Tuesday, July 5, 2022

Latest Posts

ಮಂಗಳೂರು ಬಳಿ ಅವಘಡ: ಆಳ ಸಮುದ್ರ ಮೀನುಗಾರಿಕೆ ಬೋಟ್‌ಗೆ ಮಡಲ್‌ಮೀನ್ ಡಿಕ್ಕಿ

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಆಳ ಸಮುದ್ರ ಮೀನುಗಾರಿಕೆಯಲ್ಲಿ ತೊಡಗಿದ್ದ ಬೋಟ್‌ವೊಂದು ಭಾರೀ ಗಾತ್ರದ ಮೀನಿಗೆ ಡಿಕ್ಕಿಯಾಗಿ ಹಾನಿಗೊಳಗಾದ ಘಟನೆ ಮಂಗಳೂರು ಸಮೀಪದ ಕಡಲಿನಲ್ಲಿ ನಡೆದಿದೆ.
ಸ್ಥಳೀಯ ತುಳು ಭಾಷೆಯಲ್ಲಿ ಮಡಲ್ ಮೀನ್ ಎಂದು ಕರೆಯಲ್ಪಡುವ ಈ ಭಾರೀ ಗಾತ್ರದ, ಚೂಪು ಬಾಯಿ ಹೊಂದಿರುವ ಈ ಮೀನು ಇಂದು ಆಳಸಮುದ್ರ ಮೀನುಗಾರಿಕೆ ನಡೆಸುತ್ತಿದ್ದ ಬೋಟಿಗೆ ಡಿಕ್ಕಿಯಾಗಿದ್ದು, ಬೋಟ್‌ಗೆ ತೀವ್ರ ಹಾನಿಯಾಗಿದ್ದರೆ, ಮೀನಿನ ಬಾಯಿಗೆ ಕೂಡಾ ಗಂಭೀರ ಗಾಯವಾಗಿ ರಕ್ತಸ್ರಾವ ಉಂಟಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss