Tuesday, August 16, 2022

Latest Posts

ಮಂಗಳೂರು| ಪೈಪ್‌ಲೈನ್ ದುರಸ್ತಿ: ಮೇ 26ರಂದು ನಗರದ ವಿವಿಧೆಡೆ ನೀರು ಪೂರೈಕೆ ಸ್ಥಗಿತ

ಮಂಗಳೂರು: ಪೈಪ್‌ಲೈನ್ ದುರಸ್ತಿ ಹಿನ್ನೆಲೆಯಲ್ಲಿ ಮೇ ೨೬ರಂದು ನಗರದ ವಿವಿಧ ಕಡೆ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ.
ಮಂಗಳೂರು ಮಹಾನಗರ ಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯ ತುಂಬೆ ಎಚ್‌ಎಲ್‌ಪಿಎಸ್ -೧ ೧೮ ಎಂಜಿಡಿ ರೇಚಕ ಸ್ಥಾವರದ ಪಂಪಿಂಗ್ ಮಾಡುವ ೭೫೦ ಎಂಎಂ ಅಶ್ವಶಕ್ತಿಯ ಮುಖ್ಯ ಕೊಳವೆ ಸೋರಿಕೆ ಉಂಟಾಗಿದ್ದು, ತುರ್ತಾಗಿ ದುರಸ್ತಿಗೊಳಿಸಬೇಕಿದೆ.
ಈ ಹಿನ್ನೆಲೆಯಲ್ಲಿ ಮೇ ೨೬ರಂದು ಬೆಳಗ್ಗೆ ೮ರಿಂದ ಮೇ ೨೭ರಂದು ಬೆಳಗ್ಗೆ  ೮ರವರೆಗೆ ೨೪ ಗಂಟೆ ಅವಧಿಯಲ್ಲಿ ಸುರತ್ಕಲ್, ಪಣಂಬೂರು, ಕುಳಾಯಿ, ಕಾನ, ಕಾಟಿಪಳ್ಳ, ಎನ್‌ಐಟಿಕೆ, ಸಸಿಹಿತ್ಲು, ಕಾರ್‌ಸ್ಟ್ರೀಟ್, ಕೊಟ್ಟಾರ, ಭಾಗಶಃ ಬೆಂದೂರು ಲೋ ಲೆವೆಲ್ ಪ್ರದೇಶಗಳಾದ ಕುದ್ರೋಳಿ ಫಿಶಿಂಗ್ ಹಾರ್ಬರ್, ಕೊಡಿಯಾಲ್‌ಬೈಲ್ ಮುಂತಾದ ಪ್ರದೇಶಗಳಿಗೆ ಸಂಪೂರ್ಣವಾಗಿ ನೀರು ಪೂರೈಕೆ ಸ್ಥಗಿತಗೊಳಿಸಲಾಗುವುದು ಎಂದು ಮನಪಾ ಕಾರ್ಯಪಾಲಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss