ಹೊಸ ದಿಗಂತ ವರದಿ, ಮಂಗಳೂರು:
ಮಂಗಳೂರು ನಗರದಲ್ಲಿ ಶುಕ್ರವಾರ ಸಂಜೆ 7ರ ವೇಳೆಗೆ ಧಾರಾಕಾರ ಮಳೆ ಸುರಿದಿದೆ.
ಹಗಲಿನ ವೇಳೆ ಬಿಸಿಲಿನ ವಾತಾವರಣವಿತ್ತು. ಸಂಜೆ ಮೋಡ ಕವಿದ ವಾತಾವರಣ ಕಂಡುಬಂದಿದ್ದು, ಬಳಿಕ ಭಾರಿ ಮಳೆ ಸುರಿಯಿತು. ಮಳೆಯ ಜತೆಗೆ ಗಾಳಿ, ಗುಡುಗು, ಮಿಂಚು ಕಾಣಿಸಿಕೊಂಡಿದೆ. ದಿಢೀರ್ ಮಳೆಯಿಂದಾಗಿ ನಗರದಿಂದ ಹೊರವಲಯ, ಮನೆಗೆ ತೆರಳುವ ವಾಹನ ಸವಾರರು, ಪಾದಚಾರಿಗಳು ತೊಂದರೆ ಅನುಭವಿಸಿದರು.
ಕಳೆದ ಕೆಲ ದಿನಗಳಿಂದ ಬಿಸಿಲಿನ ಝಳಕ್ಕೆ ಬಸವಳಿದಿದ್ದ ಜನತೆಗೆ ಮಳೆ ತಂಪಿನ ಅನುಭವ ನೀಡಿತು. ನಗರದಲ್ಲಿ ಕೆಲ ದಿನಗಳಿಂದ ಹಗಲಿನ ವೇಳೆ ಉಷ್ಣಾಂಶದಲ್ಲಿ ಏರಿಕೆಯಾದರೆ, ರಾತ್ರಿ ವೇಳೆ ಕೊಂಚ ಚಳಿಯ ಅನುಭವವಾಗುತ್ತಿತ್ತು. ಇದೀಗ ಗುಡುಗು ಸಹಿತ ಮಳೆ ಸುರಿದಿದೆ. ರಾತ್ರಿವರೆಗೂ ಮಳೆ ಮುಂದುವರೆದಿದೆ.