Tuesday, June 28, 2022

Latest Posts

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: `ಉಡಾನ್’ಯೋಜನೆಯಡಿ ಸೇರಿಸಲು ಟ್ವಿಟರ್ ಅಭಿಯಾನ

ಮಂಗಳೂರು: ಮಂಗಳೂರಿನ ಕೆಂಜಾರಿನಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು `ಉಡಾನ್’ಯೋಜನೆಯಡಿ ಸೇರಿಸಬೇಕೆಂದು ಒತ್ತಾಯಿಸಿ ಭಾನುವಾರ ದಿನವಿಡೀ `ಟ್ವಿಟರ್ ಅಭಿಯಾನ’ ನಡೆಯಿತು.
ಉಡಾನ್ ಯೋಜನೆಯ ಅಡಿಯಲ್ಲಿ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಹಲವಾರು ಸ್ಥಳಗಳಿಂದ ವಿಮಾನ ದೊರಕಿ ಮಂಗಳೂರಿಗೆ ಪೈಪೋಟಿ ನೀಡುತ್ತಿದೆ. ಆಗಸ್ಟ್‌ನಲ್ಲಿ ಮಂಗಳೂರನ್ನು ಮೀರಿಸಿ ಅದು ಎರಡನೇ ಸ್ಥಾನಕ್ಕೆ ಜಿಗಿದಿತ್ತು. ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಕೇಂದ್ರ ಸರಕಾರ ಪ್ರಾರಂಭಿಸಿದ ವಂದೇ ಭಾರತ್ ಮಿಷನ್‌ನಡಿ ಕೇರಳಕ್ಕೆ ಕೊಲ್ಲಿ ದೇಶಗಳಿಂದ ಹೆಚ್ಚು ವಿಮಾನಗಳು ಬಂದಿದ್ದವು. ಆದರೆ ಮಂಗಳೂರಿಗೆ 50 ವಿಮಾನಗಳು ಮಾತ್ರವೇ ಬಂದಿವೆ. ಕರಾವಳಿ ಕರ್ನಾಟಕದ ಹೆಚ್ಚು ಉದ್ಯೋಗಿಗಳು ಕೊಲ್ಲಿ ದೇಶಗಳಲ್ಲಿದ್ದಾರೆ. ಕೆಲವು ದಿನಗಳ ಹಿಂದೆ ಸ್ಪೈಸ್ ಜೆಟ್ ದಿಲ್ಲಿಯಿಂದ ಮಂಗಳೂರಿಗೆ ಸೇವೆ ಒದಗಿಸಿದರೂ ಎರಡೇ ದಿನಗಳಲ್ಲಿ ಅದನ್ನು ಸ್ಥಗಿತಗೊಳಿಸಿದೆ. ಇದೀಗ ಚಳಿಗಾಲದ ವೇಳಾಪಟ್ಟಿಯಲ್ಲಿ ಮಂಗಳೂರು-ದಿಲ್ಲಿ ವಿಮಾನ ಸೇರಿಸುವುದಾಗಿ ಹೇಳಿದೆ.
ಈ ಹಿನ್ನೆಲೆಯಲ್ಲಿ ಈಗಲೇ ಎಚ್ಚೆತ್ತುಕೊಂಡುಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೆ ಹೆಚ್ಚಿನ ವಿಮಾನ ಸಂಚಾರಕ್ಕೆ ಅವಕಾಶ ಲಭಿಸುವಂತೆ ಮಾಡಬಹುದಾಗಿದೆ.ಬೇರೆ ಬೇರೆ ವಿಮಾನಯಾನ ಸಂಸ್ಥೆಗಳು ಮಂಗಳೂರಿಗೆ ಸೇವೆ ಪ್ರಾರಂಭಿಸುವಂತೆ ಆಕರ್ಷಿಸಲು ಕ್ರಮ ಕೈಗೊಳ್ಳಬೇಕು. ಈ ಎಲ್ಲಾ ಅಂಶಗಳನ್ನು ಒಳಗೊಂಡಂತೆ ಟ್ವಿಟರ್ ಅಭಿಯಾನ ನಡೆದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss