ಮಂಗಳೂರು: ಆತಂಕ ಸೃಷ್ಟಿಸಿದ್ದ ಇಲ್ಲಿನ ಪಡೀಲ್ ಖಾಸಗಿ ಆಸ್ಪತ್ರೆಯಲ್ಲಿ ಕ್ವಾರಂಟೈನ್ನಲ್ಲಿದ್ದ ಎಲ್ಲಾ 198 ಮಂದಿಯ ಪರೀಕ್ಷಾ ವರದಿ ಬಂದಿದೆ. ಐದು ಮಂದಿಗೆ ಪಾಸಿಟಿವ್ ವರದಿ ಕಾಣಿಸಿಕೊಂಡದ್ದು ಬಿಟ್ಟರೆ ಉಳಿದೆಲ್ಲವೂ ನೆಗೆಟಿವ್ ಆಗಿರುವುದು ಸಮಾನಾಧಾನ ತಂದಿದೆ.
ಸೋಮವಾರ ಈ ಆಸ್ಪತ್ರೆಯಿಂದಲೇ ಎರಡು ಪಾಸಿಟಿವ್ ವರದಿ ಬಂದಿತ್ತು. ಆದರೆ ಸಂಜೆಯ ವೇಳೆಗೆ ಇಲ್ಲಿದ್ದ ಎಲ್ಲರ ವರದಿಗಳು ಬಂದಿದ್ದು, ನೆಗೆಟಿವ್ ಆಗಿದೆ.