Thursday, July 7, 2022

Latest Posts

ಮಂಗಳೂರಿನ ಹೊರವಲಯದಲ್ಲಿ ಕಾಗೆಗಳ ನಿಗೂಢ ಸಾವು: ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಹಕ್ಕಿ ಜ್ಚರದ ಭೀತಿ?

ಹೊಸದಿಗಂತ ವರದಿ,ಕೊಣಾಜೆ:

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಹೊರವಲಯದ ಮಂಜನಾಡಿ‌ ಸಮೀಪದ ಅರಂಗಡಿ ಎಂಬಲ್ಲಿ ಕಾಗೆಗಳು ಸಾವನ್ನಪ್ಪಿರುವ ಘಟನೆ ಮಂಗಳವಾರ‌ ಬೆಳಕಿಗೆ ಬಂದಿದೆ.
ಅರಂಗಡಿ ಪ್ರದೇಶದ ಗುಡ್ಡ ಪ್ರದೇಶದಲ್ಲಿ‌ ಸುಮಾರು ಆರಕ್ಕಿಂತಲೂ ಹೆಚ್ಚು ಕಾಗೆಗಳು ಸತ್ತು ಬಿದ್ದಿರುವುದನ್ನು ಸ್ಥಳೀಯರು‌ ಕಂಡಿದ್ದರು. ಬಳಿಕ ಒಂದೇ ಕಡೆ ಸುಮಾರು‌ ಆರಕ್ಕೂ ಹೆಚ್ಚು  ಸತ್ತು ಬಿದ್ದಿವೆ.  ಏಕಾಏಕಿ‌ ಕಾಗೆಗಳು ಸಾವನ್ನಪ್ಪಿರುವುದರಿಂದ ಸ್ಥಳೀಯರು ಆತಂಕಗೊಂಡಿದ್ದಾರೆ.
ಕೇರಳ ಹಲವೆಡೆ ಈಗಾಗಲೇ ಹಕ್ಕಿ ಜ್ಚರದ ಲಕ್ಷಣಗಳು ಕಂಡು ಬಂದಿದ್ದು, ಅದೇ ರೀತಿ ಕೇರಳ ಗಡಿ‌ ಪ್ರದೇಶವಾದ ಮಂಜನಾಡಿಯ ಅರಂಗಡಿ ಪ್ರದೇಶದಲ್ಲಿ ಇದೇ ಹಕ್ಕಿ ಜ್ವರದ ಕಾರಣದಿಂದಲೇ ಕಾಗೆಗಳು ಸತ್ತು ಬಿದ್ದಿರಬಹುದು ಎಂದು ಸ್ಥಳೀಯರು‌ ಸಂಶಯಿಸಿದ್ದಾರೆ.
ಘಟನಾ ಸ್ಥಳಕ್ಕೆ ಗ್ರಾಮಕರಣಿಕ ಪ್ರಸಾದ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಂಜಯ್ಯ ಅವರು ಭೇಟಿ‌ ನೀಡಿ‌ ಪರಿಶೀಲನೆ ನಡೆಸಿ, ಪಶು ಇಲಾಖೆ ಹಾಗೂ ಸಹಾಯಕ ಆಯುಕ್ತರಿಗೆ ಮಾಹಿತಿ‌ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss