Monday, March 8, 2021
 • ಕರ್ನಾಟಕ ಬಜೆಟ್ ಮಂಡನೆಗೆ ಕ್ಷಣಗಣನೆ
 • ಬಜೆಟ್ ಮಂಡನೆಗೂ ಮುನ್ನ ಜನರ ಏಳಿಗೆಗಾಗಿ ದೇವರಲ್ಲಿ ಪ್ರಾರ್ಥಿಸಿದ ಸಿಎಂ
 • ಸಿಎಂಗೆ ಬಜೆಟ್ ಪ್ರತಿ ಇರುವ ಸೂಟ್‌ಕೇಸ್ ಹಸ್ತಾಂತರಿಸಿದ ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಐಎಸ್‌ಎನ್ ಪ್ರಸಾದ್
 • ಬಜೆಟ್‌ಗೂ ಮುನ್ನ ಸಿಎಂ ನಿವಾಸದ ಮುಂದೆ ಆಶಾಕಾರ್ಯಕರ್ತೆಯರ ಪ್ರತಿಭಟನೆ
 • ಬಜೆಟ್ ಮಂಡನೆಗೆ ಸಚಿವ ಸಂಪುಟದಿಂದ ಒಪ್ಪಿಗೆ ಪಡೆದ ಸಿಎಂ ಯಡಿಯೂರಪ್ಪ, ಕೆಲವೇ ನಿಮಿಷದಲ್ಲಿ ಬಜೆಟ್ ಮಂಡನೆ ಆರಂಭ
 • ಕೋವಿಡ್ ಕಾರಣದಿಂದ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ: ಸಮತೋಲನ ಬಜೆಟ್ ನಿರೀಕ್ಷೆ
 • ಈ ಬಾರಿ ಬಜೆಟ್‌ನಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ: ಸಿಎಂ ಯಡಿಯೂರಪ್ಪ
 • ಬಜೆಟ್ ಪ್ರತಿ ಹೊಂದಿದ ಸೂಟ್‌ಕೇಸ್ ಕೈಯಲ್ಲಿ ಹಿಡಿದು ವಿಧಾನಸಭೆ ಪ್ರವೇಶಿಸಿದ ಸಿಎಂ ಬಿಎಸ್‌ವೈ
 • ಬಜೆಟ್ ಮಂಡನೆ ವೇಳೆ ಸಭಾತ್ಯಾಗಕ್ಕೆ ಕಾಂಗ್ರೆಸ್ ನಿರ್ಧಾರ
 • ಬಜೆಟ್ ಕುರಿತು ಭಾಷಣ ಆರಂಭಿಸಿದ ಸಿಎಂ, ವಿಪಕ್ಷಗಳಿಂದ ಅಡ್ಡಿ
 • 2,43,738 ಕೋಟಿ ಗಾತ್ರದ ಬಜೆಟ್ ಮಂಡಿಸುತ್ತಿರುವ ಸಿಎಂ
 • ಅಂತಾರಾಷ್ಟ್ರೀಯ ಮಹಿಳಾ ದಿನದ ಹಿನ್ನೆಲೆ ಬಂಪರ್ ಗಿಫ್ಟ್, ಮಹಿಳೆಯರಿಗೆ ಹಲವು ಯೋಜನೆ ಘೋಷಣೆ
 • ರಾಜ್ಯದ ಜಿಎಸ್‌ಟಿ ಸಂಗ್ರಹ ಇಳಿಕೆ :ಸಿಎಂ
 • ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ 50 ಕೋಟಿ ರೂ. ಮೀಸಲು
 • 75 ಕೋಟಿ ರೂ. ವೆಚ್ಚದದಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆ ಸ್ಥಾಪನೆಗೆ ನಿರ್ಧಾರ
 • ಬಜೆಟ್‌ನಲ್ಲಿ ಗೋವುಗಳಿಗೂ ಪ್ರಾಧಾನ್ಯತೆ: ಗೋವು ಅಭಿವೃದ್ಧಿಗೆ ಹಲವು ಯೋಜನೆ
 • 100 ತಾಲೂಕುಗಳ ಆಸ್ಪತ್ರೆಗಳಲ್ಲಿ ಆರು ಹಾಸಿಗೆಯ ಐಸಿಯು ನಿರ್ಮಾಣ
 • ರೈಲು ಉಪನಗರ ಯೋಜನೆಗಳಿಗೆ 15,767 ಕೋಟಿ ರೂ. ಮೀಸಲು
 • ಮಹಿಳಾ ಸ್ವಸಹಾಯ ಸಂಘ ಉತ್ಪನ್ನಗಳಿಗೆ ಮಾರುಕಟ್ಟೆ ಸ್ಥಾಪನೆ
 • ವೀರಶೈವ ಲಿಂಗಾಯತರಿಗೆ 500 ಕೋಟಿ ರೂ.
 • ಧರ್ಮಗಳ ಬಗ್ಗೆಯೂ ಬಜೆಟ್‌ನಲ್ಲಿ ಬೆಳಕು: ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿಗೆ 200 ಕೋಟಿ ರೂ. ಮೀಸಲು
 • ಸಿಲಿಕಾನ್ ಸಿಟಿಗೆ ಸಂಭ್ರಮದ ಸುದ್ದಿ: ಬೆಂಗಳೂರು ಅಭಿವೃದ್ಧಿಗೆ 7795 ಕೋಟಿ ಮೀಸಲು
 • ಕಡಲ ತೀರ ಅಭಿವೃದ್ಧಿಗೆ 10 ಕೋಟಿ ರೂ. ಅನುದಾನ
 • ಸಾಹಿತ್ಯಕ್ಕೆ ಬಜೆಟ್‌ನಲ್ಲಿ ಸ್ಥಾನ: ಎಂಟು ಜ್ಞಾನಪೀಠ ಪುರಸ್ಕೃತರು ಕಲಿತ ಶಾಲೆಗಳ ಅಭಿವೃದ್ಧಿ
 • ಕಲ್ಯಾಣ ಕರ್ನಾಟಕ ಭಾಗಕ್ಕೆ 1500 ಕೋಟಿ ರೂ ಮೀಸಲು
 • ರಾಜ್ಯದಲ್ಲಿ ಹೊಸತಾಗಿ ಸ್ಥಾಪನೆಯಾಗಲಿವೆ 52 ಬಸ್‌ಸ್ಟಾಂಡ್‌ಗಳು!
 • ಕಲೆಗೆ ಬಜೆಟ್‌ನಲ್ಲಿ ಬೆಲೆ: ಎಸ್.ಎಲ್. ಭೈರಪ್ಪ ಅವರ ಪರ್ವ ನಾಟಕ ಪ್ರದರ್ಶನಕ್ಕೆ ಒಂದು ಕೋಟಿ ಮೀಸಲು
 • ಅಯೋಧ್ಯೆ ಶ್ರೀರಾಮ ಜನ್ಮಭೂಮಿಯಲ್ಲಿ ಕರ್ನಾಟಕದ ಯಾತ್ರಿ ನಿವಾಸ ನಿರ್ಮಾಕ್ಕೆ ಹತ್ತು ಕೋಟಿ ಮೀಸಲು
 • ಒಕ್ಕಲಿಗರ ಅಭಿವೃದ್ಧಿ ನಿಮಗೆ ಸ್ಥಾಪನೆ, 500 ಕೋಟಿ ರೂ. ಅನುದಾನ
 • ಮಹಿಳೆಯರಿಗೆ ಆರು ತಿಂಗಳು ಪ್ರಸೂತಿ ರಜೆಯ ಜೊತೆ ಆರು ತಿಂಗಳು ಮಕ್ಕಳ ಆರೈಕೆ ರಜೆ
 • ಹೊಸ ತೆರಿಗೆ ಭಾರವೂ ಇಲ್ಲ, ಪೆಟ್ರೋಲ್ ಡಿಸೇಲ್ ತೆರಿಗೆ ತಗ್ಗುವುದೂ ಇಲ್ಲ.
 • ಪ್ರಧಾನ ಮಂತ್ರಿ ಮತ್ಸ್ಯ ಸಂಪ್ರದಾ ಯೋಜನೆಗೆ 62  ಕೋಟಿ ರೂ.
 • ಪೋಷಕಾಂಶದಿಂದ ಬಳಲದಿರಲಿ ಮಕ್ಕಳು: ತಾಯಂದಿರ ಎದೆ ಹಾಲಿನ ಬ್ಯಾಂಕ್ ಸ್ಥಾಪನೆಗೆ 2.5  ಕೋಟಿ ರೂ.
 • ಪ್ರವಾಸಿ ತಾಣಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ 500 ಕೋಟಿ ರೂ.
 • ಮನೆಬಾಗಿಲಿಗೆ ಮಾಸಾಶನ ಅಭಿಯಾನ ಆರಂಭ
 • ಕೃಷಿಗೆ ಉತ್ತಮ ಸ್ಥಾನ: ಸಾವಯವ ಕೃಷಿಗೆ ಉತ್ತೇಜನ ನೀಡಲು 300 ಕೋಟಿ
 • ಜೈಲಿನಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯ ಕಲಾಪಕ್ಕೆ ಖೈದಿಗಳು ಹಾಜರ್!
 • ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಲು 25 ಸಂಚಾರಿ ಆರೋಗ್ಯ ತಪಾಸಣೆ ಕೇಂದ್ರ
 • ಉದ್ಯೋಗ ಅರಸುವವರಿಗೆ ಶುಭ ಸುದ್ದಿ: ಮುಂದಿನ ಐದು ವರ್ಷದಲ್ಲಿ 43,000 ನೇರ ಉದ್ಯೋಗ ಸೃಷ್ಟಿ
 • ಜನರ ರಕ್ಷಣೆಗೆ ಆದ್ಯತೆ ನೀಡಿದ ಸರ್ಕಾರ: 100 ಪೊಲೀಸ್ ಠಾಣೆಗಳ ನಿರ್ಮಾಣ
 • ರಾಜ್ಯದಲ್ಲಿ ಸಾವಿರ ವಿದ್ಯುತ್ ವಾಹನಗಳ ಚಾರ್ಜಿಂಗ್ ಕೇಂದ್ರ ಸ್ಥಾಪನೆ
 • ಧಾರವಾಡ-ಕಿತ್ತೂರು-ಬೆಳಗಾವಿಗೆ ಹೊಸ ರೈಲು ಮಾರ್ಗ
 • ತ್ರಾಸಿ, ಮರವಂತೆ, ಒತ್ತಿನೆಣೆ ಸಮುದ್ರಗಳ ಅಭಿವೃದ್ಧಿಗೆ ನೂರು ಕೋಟಿ
 • ಹುಬ್ಬಳ್ಳಿ, ಬಳ್ಳಾರಿಯಲ್ಲಿ ವಿಧಿ ವಿಜ್ಞಾನ ಕೇಂದ್ರ
 • ಚಾಮರಾಜನಗರದಲ್ಲಿ ಅರಿಶಿಣ ಮಾರುಕಟ್ಟೆ
 • ಮಂಗಳೂರಿನ ಗಂಜಿಮಠದಲ್ಲಿ ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆ
 • ಮಲೆನಾಡು, ಕರಾವಳಿ ಭಾಗದಲ್ಲಿ ಕಾಲುದಾರಿ ನಿರ್ಮಾಣಕ್ಕೆ 100 ಕೋಟಿ ಮೀಸಲು.
 • ರಾಯಚೂರಿನಲ್ಲಿ ರಿಂಗ್‌ರೋಡ್ ಸ್ಥಾಪನೆ
 • ಬೆಂಗಳೂರಿನಲ್ಲಿ ನವ ಚೈತನ್ಯ ಕಾರ್ಯಕ್ರಮ ಜಾರಿ
 • ಮದ್ಯದ ಮೇಲಿನ ತೆರಿಗೆ ಹೆಚ್ಚಳವಿಲ್ಲ
 • ಕಳಸಾ- ಬಂಡೂರಿ ಯೋಜನೆಗೆ ಅನುದಾನ ಘೋಷಣೆ
 • ಕೋಳಿ, ಕುರಿ ಸಂವರ್ಧನೆಗೆ ಹೊಸ ಯೋಜನೆ
 • ಕರ್ನಾಟಕದ ಪಬ್ಲಿಕ್ ಶಾಲೆಗಳ ಅಭಿವೃದ್ಧಿಗೆ ನೂರು ಕೋಟಿ. ರೂ.
 • ಮಹಿಳಾಪೂರಕ ಬಜೆಟ್: ಬಿಎಂಟಿಸಿ ಪಾಸ್‌ನಲ್ಲಿ ಮಹಿಳೆಯರಿಗೆ ರಿಯಾಯಿತಿ
 • ಬಜೆಟ್‌ನಲ್ಲಿ ಧಾರ್ಮಿಕ,ಮಠಗಳ ಅಭಿವೃದ್ಧಿಗೆ ಅನುದಾನ
 • ತೋಟಗಾರಿಕಾ ಬೆಳೆಗಳ ರಫ್ತಿಗೆ ರಾಜ್ಯದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೂರಕ ಸೌಲಭ್ಯ
 • ಶಿವಮೊಗ್ಗದ ಆಯುರ್ವೇದ ಕಾಲೇಜು ಇನ್ಮುಂದೆ ಆಯುಷ್ ವಿಶ್ವವಿದ್ಯಾಲಯ
 • ಸುವಾಸನೆ ಬೀರುವ ಮತ್ತು ವೈದ್ಯಕೀಯ ಗಿಡಗಳು,ಹಣ್ಣು,ತರಕಾರಿಗಳು ಮತ್ತು ಸಾಂಬಾರು ಪದಾರ್ಥಗಳಿಗೆ ಹೊಸ ಕೃಷಿ ರಫ್ತು ವಲಯ ಸ್ಥಾಪನೆ
 • ಶಿವಮೊಗ್ಗದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಪ್ರಾದೇಶಿಕ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಸ್ಥಾಪನೆ
 • ಶಿವಮೊಗ್ಗದಲ್ಲಿ384 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಕ್ಕೆ ಕ್ರಮ
 • ಕೋವಿಡ್ ಸಂಕಷ್ಟದಿಂದ ಯಾವುದೇ ಜನಪ್ರಿಯ ಯೋಜನೆ ಇಲ್ಲ: ಸಿಎಂ
 • ಬೈಯಪ್ಪನಹಳ್ಳಿಯಲ್ಲಿ 50 ಕೋಟಿ.ರೂ. ವೆಚ್ಚದಲ್ಲಿ ಸುಸಜ್ಜಿತ ಹೂವಿನ ಮಾರುಕಟ್ಟೆ
 • ವಾಹನ ಸ್ಕ್ರಾಪಿಂಗ್ ಸೌಲಭ್ಯ ಜಾರಿ
 • ಸುದೀರ್ಘವಾದ ಎರಡೂವರೆ ಗಂಟೆ ಬಜೆಟ್ ಭಾಷಣ ಮುಕ್ತಾಯ
 •  
 •  
 •  
 •  
 •  
 •  
 •  
 •  
 •  
 •  
 •  
 •  
 •  
 •  

Latest Posts

ಮಂಗಳೂರು ಅಂಚೆ ವಿಭಾಗಕ್ಕೆ ವಲಯ ಮಟ್ಟದ 3 ಪ್ರಶಸ್ತಿಗಳ ಗರಿ

ಮಂಗಳೂರು: ಭಾರತ ಅಂಚೆ ಇಲಾಖೆಯ ಮೂಲಕ ಅ.9ರಿಂದ 15ರ ತನಕ ನಡೆದ ಅಂಚೆ ಸಪ್ತಾಹದ ಅಂಗವಾಗಿ ದಕ್ಷಿಣ ಕರ್ನಾಟಕ ಅಂಚೆ ವಲಯವು 2019-20ನೆಯ ಸಾಲಿನ ಉತ್ತಮ ನಿರ್ವಹಣೆಗಾಗಿ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಮಂಗಳೂರು ಅಂಚೆ ವಿಭಾಗ ಮೂರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
ಗ್ರಾಮೀಣ ಅಂಚೆ ಕಚೇರಿಗಳ ವಿಭಾಗದಲ್ಲಿ ಮಂಗಳೂರು ಅಂಚೆ ವಿಭಾಗದ ಎಕ್ಕಾರು ಶಾಖಾ ಅಂಚೆ ಕಚೇರಿ ಅತ್ಯುತ್ತಮ ಸಾಧನೆಗಾಗಿ ಪ್ರಥಮ ಸ್ಥಾನ ಪಡೆದಿದೆ. ಉಪ ಅಂಚೆ ಕಚೇರಿಗಳ ಅತ್ಯುತ್ತಮ ನಿರ್ವಹಣೆಗಾಗಿ ಮಂಗಳ ಗಂಗೋತ್ರಿ ಉಪ ಅಂಚೆ ಕಚೇರಿ ದ್ವಿತೀಯ ಸ್ಥಾನ ಪಡೆದಿದೆ.
ಮಂಗಳೂರು ವಿಭಾಗೀಯ ಕಚೇರಿಯಲ್ಲಿ ಎಂಟಿಎಸ್ ಆಗಿ ಕರ್ತವ್ಯ ನಿರ್ವಹಣೆಯಲ್ಲಿರುವ ದೇವದಾಸ್ ತಮ್ಮ ಕ್ಷೇತ್ರದಲ್ಲಿನ ಶ್ರೇಷ್ಠ ಸಾಧನೆಗಾಗಿ ಪ್ರಥಮ ಸ್ಥಾನದೊಂದಿಗೆ ಉತ್ತಮ ಎಂಟಿಎಸ್ ಪ್ರಶಸ್ತಿ ಪಡೆದಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭ ಬೆಂಗಳೂರಿನ ವಲಯ ಕಾರ್ಯಾಲಯದಲ್ಲಿ ನಡೆಯಬೇಕಿತ್ತು. ಕೋವಿಡ್ ಕಾರಣ ಮಂಗಳೂರು ವಿಭಾಗೀಯ ಕಚೇರಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಅ.15ರಂದು ನಡೆಯಿತು. ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷ ಪ್ರಶಸ್ತಿ ಪ್ರದಾನ ಮಾಡಿದರು. ದಕ್ಷಿಣ ಕರ್ನಾಟಕ ವಲಯ ಪೋಸ್ಟ್ ಮಾಸ್ಟರ್ ಜನರಲ್ ಡಿ.ಎಸ್.ವಿ.ಆರ್.ಮೂರ್ತಿ ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರಿದ್ದು ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss