Thursday, August 18, 2022

Latest Posts

ಮಂಗಳೂರು: ನರೇಂದ್ರ ಮೋದಿ ಜನ್ಮ ದಿನಾಚರಣೆ ಅಂಗವಾಗಿ ರಕ್ತದಾನ ಶಿಬಿರ

ಮಂಗಳೂರು: ನಗರದ ಜೋಡುಮಠ ರಸ್ತೆ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ 70 ನೇ ಜನ್ಮ ದಿನಾಚರಣೆ ಅಂಗವಾಗಿ ಟಿವಿ ರಮಣ ಪೈ ಸಭಾಂಗಣದಲ್ಲಿ ಗುರುವಾರ ರಕ್ತದಾನ ಶಿಬಿರ ನಡೆಯಿತು.

ಈ ಸಂದರ್ಭ ಮಾತನಾಡಿದ ಶಾಸಕ ಡಿ. ವೇದವ್ಯಾಸ ಕಾಮತ್, ಪ್ರಧಾನಿ ಮೋದಿ ಅವರ ಜನ್ಮದಿನದಂದು ನೂರಾರು ಮಂದಿ ರಕ್ತದಾನ ನಡೆಸುವ ಮೂಲಕ ಮೋದಿ ಅವರ ನಾಯಕತ್ವದ ಜತೆ ನಾವಿದ್ದೇವೆ ಎಂಬ ಸಂದೇಶ ನೀಡಿದ್ದಾರೆ. ಭಾರತವನ್ನು ವಿಶ್ವಗುರುವಾಗಿಸುವ ಕಾರ್ಯದಲ್ಲಿ ತೊಡಗಿರುವ ಪ್ರಧಾನಿ ಮೋದಿ ಅವರಿಗೆ ದೇವರು ಇನ್ನಷ್ಟು ವರ್ಷಗಳ ಕಾಲ ಆಯಸ್ಸು,ಆರೋಗ್ಯ ಕರುಣಿಸಲಿ ಎಂದರು.

ಮೇಯರ್ ದಿವಾಕರ ಪಾಂಡೇಶ್ವರ ಶಿಬಿರ ಉದ್ಘಾಟಿಸಿದರು. ಮೋದಿಯವರ 70 ನೇ ಜನ್ಮದಿನವಾಗಿರುವುದರಿಂದ ರಕ್ತದಾನ ಮಾಡಲು ಆಗಮಿಸಿದ ಮೊದಲ 70 ರಕ್ತದಾನಿಗಳಿಗೆ ಮೋದಿಯವರ ಆಕರ್ಷಕ ಚಿತ್ರವಿರುವ ಟೀ ಶರ್ಟ್, ಮಾಸ್ಕ್, ರಿಸ್ಟ್ ಬ್ಯಾಂಡ್, ಮಗ್ಗ್ ಮತ್ತು ಕೇಂದ್ರ ಸರಕಾರದ ಆಯುಷ್ ಇಲಾಖೆಯಿಂದ ಪ್ರಮಾಣೀಕೃತ ಒಂದು ತಿಂಗಳಿಗಾಗುವಷ್ಟು ಆಯುಷ್ ಕ್ವಾಥ್ ಚೂರ್ಣ, ಹೊಸದಿಗಂತ ಪತ್ರಿಕೆ ವಿತರಿಸಲಾಯಿತು.

ಪ್ರಮುಖರಾದ ವಿನೋದ್ ಶೆಣೈ, ಹನುಮಂತ ಕಾಮತ್, ನರೇಶ್ ಶೆಣೈ, ಉದಯ ಪೂಜಾರಿ ಉಪಸ್ಥಿತರಿದ್ದರು.
ಬಿರುವೆರ್ ಕುಡ್ಲ ಕೇಂದ್ರೀಯ ಘಟಕ ಮಂಗಳೂರು, ಯುವ ಬ್ರಿಗೇಡ್ ದ.ಕ. ಜಿಲ್ಲೆ, ಕಾಳೀಚರಣ್ ಫ್ರೆಂಡ್ಸ್ ಬೋಳೂರು ಮಂಗಳೂರು, ಕೇಸರಿ ಯುವಕ ವೃಂದ ರಥಬೀದಿ ಮಂಗಳೂರು ಸಂಸ್ಥೆಗಳು ಸಹಯೋಗ ನೀಡಿದ್ದವು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!