ಮಂಗಳೂರು: ದುಬೈ, ಮುಂಬೈ ಮುಂತಾದೆಡೆಯಿದ ಮಂಗಳೂರಿಗೆ ಬರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇಂದು ಸಂಜೆ 3ನೆಯ ವಿಮಾನ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯಲಿದೆ.
ಮಸ್ಕತ್ ನಿಂದ ಏರ್ ಇಂಡಿಯಾ ಎಕ್ಸ್ ಪ್ರೆಸ್ IX817 ಮೂಲಕ ಒಟ್ಟು 176 ಮಂದಿ ಪ್ರಯಾಣಿಕರು ಹೊರಡಲಿದ್ದು, ಈ ಪೈಕಿ 113 ಮಂದಿ ಪ್ರಯಾಣಿಕರು ಬೆಂಗಳೂರಿನಲ್ಲಿ ಇಳಿಯಲಿದ್ದಾರೆ. ಉಳಿದ 63 ಪ್ರಯಾಣಿಕರನ್ನೊಳಗೊಂಡು ವಿಮಾನ ರಾತ್ರಿ ಮಂಗಳೂರಿಗೆ ಆಗಮಿಸಲಿದೆ.