Tuesday, June 28, 2022

Latest Posts

ಮಂಗಳೂರಿನಲ್ಲಿ ಮತಾಂತರಕ್ಕೆ ಕುಮ್ಮಕ್ಕು: ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ಬಜರಂಗದಳ ಕಾರ್ಯಕರ್ತರು

ಹೊಸ ದಿಗಂತ ವರದಿ, ಮಂಗಳೂರು:

ಹಿಂದು ದೇವರುಗಳನ್ನು ಅವಹೇಳನ ಮಾಡಿರುವ ಬರಹ ಹಾಗೂ ಮತಾಂತರ ಸಂಬಂಧಿ ಪುಸ್ತಕಗಳನ್ನು ನಗರದ ಪಾಂಡೇಶ್ವರ ಬಳಿ ಮನೆ ಮನೆಗೆ ಹಂಚುತ್ತಿದ್ದ ವ್ಯಕ್ತಿಯೊಬ್ಬನನ್ನು ಬಜರಂಗದಳ ಕಾರ್ಯಕರ್ತರು ಹಿಡಿದು ಶುಕ್ರವಾರ ಮಧ್ಯಾಹ್ನ ಪೊಲೀಸರಿಗೆ ಒಪ್ಪಿಸಿದ್ದಾರೆ.
ಕೇರಳದ ಕೊಟ್ಟಾಯಂ ಮೂಲದ ರಾಜೇಯನ್ ಎಂಬ ವ್ಯಕ್ತಿ ಪಾಂಡೇಶ್ವರ ಪರಿಸರದಲ್ಲಿ ವ್ಯಕ್ತಿಮನೆಗಳ ಗೇಟ್, ಕಿಟಕಿಯಲ್ಲಿ ಪುಸ್ತಕಗಳನ್ನು ಇರಿಸಿ ತೆರಳುತ್ತಿದ್ದ. ಈ ಪುಸ್ತಕಗಳನ್ನು ಮನೆಯೊಂದರಲ್ಲಿ ಬಿಡಿಸಿ ನೋಡಿದಾಗ ಅದರಲ್ಲಿ ಹಿಂದು ದೇವರುಗಳನ್ನು ಅವಹೇಳನ ಮಾಡಿರುವುದು ಕಂಡುಬಂದಿದೆ. ಈ ಬಗ್ಗೆ ಸ್ಥಳೀಯರು ಬಜರಂಗದಳ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಸ್ಥಳಕ್ಕೆ ಆಗಮಿಸಿದ ಬಜರಂಗದಳ ಕಾರ್ಯಕರ್ತರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಇತ್ತೀಚೆಗೆ ಉಳ್ಳಾಲ ಪರಿಸರದಲ್ಲಿ ಮತಾಂತರ ಸಂಬಂಧಿ ಪುಸ್ತಕಗಳನ್ನು ಹಂಚಿದ ವ್ಯಕ್ತಿ ಈತನೇ ಆಗಿದ್ದಾನೆ. ಈ ಹಿನ್ನೆಲೆಯಲ್ಲಿ ಈತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಜರಂಗದಳ ಮುಖಂಡರು ಆಗ್ರಹಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss