Wednesday, July 6, 2022

Latest Posts

ಮಂಗಳನ ಅಂಗಳದಿಂದ ಭೂಮಿಗೆ ಹಾರಿ ಬರಲಿವೆ ಅಂಗಾರಕನ ಕಲ್ಲುಗಳು!

ಹೊಸ ದಿಗಂತ ಆನ್‌ಲೈನ್ ಡೆಸ್ಕ್:

ಅಂತರಿಕ್ಷದಲ್ಲಿ ನಾಸಾ ಮತ್ತೊಂದು ಪರಾಕ್ರಮ ತೋರಲಿದ್ದು, ಎಲ್ಲವೂ ಅಂದುಕೊಂಡತೆಯೇ ನಡೆದರೆ 2030ರ ವೇಳೆಗೆ ಭೂಮಿಗೆ ಮಂಗಳನ ಮೇಲ್ಮೈನಿಂದ ಶಿಲಾಮಾದರಿ ಭೂಮಿಗೆ ಆಗಮಿಸಲಿದೆ.

ಮಾರ್ಸ್ ಸ್ಯಾಂಪಲ್ ರಿಟರ್ನ್ (ಎಂಎಸ್‌ಆರ್)  ಯೋಜನೆಯಲ್ಲಿ ನಾಸಾ ಈ ಪರ್‍ಯತ್ನ ನಡೆಸುತ್ತಿದ್ದು, ಇದಕ್ಕಾಗಿ ನಾಸಾ ಈಗಾಗಲೇ ಪರ್ಸೆವರೆನ್ಸ್ ರೋವರ್ ಅನ್ನು ಮಂಗಳನತ್ತ ಹಾರಿಬಿಟ್ಟಿದೆ. ಜುಲೈನಲ್ಲಿ ನಭಕ್ಕೆ ಚಿಮ್ಮಿರುವ ಇದು, ಈಗಾಗಲೇ ತನ್ನ ಅರ್ಧ ಹಾದಿ ಕ್ರಮಿಸಿದೆ. 2021ರ ಫೆಬ್ರವರಿಯಲ್ಲಿ ಇದು ಮಂಗಳನ ಅಂಗಳದಲ್ಲಿ ಇಳಿಯಲಿದೆ.

ಅಲ್ಲಿ ಅದು ಕೋರಿಂಗ್ ಡ್ರಿಲ್, ಸ್ಯಾಂಪಲ್ ಟ್ಯೂಬ್ ಒಳಗೊಂಡ ರೋವರ್, ಕಲ್ಲುಗಳ ಮಾದರಿ ಮತ್ತು ಮೇಲ್‌ಪದರದ ಗಟ್ಟಿ ರಚನೆಗಳ ಮಾದರಿ ಸಂಗ್ರಹಿಸಲಿದೆ. ರೋವರ್‌ನ ಮಾರ್ಸ್ ಆಯಸೆಂಟ್ ವೆಹಿಕಲ್ ಈ ಮಾದರಿಗಳನ್ನು ಸಂಗ್ರಹಿಸಿ, ಸ್ಯಾಂಪಲ್ ಟ್ಯೂಬ್‌ನೊಳಗೆ ಸುರಕ್ಷಿತವಾಗಿರಿಸಲಿದೆ. ಬಳಿಕ ಅದು ಭೂಮಿಯತ್ತ ಪ್ರಯಾಣ ಬೆಳೆಸಲಿದೆ.

ಎಂಎಸ್‌ಆರ್‌ನ ಸ್ವತಂತ್ರ ವಿಮಶ್ಸಾ ಮಂಡಳಿ (ಐಆರ್‌ಬಿ), ಯೂರೋಪಿಯನ್ ಸ್ಪೇಸ್ ಏಜೆನ್ಸಿ (ಇಎಸ್‌ಎ) ಜತೆಗೂಡಿ ಕೈಗೊಂಡಿರುವ ಈ ಯೋಜನೆ ಯಶಸ್ವಿಯಾದರೆ, ಅನ್ಯಗ್ರಹದಿಂದ ಮಾದರಿ ಹೊತ್ತುತರುವ ಮೊದಲ ಮಿಷನ್ ಎಂಬ ಹೆಗ್ಗಳಿಗೆ ಇದು ಪಾತ್ರವಾಗಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss