Monday, August 15, 2022

Latest Posts

ಭೂವರಹನಾಥಸ್ವಾಮಿಗೆ ಮಹಾಭಿಷೇಕ: ಕಣ್ತುಂಬಿಕೊಂಡು ಪುನೀತರಾದ ಭಕ್ತರು!

ಕೆ.ಆರ್. ಪೇಟೆ : ಭೂವೈಕುಂಠ ಎಂದೇ ಪ್ರಖ್ಯಾತವಾಗಿರುವ ಕೃಷ್ಣರಾಜಪೇಟೆ ತಾಲ್ಲೂಕಿನ ಬೂಕನಕೆರೆ ಹೋಬಳಿಯ ವರಹನಾಥಕಲ್ಲಹಳ್ಳಿಯಲ್ಲಿ ಭೂವರಹನಾಥಸ್ವಾಮಿಯ ಜನ್ಮದಿನವಾದ ಇಂದು ರೇವತಿ ನಕ್ಷತ್ರದ ಅಂಗವಾಗಿ ಭೂದೇವಿಸಮೇತವಾಗಿ
ನೆಲೆ ನಿಂತು ಆಶೀರ್ವದಿಸುತ್ತಿರುವ ವರಹನಾಥಸ್ವಾಮಿಗೆ ಅಭಿಷೇಕ, ಪುಷ್ಪಾಭಿಷೇಕ ಹಾಗೂ ವಿಶೇಷ ಪೂಜೆ ಪುರಸ್ಕಾರಗಳು ಅದ್ದೂರಿಯಾಗಿ ನಡೆದವು.
ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತಾದಿಗಳು ಈ ಅಪರೂಪದ ಕ್ಷಣವನ್ನು ಕಣ್ತುಂಬಿಕೊಂಡರು. 17ಅಡಿ ಎತ್ತರದ ದೇಶದಲ್ಲಿಯೇ ಅಪರೂಪದ್ದಾಗಿರುವ ಸಾಲಿಗ್ರಾಮ ಕೃಷ್ಣಶಿಲೆಯಲ್ಲಿ ನಿರ್ಮಿಸಿರುವ ಭವ್ಯ ನಯನ ಮನೋಹರವಾದ ವರಹನಾಥಸ್ವಾಮಿಯ ಆಳೆತ್ತರದ ವಿಗ್ರಹವು ಕಣ್ಮನಗಳನ್ನು ಸೆಳೆಯುತ್ತದೆ. ಸ್ವಾಮಿಯ ದರ್ಶನ ಮಾಡುತ್ತಿದ್ದಂತೆ ಧನ್ಯತಾ ಮನೋಭಾವನೆಯು ಮೂಡುತ್ತದೆ.
1ಸಾವಿರ ಲೀಟರ್ ಹಾಲು, 500ಲೀಟರ್ ಎಳನೀರು, 500ಲೀಟರ್ ಕಬ್ಬಿನ ಹಾಲು, ಪವಿತ್ರ ಗಂಗಾಜಲ, ಶ್ರೀಗಂಧ, ಜೇನುತುಪ್ಪ, ಅರಿಶಿನ ದಿಂದ ಅಭಿಷೇಕ ಮಾಡಿ, ಮಲ್ಲೆ, ಜಾಜಿ, ಮಲ್ಲಿಗೆ, ಗುಲಾಬಿ, ಸಂಪಿಗೆ, ಪವಿತ್ರ ಪತ್ರೆಗಳು, ತುಳಸಿ, ಕನಕಾಂಬರ, ಲಿಲ್ಲಿ , ಸೇವಂತಿಗೆ, ಕಮಲ ಸೇರಿದಂತೆ 58 ಬಗೆಯ ವಿವಿಧ ಅಪರೂಪದ ಹೂವುಗಳಿಂದ ಪುಷ್ಪಾಭಿಷೇಕ ಮಾಡಲಾಯಿತು.
ಮೈಸೂರಿನ ಬ್ರಹ್ಮತಂತ್ರ ಸ್ವತಂತ್ರ ಪರಕಾಲಸ್ವಾಮಿ ಮಠದ ಪೂಜ್ಯ ಸ್ವಾಮೀಜಿಗಳು ವರಹನಾಥನಿಗೆ 11ಸುತ್ತು ಪ್ರದಕ್ಷಿಣೆ ಹಾಕಿ ಕೊರೋನಾ ಮಹಾಮಾರಿಯ ನಿರ್ಮೂಲನೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಭೂವರಹನಾಥ ಸ್ವಾಮಿ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ನ ನಿರ್ದೇಶಕರಾದ ಶ್ರೀನಿವಾಸರಾಘವನ್, ಗುರುಪ್ರಸಾದ್, ನಾಗೇಶರಾವ್ ರೇವತಿ ನಕ್ಷತ್ರದ ವಿಶೇಷ ಪೂಜಾ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.. ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು, ಭಕ್ತರ ಮುಖಕ್ಕೆ ಮಾಸ್ಕï ಧರಿಸಿ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.
ಭೂವ್ಯಾಜ್ಯಗಳ ಪರಿಹಾರಕ ಹಾಗೂ ಸ್ವಂತ ಮನೆಯನ್ನು ಹೊಂದಬೇಕೆಂಬ ಭಕ್ತರ ಕನಸನ್ನು ನನಸು ಮಾಡಿ ಆಶೀರ್ವದಿಸುತ್ತಿರುವ ಭೂವರಹನಾಥಸ್ವಾಮಿಯ ದರ್ಶನಕ್ಕೆ ಇಂದು ಶ್ರೀ ಕ್ಷೇತ್ರಕ್ಕೆ ಭಕ್ತಸಾಗರವೇ ಹರಿದು ಬಂದಿತ್ತು.
ಭಕ್ತರಿಗೆ ಪೊಂಗಲ್ , ಬಿಸಿಬೇಳೆಬಾತ್, ಅವರೆಕಾಳು ಉಪ್ಪಿಟ್ಟು, ಮೊಸರನ್ನ, ಸಜ್ಜಪ್ಪ ಹಾಗೂ ವಡೆಯ ಪ್ರಸಾದವನ್ನು ಉಚಿತವಾಗಿ ವಿತರಿಸಲಾಯಿತು. ವೇದಬ್ರಹ್ಮ ಶ್ರೀ ಗೋಪಾಲಕೃಷ್ಣ ಅವಧಾನಿಗಳು ಪೂಜಾವಿಧಿ ವಿಧಾನಗಳ ನೇತೃತ್ವವನ್ನು ವಹಿಸಿದ್ದರು. ಕೆ.ಆರ್.ಪೇಟೆ ಗ್ರಾಮಾಂತರ ಠಾಣೆಯ ಸಬï ಇನ್ಸಪೆಕ್ಟರ್ ಡಿ.ಲಕ್ಷ್ಮಣ್ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss