Wednesday, July 6, 2022

Latest Posts

ಕಸಾಯಿಖಾನೆಗೆ ಗೋವುಗಳ ಅಕ್ರಮ ಸಾಗಾಟ : ಕುದ್ರೋಳಿ ಕಸಾಯಿಖಾನೆಗೆ ಮೇಯರ್ ದಿವಾಕರ ನೇತೃತ್ವದಲ್ಲಿ ದಿಢೀರ್ ದಾಳಿ

ಮಂಗಳೂರು: ಸಾರ್ವಜನಿಕರ ದೂರು ಹಾಗೂ ಅನಧಿಕೃತವಾಗಿ ಜಾನುವಾರುಗಳನ್ನು ಸಾಗಿಸುವ ವಾಹನಗಳನ್ನು ಪೊಲೀಸರು ತಡೆಹಿಡಿದ ಘಟನೆಗಳ ಹಿನ್ನೆಲೆಯಲ್ಲಿ ಮೇಯರ್ ದಿವಾಕರ ಪಾಂಡೇಶ್ವರ ನೇತೃತ್ವದಲ್ಲಿ ಬುಧವಾರ ಬೆಳಗ್ಗೆ ಕುದ್ರೋಳಿ ಕಸಾಯಿಖಾನೆಗೆ ದಿಢೀರ್ ದಾಳಿ ನಡೆಸಲಾಯಿತು.

ಗೋವುಗಳನ್ನು ಕಳ್ಳತನ ನಡೆಸಿ, ಅಕ್ರಮವಾಗಿ ಸಾಗಾಟ ಮಾಡಿ ಕುದ್ರೋಳಿ ಕಸಾಯಿಖಾನೆಗೆ ಪೂರೈಕೆ ಮಾಡಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಯಿತು.ಅಕ್ರಮವಾಗಿ ಸಾಗಿಸಿದ ಜಾನುವಾರುಗಳನ್ನು ವಧೆ ನಡೆಸಲಾಗಿದೆಯೇ ಎಂಬ ಬಗ್ಗೆ ಪರಿಶೀಲನೆ ಮಾಡಲಾಯಿತು. ಗೋಮಾಂಸ ಅಕ್ರಮವಾಗಿ ಮಾರಾಟ ನಡೆಸಿದರೆ ಪರವಾನಿಗೆ ರದ್ದು ಮಾಡಲಾಗುವುದು ಎಂದು ಮೇಯರ್ ಈ ಸಂದರ್ಭ ಎಚ್ಚರಿಕೆ ನೀಡಿದರು.

ನಗರದ ಉರ್ವ ಮಾರ್ಕೆಟ್ ಸಹಿತ ವಿವಿಧ ಮಾಂಸದ ಅಂಗಡಿಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು. ಮನಪಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಪೂರ್ಣಿಮಾ, ಕಿರಣ್ ಕುಮಾರ್, ಮ.ನ.ಪಾ ಸದ್ಯಸ ಸುಧೀರ್ ಶೆಟ್ಟಿ, ಪರಿಸರ ಇಂಜಿನಿಯರ್ ಶಬರಿನಾಥ ರೈ, ಆರೋಗ್ಯ ನಿರೀಕ್ಷಕರು, ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss