Sunday, July 3, 2022

Latest Posts

ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ: 32 ಕೋಟಿ ರೂ .ವೆಚ್ಚದಲ್ಲಿ ಒಳಚರಂಡಿ ಯೋಜನೆಗೆ ಚಾಲನೆ

ಮಂಗಳೂರು: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಿರುವೈಲು, ಬೈತುರ್ಲಿ ಹಾಗೂ ಬೈಕಂಪಾಡಿ ಅಂಗರಗುಂಡಿ ಪ್ರದೇಶದಲ್ಲಿ ನೂತನ ಒಳಚರಂಡಿ ಕಾಮಗಾರಿಗೆ ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ತಿರುವೈಲು ವಾರ್ಡ್ ನಲ್ಲಿ  ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, ರಾಜ್ಯ ಸರಕಾರ ಸಂಪೂರ್ಣ ಅನುದಾನ ನೀಡಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ನಳಿನ್ ಕುಮಾರ್ ಕಟೀಲ್,  ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಸಹಕಾರ ನೀಡಿದ್ದು, ಚುನಾವಣೆ ಸಂದರ್ಭ ನೀಡಿದ ಭರವಸೆಯನ್ನು ಈಡೇರಿಸಿದ್ದೇನೆ. ಜನತೆ ಕಾಮಗಾರಿ ಸಂದರ್ಭ ಅಡೆ ತಡೆ ನೀಡದೆ ಸಹಕಾರ ನೀಡಿದರೆ ಶೀಘ್ರ ಮಾಡಲು ಸಾಧ್ಯವಾಗುತ್ತದೆ ಎಂದರು.
  ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೂಲ ಅವಶ್ಯಕತೆಯಾದ ಒಳಚರಂಡಿ ಯೋಜನೆ ಬಹುತೇಕ ಪ್ರದೇಶಗಳಲ್ಲಿ ಇನ್ನೂ ಬಾಕಿಯುಳಿದಿದೆ. ಒಳಚರಂಡಿ ವ್ಯವಸ್ಥೆಗೆ ಸಾರ್ವಜನಿಕರಿಂದ ಮನವಿಯೂ ಬಂದಿತ್ತು. ಈ ಹಿಂದೆ ಮಂಗಳೂರು ಉತ್ತರದ ಕೆಲವು ಕಡೆ ಕಾಮಗಾರಿ ಪೂರ್ಣವಾಗಿದ್ದರೂ ತಾಂತ್ರಿಕ ಕಾರಣದಿಂದ ಸಂಪರ್ಕ ಸಾಧ್ಯವಾಗಿಲ್ಲ.ಇನ್ನು ಕೆಲವು ಕಡೆ ಸೋರಿಕೆಯಿಂದ ಸಮಸ್ಯೆಯಾಗಿದೆ. ಹೀಗಾಗಿ ನೂತನ ಯೋಜನೆಯು ಯಾವುದೇ ಕಾರಣಕ್ಕೂ ವೈಫಲ್ಯಕ್ಕೆ ತುತ್ತಾಗದಂತೆ ಗುಣಮಟ್ಟದ ಕಾಮಗಾರಿ ಮಾಡಿ ಸಾರ್ವಜನಿಕರ ಉಪಯೋಗಕ್ಕೆ ಬಿಟ್ಟು ಕೊಡಬೇಕಿದೆ ಅಧಿಕಾರಿಗಳಿಗೆ ಸೂಚಿಸಿದರು ಮಾತ್ರವಲ್ಲದೆ  ಸ್ಥಳೀಯರು ಕಾಲಕಾಲಕ್ಕೆ ಕಾಮಗಾರಿಯ ಗುಣಮಟ್ಟದ ಬಗ್ಗೆ ಜಾಗೃತರಾಗಿರಬೇಕು ಎಂದು ನುಡಿದರು.ಕಾರ್ಯಕ್ರಮದಲ್ಲಿ ಮೇಯರ್ ದಿವಾಕರ್ ಪಾಂಡೇಶ್ವರ, ಉಪಮೇಯರ್ ವೇದಾವತಿ, ಕಾಪರ್ೊರೇಟರ್ ಹೇಮಲತಾ ರಘು ಸಾಲ್ಯಾನ್,ಸ್ಥಾಯೀ ಸಮಿತಿ ಅಧ್ಯಕ್ಷರಾದ ಶರತ್ ಕುಮಾರ್, ಕಿರಣ್ ಕುಮಾರ್ ಕೋಡಿಕಲ್ , ಕೆಐಎಡಿಯುಎಫ್ಸಿಯ ಅಧಿಕಾರಿ ಮಂಜಯ್ಯ, ಜಯಪ್ರಕಾಶ್ ಸಹಿತ ಅಧಿಕಾರಿಗಳು ಉಪಸ್ಥಿತರಿದ್ದರು.
ಅನುದಾನ ಬಿಡುಗಡೆ
ರಾಜ್ಯ ಸರಕಾರದ ಕ್ರಿಮಿಟ್ ಯೋಜನೆಯಡಿ ಅನುದಾನ ಬಿಡುಗಡೆಯಾಗಿದ್ದು,  ವಾರ್ಡ್ 20ರ ತಿರುವೈಲು ಪ್ರದೇಶದ ಕಸ್ಟಮ್ಸ್ ಕಾಲನಿ, ಅಮೃತನಗರ  ಒಟ್ಟು 10 ಕೋಟಿ ರೂ.ವೆಚ್ಚದಲ್ಲಿ , ದೇವರ ಪದವು,ಜ್ಯೋತಿ ನಗರ 1.50 ಕೋಟಿ,ಮಂಗಳ ನಗರದಲ್ಲಿ 1 ಕೋಟಿ, ಬೈತುಲರ್ಿ ಪ್ರದೇಶದಲ್ಲಿ 5 ಕೋಟಿ, ಬೈಕಂಪಾಡಿ ಅಂಗರ ಗುಂಡಿ,ಕುಡುಂಬೂರು ಪ್ರದೇಶದಲ್ಲಿ ಅಂದಾಜು 14.50 ಕೋಟಿ ವೆಚ್ಚದಲ್ಲಿ ಒಳಚರಂಡಿ ಯೋಜನೆ ಮಾಡಲಾಗಿದೆ.ಇಲ್ಲಿ ಒಟ್ಟು 2 ವೆಟ್ ವೆಲ್,ಎಸ್ ಟಿ ಪಿ ಸಹಿತ ಸಂಪರ್ಕ ಕಾಮಗಾರಿ ನಡೆಯಲಿದೆ.ಕೆಯುಐಡಿಎಫ್ಸಿ ಸಂಸ್ಥೆ ಇಲ್ಲಿನ ಒಳಚರಂಡಿ ಯೋಜನೆಯ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು ಕಲ್ಕತ್ತ ಮೂಲದ ಕಂಪನಿ ಗುತ್ತಿಗೆ ಪಡೆದುಕೊಂಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss