Thursday, August 11, 2022

Latest Posts

ಮಂಗಳೂರು| ಕೂಳೂರಿನ ಶಾಲೆಯ ತಡೆಗೋಡೆ ಕುಸಿತ: ಕಾರ್ಮಿಕ ಸಾವು

ಮಂಗಳೂರು: ಕಳೆದ ಕೆಲವು ದಿನಗಳಿಂದ ನಗರದಲ್ಲಿ ಭಾರಿ ಮಳೆಯಾಗುತ್ತಿರುವ ಪರಿಣಾಮ ಕೂಳೂರಿನ ಶಾಲೆಯ ತಡೆಗೋಡೆ ಕುಸಿದು ಕಾರ್ಮಿಕನೋರ್ವ ಮೃತಪಟ್ಟ ಘಟನೆ ಶನಿವಾರದಂದು ನಡೆದಿದೆ.
ಮೃತರು ನೀರುಮಾರ್ಗದ ನಿವಾಸಿ ಉಮೇಶ್ (38) ಎಂದು ಗುರುತಿಸಲಾಗಿದೆ.
ತಡೆಗೋಡೆ ಕುಸಿದ ಪರಿಣಾಮ ಅಲ್ಲಿಯೇ ಕೆಲಸ ಮಾಡುತ್ತಿದ್ದಉಮೇಶ್‌ ಅವರು ಮಣ್ಣಿನಡಿಯಲ್ಲಿ ಸಿಲುಕಿದ್ದು, ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳೀಯರ ಸಹಾಯದಿಂದ ರಕ್ಷಣಾ ಕಾರ್ಯಚರಣೆ ಮಾಡಿದರೂ ಕೂಡಾ ಉಮೇಶ್ ಅವರು ಮೃತಪಟ್ಟಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss