕನ ಕುಟುಂಬಸ್ಥರು, ಕೇವಲ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು ಬೆಂಕಿ ಹಚ್ಚಿದ ಕೈಲಾಶ್ ಮೀನಾ ಪುತ್ರರನ್ನೂ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ರಾಜಸ್ಥಾನದಲ್ಲಿ ಆಕ್ರೋಶ
ಇನ್ನು ಅರ್ಚಕನ ಹತ್ಯೆ ವಿಚಾರವಾಗಿ ರಾಜಸ್ಥಾನದಲ್ಲಿ ಆಕ್ರೋಶ ಭುಗಿಲೆದ್ದಿದ್ದು, ಪ್ರತಿಪಕ್ಷ ಬಿಜೆಪಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಅರ್ಚಕನ ಹತ್ಯೆಗೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೇ ಈ ಕುರಿತು ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ತಪ್ಪಿತಸ್ಥರನ್ನು ಕಾನೂನಿನಡಿ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಕರೌಲಿಯಲ್ಲಿ ನಡೆದ ಅರ್ಚಕನ ಹತ್ಯೆಯನ್ನು ತೀವ್ರವಾಗಿ ಖಂಡಿಸುವುದಾಗಿ ಹೇಳಿರುವ ಅಶೋಕ್ ಗೆಹ್ಲೋಟ್, ತಪ್ಪಿತಸ್ಥರು ಯಾರೇ ಆಗಿದ್ದರೂ ಶಿಕ್ಷೆ ಖಚಿತ ಎಂದು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss