Tuesday, August 16, 2022

Latest Posts

ಮಂಗಳೂರು|ಬಿಜೆಪಿ ವತಿಯಿಂದ ಕಾರ್ಯಕರ್ತರ ಸಭೆ ಹಾಗೂ ಪಂಡಿತ್ ದೀನದಯಾಳ್ ಉಪಾಧ್ಯಾಯರ 104ನೇ ಜನ್ಮ ದಿನಾಚರಣೆ

ಮಂಗಳೂರು: ಭಾರತೀಯ ಜನತಾ ಪಾರ್ಟಿ ವತಿಯಿಂದ ಮಂಗಳೂರು ನಗರ ಉತ್ತರ ಮಂಡಲದ ಎಡಪದವು ಮಹಾಶಕ್ತಿ ಕೇಂದ್ರ ದಲ್ಲಿ ಎಡಪದವು ಶ್ರೀರಾಮ ಭಜನಾ ಮಂದಿರ ದಲ್ಲಿ ಬಿಜೆಪಿ, ಮಂಗಳೂರು ಉತ್ತರದ ನೆಚ್ಚಿನ ಶಾಸಕರಾದ ಡಾಕ್ಟರ್ ವೈ ಭರತ್ ಶೆಟ್ಟಿ ಯವರ ಮಾರ್ಗದರ್ಶನದಲ್ಲಿ , ಉತ್ತರ ಮಂಡಲ ಅಧ್ಯಕ್ಷರಾದ ತಿಲಕ್ ರಾಜ್ ಕೃಷ್ಣಾಪುರ ಇವರ ಅಧ್ಯಕ್ಷತೆಯಲ್ಲಿ ಎಡಪದವು ಮಹಾಶಕ್ತಿ ಕೇಂದ್ರದ ನೂತನವಾಗಿ ಆಯ್ಕೆಗೊಂಡ ಪದಾಧಿಕಾರಿಗಳ ಹಾಗೂ ಎಲ್ಲಾ ಜವಾಬ್ದಾರಿಯುತ ಕಾರ್ಯಕರ್ತರುಗಳ ಅಭಿನಂದನಾ ಕಾರ್ಯಕ್ರಮದೊಂದಿಗೆ ಕಾರ್ಯಕರ್ತರ ಸಭೆ ಹಾಗೂ ಪಂಡಿತ್ ದೀನದಯಾಳ್ ಉಪಾಧ್ಯಾಯರ 104ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.

ಈ ಕಾರ್ಯಕ್ರಮಕ್ಕೆ ಜಿಲ್ಲಾ ಸಹ-ಪ್ರಭಾರಿ ಗಳಾದ ರಾಜೇಶ್ ಕಾವೇರಿ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸಂದೀಪ್ ಪಚ್ಚನಾಡಿ, ಹಾಗೂ ಮಂಡಲ ಕಾರ್ಯದರ್ಶಿ ಹಾಗೂ ಎಡಪದವು ಮಹಾಶಕ್ತಿ ಕೇಂದ್ರದ ಪ್ರಭಾರಿ ಅಮರೇಶ್ ಬೇಕಲ್ ರವರು ಉಪಸ್ಥಿತಿ ಇದ್ದು, ಮಂಡಲ ಕಾರ್ಯದರ್ಶಿ ಗಣೇಶ್ ಪಾಕಜೆ ಎಲ್ಲರನ್ನೂ ಸ್ವಾಗತಿಸಿದರು.

ಮಂಡಲ ಉಪಾಧ್ಯಕ್ಷ ಹಾಗೂ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಪ್ರಸಾದ್ ಎಡಪದವು, ಮಹಾಶಕ್ತಿ ಕೇಂದ್ರ ಕಾರ್ಯದರ್ಶಿ ಅನಿಲ್ ಕುಮಾರ್ ಪೆರಾರ, ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಪಕ್ಷದ ಜಿಲ್ಲಾ , ಮಂಡಲ ಮಟ್ಟದ ಜವಾಬ್ದಾರಿ ಯುಳ್ಳ ಪದಾಧಿಕಾರಿಗಳು , ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಸದಸ್ಯರುಗಳು, ಮಹಾಶಕ್ತಿ ಕೇಂದ್ರ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಶಕ್ತಿಕೇಂದ್ರ ಪ್ರಮುಖ್, ಸಹ ಪ್ರಮುಖರುಗಳು, ಬೂತ್ ಸ್ಥಾನೀಯ ಸಮಿತಿಯ ಅಧ್ಯಕ್ಷ , ಕಾರ್ಯದರ್ಶಿ ಗಳು ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss