Saturday, August 13, 2022

Latest Posts

ಮಂಗಳೂರು| ಪಡೀಲ್ ಬಳಿ ಹಳಿ ತಪ್ಪಿದ ವಲಸೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಶ್ರಮಿಕ್ ಎಕ್ಸ್‌ಪ್ರೆಸ್ ಇಂಜಿನ್

ಮಂಗಳೂರು: ನಗರದ ಪಡೀಲ್ ಬಳಿ ಸೋಮವಾರ ತಡರಾತ್ರಿ ಶ್ರಮಿಕ್ ರೈಲಿನ ಎಂಜಿನ್ ಹಳಿ ತಪ್ಪಿದ್ದು, ಯಾವುದೇ ಹಾನಿ ಸಂಭವಿಸಿಲ್ಲ.
ಕೇರಳದ ತಿರುರ್ ನಿಂದ ಜೈಪುರಕ್ಕೆ ವಲಸೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಶ್ರಮಿಕ್ ಎಕ್ಸ್‌ಪ್ರೆಸ್ ವಿಶೇಷ ರೈಲಿನ ಎಂಜಿನ್ ಮಧ್ಯರಾತ್ರಿ ವೇಳೆ ಹಳಿತಪ್ಪಿದೆ. ಇದರಿಂದಾಗಿ ಯಾವುದೇ ಪ್ರಯಾಣಿಕರಿಗೆ ಅಪಾಯ ಆಗಿಲ್ಲ. ರಾತ್ರಿ ಸುಮಾರು ೨ ಗಂಟೆ ವೇಳೆಗೆ ಘಟನೆ ಬೆಳಕಿಗೆ ಬಂದಿದ್ದು, ತಕ್ಷಣ ಕಾರ್ಯಪ್ರವೃತ್ತವಾದ ರೈಲ್ವೆ ಇಲಾಖೆ ರೈಲಿಗೆ ಬದಲಿ ಎಂಜಿನ್ ಜೋಡಿಸುವ ಕೆಲಸ ನಿರ್ವಹಿಸಿದೆ. ಬೆಳಗ್ಗೆ ೪ರ ವೇಳೆಗೆ ಬದಲಿ ಎಂಜಿನ್ ವ್ಯವಸ್ಥೆ ಮಾಡಿದ್ದು, ರೈಲು  ಪ್ರಯಾಣ ಆರಂಭಿಸಿದೆ.
ಸೋಮವಾರ ಬೆಳಗ್ಗೆ ಸುರಿದ ಭಾರಿ ಮಳೆಗೆ ಪಡೀಲ್ ರೈಲ್ವೆ ಹಳಿ ಸನಿಹ ಭೂಕುಸಿತ ಉಂಟಾಗಿದ್ದು, ಇದರಿಂದಾಗಿ ರೈಲಿನ ಎಂಜಿನ್ ಹಳಿ ತಪ್ಪಿದೆ ಎನ್ನಲಾಗಿದೆ. ಹಳಿ ತಪ್ಪಿರುವ ಎಂಜಿನ್‌ನ್ನು ತೆರವುಗೊಳಿಸಲು ರೈಲ್ವೆ ಇಲಾಖೆ ಕ್ರಮ ಕೈಗೊಂಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss