ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, May 6, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮಂಗಳೂರಿನಲ್ಲಿ ನಿರ್ಮಾಣಗೊಂಡಿದೆ ರಾಜ್ಯದ ಮೊದಲ ಜನವಾಸದ ಪ್ಲಾಸ್ಟಿಕ್ ಮನೆ!

ಹೊಸ ದಿಗಂತ ವರದಿ, ಮಂಗಳೂರು:

ರಾಜ್ಯದ ಮೊದಲ ಜನವಾಸದ ಪ್ಲಾಸ್ಟಿಕ್ ಮನೆ ಮಂಗಳೂರಿನಲ್ಲಿ ನಿರ್ಮಾಣಗೊಂಡಿದೆ. ಪ್ಲಾಸ್ಟಿಕ್ ಫಾರ್ ಚೇಂಜ್ ಇಂಡಿಯಾ ಫೌಂಡೇಶನ್ ಪ್ಲಾಸ್ಟಿಕ್ ಚಿಂದಿ ಆಯುವ ಮಹಿಳೆಯೊಬ್ಬರಿಗೆ ನಗರದ ಹೊರವಲಯದ ಪಚ್ಚನಾಡಿಯಲ್ಲಿ ಈ ಮನೆಯನ್ನು ಉಚಿತವಾಗಿ ನಿರ್ಮಿಸಿ ಹಸ್ತಾಂತರಿಸಿದೆ. ಚಿಂದಿ ಆಯುವ ಮಹಿಳೆ ಕಮಲ ಈಗ ಮೊದಲ ಪ್ಲಾಸ್ಟಿಕ್ ಮನೆಯ ಒಡತಿ.
ಸುಮಾರು 350 ಚದರ ಅಡಿ ವಿಸ್ತೀರ್ಣದ ಆಶ್ರಯ ಮನೆ ಮಾದರಿಯ ಈ ಪ್ಲಾಸ್ಟಿಕ್ ಮನೆಗೆ 4.30 ಲಕ್ಷ ರೂ. ವೆಚ್ಚ ತಗಲಿದೆ. ಹೈದರಾಬಾದ್‌ನ ಬಂಬೂ ಹೌಸ್ ಕಂಪೆನಿ ಜತೆಗಿನ ಒಪ್ಪಂದ ಪ್ರಕಾರ ಅಗ್ನಿ, ಗಾಳಿ, ಮಳೆ ನಿರೋಧಕ ಪ್ಲಾಸ್ಟಿಕ್ ಮನೆಯನ್ನು ನಿರ್ಮಿಸಲಾಗಿದೆ. ಈ ಮನೆಯ ಬಾಳಿಕೆ 30 ವರ್ಷ ಎಂದು ಹೇಳಲಾಗಿದೆ.
ಖಾಸಗಿ ಬ್ರಾಂಡ್ ಕಂಪನಿಗಳ ಸಾಮಾಜಿಕ ನಿಧಿಯ ನೆರವು ಈ ಮನೆಗೆ ಲಭಿಸಿದೆ. ಸ್ಥಳೀಯ ನಿವಾಸಿ ಕಮಲ ಎಂಬವರಿಗೆ ಅವರದೇ 9 ಸೆಂಟ್ಸ್ ಜಾಗದಲ್ಲಿ 15 ದಿನಗಳ ಸೀಮಿತ ಅವಧಿಯಲ್ಲಿ ಈ ಮನೆ ನಿರ್ಮಾಣವಾಗಿದೆ. ಇದಕ್ಕೆ ಸುಮಾರು 1,500 ಕೇಜಿ ಪ್ಲಾಸ್ಟಿಕ್ ಬಳಕೆ ಮಾಡಲಾಗಿದೆ. ಕಿಚನ್, ಹಾಲ್, ಒಂದು ಕೋಣೆ, ಸ್ಟೋರ್ ರೂಂ ಹಾಗೂ ಬಾತ್‌ರೂಂನ್ನು ಇದು ಒಳಗೊಂಡಿದೆ. ಇದು ಟೆಂಟ್ ಮಾದರಿಯ ಮನೆಗಳನ್ನು ಹೋಲುವುದರಿಂದ ಈ ಮನೆಗೆ ಸ್ಥಳೀಯಾಡಳಿತದ ಪರವಾನಿಗೆಯೂ ಬೇಕಾಗಿಲ್ಲ ಎಂದು ಫೌಂಡೇಷನ್‌ನ ಕಾರ್ಯಕ್ರಮ ನಿರ್ದೇಶಕ ಚಂದನ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಳಸಿ ಎಸೆದ, ಅದರಲ್ಲೂ ಮಾರುಕಟ್ಟೆ ಇಲ್ಲದ ಚಾಕಲೇಟ್ ರ‍್ಯಾಪರ್, ಟೆಟ್ರಾಪ್ಯಾಕ್, ತಿಂಡಿತಿನಿಸುಗಳ ಪ್ಯಾಕೆಟ್‌ಗಳನ್ನು ಸಂಗ್ರಹಿಸಿ ಅದನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಮರು ಬಳಕೆ ಮಾಡಲಾಗಿದೆ. ಹೈದರಾಬಾದ್ ಕಂಪನಿಯು ಗುಜರಾತ್‌ನಲ್ಲಿ ಇಂತಹ ಪ್ಲಾಸ್ಟಿಕ್‌ಗಳನ್ನು ಸಂಸ್ಕರಿಸಿದ್ದು, ಮರು ಬಳಕೆಗೆ ಸಿದ್ಧಪಡಿಸಿದೆ. ಅಲ್ಲದೆ ಎಲ್ಲ ರೀತಿಯ ವೈಜ್ಞಾನಿಕ ಮಾನದಂಡಗಳನ್ನು ಪಾಲಿಸಲಾಗಿದೆ. ಆಧಾರಕ್ಕೆ ಕಬ್ಬಿಣ ಹಾಗೂ ತಳಮಟ್ಟಕ್ಕೆ ಮಾತ್ರ ಕಾಂಕ್ರಿಟ್ ಬಳಸಲಾಗಿದೆ. ಇದನ್ನು ಹೊರತುಪಡಿಸಿದರೆ ಕೇವಲ ಪ್ಲಾಸ್ಟಿಕ್ ಮಾತ್ರ ಬಳಸಲಾಗಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss