Wednesday, August 17, 2022

Latest Posts

ಮಂಗಳೂರು| ಕೊರೋನಾ ಪತ್ತೆ: ಯೆಯ್ಯಾಡಿ ಗುಂಡಳಿಕೆ ಈಗ ಕಂಟೈನ್ಮೆಂಟ್ ಝೋನ್, ಪ್ರದೇಶ ಸೀಲ್‌ಡೌನ್

ಮಂಗಳೂರು: ನಗರದ ಯೆಯ್ಯಾಡಿ ಗುಂಡಳಿಕೆ ಪ್ರದೇಶದ ಮಹಿಳೆಯೊಬ್ಬರಲ್ಲಿ ಸೋಮವಾರ ಕೊರೋನೊ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಯೆಯ್ಯಾಡಿ ಗುಂಡಳಿಕೆ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಆಗಿ ಘೋಷಿಸಿ ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ಮಂಗಳವಾರ ಆದೇಶ ಹೊರಡಿಸಿದ್ದು, ಈ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದೆ.
ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದ 55 ವರ್ಷದ ಮಹಿಳೆಯ (ರೋಗಿ ಸಂಖ್ಯೆ 1234) ಗಂಟಲ ದ್ರವದ ಮಾದರಿಯ ಪರೀಕ್ಷೆ ನಡೆಸಿದಾಗ ಸೋಮವಾರ ಕೋವಿಡ್ 19- ದೃಢಪಟ್ಟಿದ್ದು, ಇವರಿಗೆ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇವರ ರೋಗ ಮೂಲ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಕದ್ರಿ ಗ್ರಾಮದ ಯೆಯ್ಯಾಡಿ ಗುಂಡಳಿಕೆ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಆಗಿ ಘೋಷಿಸಲಾಗಿದೆ. ಈ ಪ್ರದೇಶದಲ್ಲಿ 14 ಮನೆಗಳಿದ್ದು, 48 ಮಂದಿ ವಾಸಿಸುತ್ತಿದ್ದಾರೆ. ಯಾವುದೇ ಅಂಗಡಿ, ಕಚೇರಿ, ಶಾಲೆಗಳು ಇಲ್ಲ. ಈ ಸ್ಥಳದ ಸುತ್ತಲಿನ 5 ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ಬಫರ್ ಝೋನ್ ಆಗಿ ಗುರುತಿಸಲಾಗಿದೆ. ಈ ಪ್ರದೇಶದಲ್ಲಿ ಕೋವಿಡ್ 19 ನಿಯಂತ್ರಣಕ್ಕಾಗಿ ಮಂಗಳೂರು ಮಹಾನಗರ ಪಾಲಿಕೆ ಎಕ್ಸಿಕ್ಯೂಟಿವ್ ಎಂಜಿನಿಯರ್-1 ಅವರನ್ನು ಇನ್ಸಿಡೆಂಟ್ ಕಮಾಂಡರ್ ಆಗಿ ನೇಮಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!