Sunday, August 14, 2022

Latest Posts

ಮಂಗಳೂರು| ಎಲ್ಲಾ ವಿರೋಧ ಪಕ್ಷಗಳ ಷಡ್ಯಂತ್ರಕ್ಕೆ ತೆರೆ ಬಿದ್ದಿದೆ: ಕ್ಯಾ.ಕಾರ್ಣಿಕ್

ಮಂಗಳೂರು: ಅಯೋಧ್ಯೆಯ ವಿವಾದಿತ ಕಟ್ಟಡದ ಸುತ್ತ ಇರುವ ಎಲ್ಲ ಗೊಂದಲಗಳಿಗೂ ತೆರೆ ಬಿದ್ದಿದೆ. ಈ ವಿಶೇಷ ಕೋರ್ಟಿನ ತೀರ್ಪನ್ನು ಅತ್ಯಂತ ಸಂತೋಷದಿಂದ ಸ್ವಾಗತಿಸುತ್ತೇನೆ.

ಹಿಂದೂ ಸಮಾಜದ ಶ್ರದ್ಧಾ ಕೇಂದ್ರವಾಗಿರುವ ರಾಮಜನ್ಮಭೂಮಿ ವಿಷಯದಲ್ಲಿ ಇನ್ನಾದರೂ ವಿರೋಧ ಪಕ್ಷಗಳಿಗೆ ಪ್ರಭು ಶ್ರೀರಾಮಚಂದ್ರ ಸದ್ಬುದ್ಧಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಹೇಳಿದ್ದಾರೆ.

ಸಾಂಸ್ಕೃತಿಕ ರಾಷ್ಟ್ರೀಯತೆಯ ಪ್ರತೀಕವಾದ ರಾಮಜನ್ಮಭೂಮಿ ವಿಷಯದಲ್ಲಿ ಎಲ್ಲ ವಿರೋಧ ಪಕ್ಷಗಳ ಷಡ್ಯಂತ್ರಕ್ಕೆ ತೆರೆ ಬಿದ್ದಿದೆ. ರಾಮಜನ್ಮ ಭೂಮಿ ಮುಕ್ತಿಗಾಗಿ ಐದು ಶತಮಾನಗಳ ಕಾಲ ನಡೆದ ಹೋರಾಟಕ್ಕೆ ನಮ್ಮೆಲ್ಲರ ವರಿಷ್ಠ ನಾಯಕರಾದ ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ ಜೋಶಿ, ಸಾಧ್ವಿಉಮಾ ಭಾರತಿ, ಕಲ್ಯಾಣ್ ಸಿಂಗ್ ಮತ್ತು ಇತರ ನಾಯಕರುಗಳ ನಾಯಕತ್ವದಲ್ಲಿ ನಡೆದ ಸಾಮಾಜಿಕ ಆಂದೋಲನಕ್ಕೆ ಸಿಕ್ಕಿದ ಮನ್ನಣೆಯಾಗಿದೆ ಎಂದವರು ಹೇಳಿದ್ದಾರೆ.

ರಾಜಕೀಯ ಕಾರಣಗಳಿಗಾಗಿ ಅಂದಿನ ಪ್ರಧಾನ ಮಂತ್ರಿಗಳಾದ ಪಿ.ವಿ ನರಸಿಂಹ ರಾವ್ ಅವರ ಮೇಲೆ ಒತ್ತಡ ಹಾಕಿ ಸಿಬಿಐ ದುರುಪಯೋಗ ಮಾಡಿಕೊಂಡು, ಸುಳ್ಳು ಮೊಕದ್ದಮೆ ದಾಖಲಿಸಿ ಮೂರು ದಶಕಗಳ ಕಾಲ ರಾಜಕೀಯ ವೋಟ್ ಬ್ಯಾಂಕಿಗಾಗಿ ವಿವಾದಿತ ಕಟ್ಟಡ ಧ್ವಂಸದ ಕುರಿತು ಅಪಪ್ರಚಾರ ನಡೆಸಿದ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳ ಷಡ್ಯಂತ್ರ ಬಯಲಾಗಿದೆ.

ತಥಾಕಥಿತ ಬುದ್ಧಿಜೀವಿಗಳು ಮತ್ತು ಸ್ವಯಂಘೋಷಿತ ಇತಿಹಾಸ ತಜ್ಞರ ತಡವಾಗಿ ವಿವಾದಿತ ಕಟ್ಟಡದ ಪರವಾದ ನಿಲುವಿಗೆ ಕೋರ್ಟ್ ತೀರ್ಪಿನಿಂದ ಛೀಮಾರಿಯಾಗಿದೆ. ಈ ಹಿಂದೆ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಐದು ಸದಸ್ಯ ನ್ಯಾಯಪೀಠದ ತೀರ್ಪಿನಲ್ಲಿ ನಿರ್ಣಯವಾದ ಏಳು ಶತಮಾನಗಳ ಹಿಂದಿನ ಭವ್ಯ ರಾಮಮಂದಿರದ ಅವಶೇಷಗಳ ಮೇಲೆ ನಿರ್ಮಿತವಾದ ವಿವಾಧಿತ ಕಟ್ಟಡದ ಧ್ವಂಸ ಪೂರ್ವನಿಯೋಜಿತ ಕೃತ್ಯವಲ್ಲ ಎಂಬುದು ಸಾಬೀತಾಗಿದೆ ಎಂದು ಗಣೇಶ್ ಕಾರ್ಣಿಕ್ ಹೇಳಿದ್ದಾರೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss