Saturday, June 25, 2022

Latest Posts

ಮಂಗಳೂರು| ಕೊರೋನಾ ಗೆದ್ದ ವಿಶೇಷ ಚೇತನ ಮಗು!

ಮಂಗಳೂರು: ಇಲ್ಲಿನ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊರೋನಾ ವೈರಸ್ ಸೋಂಕಿತ ವಿಶೇಷ ಚೇತನ ಮಗು ಗುಣಮುಖವಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದೆ.
ಕೊರೋನಾದೊಂದಿಗೆ ನ್ಯುಮೋನಿಯಾವು ಈ ವಿಶೇಷ ಚೇತನ ಮಗುವನ್ನು ಕಾಡುತ್ತಿತ್ತು. ಆರಂಭದಲ್ಲಿ ಹೆತ್ತವರು ಮಗುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅಲ್ಲಿ ಚಿಕಿತ್ಸಾ ವೆಚ್ಚ ಲಕ್ಷದ ಗಡಿ ದಾಟಿತ್ತು. ಜೊತೆಗೆ ವೈದ್ಯರು ಮಗು ಚೇತರಿಸಿಕೊಳ್ಳುವ ಲಕ್ಷಣ ಕಾಣುತ್ತಿಲ್ಲ ಎಂದು ಕೈ ಚೆಲ್ಲಿದ್ದರಿಂದ ಹೆತ್ತವರು ಅನಿವಾರ್ಯವಾಗಿ ಮಗುವನ್ನು ವೆನ್ಲಾಕ್‌ಗೆ ದಾಖಲಿಸಿದ್ದರು.
ಆದರೆ ವೆನ್ಲಾಕ್‌ನಲ್ಲಿ ಚಿಕಿತ್ಸೆ ಪಡೆದ ಮಗು ಚೇತರಿಸಿಕೊಂಡಿದೆ. ಕಳೆದ ಹದಿನೈದು ದಿನಗಳಿಂದ ಈ ಮಗುವಿಗೆ ವೈದ್ಯರು ಮುತುವರ್ಜಿ ವಹಿಸಿ ಚಿಕಿತ್ಸೆ ನೀಡಿದ್ದರು. ಮಗು ಗುಣಮುಖವಾಗಿ ವೆನ್ಲಾಕ್ ಆಸ್ಪತ್ರೆಯಿಂದ ಬಿಡುಗಡೆಯಾಗುವ ವೇಳೆ ಮಗುವಿನ ಪೋಷಕರು ಕೇಕ್ ಕತ್ತರಿಸಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳಿಗೆ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss