ಮಂಗಳೂರು -ಬೆಳಗಾವಿಯಲ್ಲಿ ಸೆಮಿಕಂಡಕ್ಟರ್ ಘಟಕ ಸ್ಥಾಪಿಸಿ: ಇಂಟೆಲ್‌ಗೆ ರಾಜ್ಯ ಸರಕಾರ ಆಹ್ವಾನ

0
133

ಬೆಂಗಳೂರು: ಕೊರೋನಾ ಪಿಡುಗಿನ ನಡುವೆಯೇ ದೇಶದಲ್ಲಿ ಆರ್ಥಿಕ ಚಟುವಟಿಕೆಗೆ ಹೊಸ ಆಯಾಮ ನೀಡುವಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿದ್ದು, ಇದರಂತೆ , ಸೆಮಿ ಕಂಡಕ್ಟರ್ ದೈತ್ಯ ಇಂಟೆಲ್ ಸಂಸ್ಥೆಗೆ ರಾಜ್ಯದಲ್ಲಿ ತನ್ನ ತಯಾರಿಕ ಘಟಕ ಸ್ಥಾಪಿಸುವಂತೆ ರಾಜ್ಯ ಸರಕಾರ ಆಹ್ವಾನ ನೀಡಿದೆ. ಎಲ್ಲ ಅನುಕೂಲಗಳಿರುವ ಮಂಗಳೂರು ಅಥವಾ ಬೆಳಗಾವಿಯಲ್ಲಿ ಇಂತಹ ಘಟಕವನ್ನು ಸ್ಥಾಪಿಸಬಹುದಾಗಿದೆ ಎಂದೂ ಸರಕಾರ ಪ್ರಸ್ತಾವಿಸಿದೆ.
ಐಟಿ -ಬಿಟಿ ಖಾತೆಯನ್ನೂ ಹೊಂದಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವಥ್ ನಾರಾಯಣ ಅವರು ಬುಧವಾರ ಇಂಟೆಲ್ ಇಂಡಿಯಾದ ಭಾರತೀಯ ಮುಖ್ಯಸ್ಥ ನಿವೃತಿ ರಾಯ್ ಹಾಗೂ ಸಂಸ್ಥೆಯ ಇತರ ಉನ್ನತ ಅಕಾರಿಗಳ ಜತೆ ನಡೆಸಿದ ವಿಡಿಯೋ ಕಾನರೆನ್ಸ್ ಸಂವಾದದ ವೇಳೆ ಮಂಗಳೂರು ಅಥವಾ ಬೆಳಗಾವಿಯಲ್ಲಿ ಸೆಮಿಕಂಡಕ್ಟರ್ ಘಟಕ ಸ್ಥಾಪಿಸಲು ರಾಜ್ಯ ಸರ್ಕಾರ ಪೂರ್ಣ ಸಹಕಾರ ನೀಡುವುದೆಂದು ಭರವಸೆಯಿತ್ತಿದ್ದಾರೆ.
ಕರ್ನಾಟಕದಲ್ಲಿ ತಯಾರಿಸಲಾಗುವ ಸೆಮಿ ಕಂಡಕ್ಟರ್ ಗಳನ್ನು ಸಮುದ್ರ ಮಾರ್ಗದ ಮೂಲಕ ರಪ್ತು ಮಾಡಲು ಮಂಗಳೂರಿನಲ್ಲಿ ಬಂದರು ಸೌಲಭ್ಯವಿದೆ. ಬೆಳಗಾವಿಯಿಂದ ಕೆಲವೇ ಗಂಟೆಗಳಲ್ಲಿ ಗೋವಾ ಬಂದರು ತಲುಪಬಹುದಾಗಿದೆ.ಸಂಸ್ಥೆಯೇನಾದರೂ ತನ್ನ ಉತ್ಪಾದನಾ ಘಟಕಗಳನ್ನು ರಾಜ್ಯದಲ್ಲಿ ಸ್ಥಾಪಿಸಲು ಮುಂದಾದರೆ ಸರ್ವ ಅನುಕೂಲವನ್ನೂ ಕಲ್ಪಿಸಲಾಗುವುದು ಎಂದೂ ಆಶ್ವಾಸನೆಯಿತ್ತಿದ್ದಾರೆ.
ಇದೇ ವೇಳೆ, ಇಂಟೆಲ್ ಉದ್ಯಮ ಕಾರ್ಯಾಚರಣೆಯ ನಿರ್ದೇಶಕ ಮಾನಸ್ ದಾಸ್ ಅವರು ಮುಖ್ಯಮಂತ್ರಿಗಳ ಪರಿಹಾರ ನಿಗೆ ಒಂದು ಕೋ.ರೂ.ನೆರವು ಪ್ರಕಟಿಸಿ, ಕೋವಿಡ್ -೧೯ ಸಾಂಕ್ರಾಮಿಕ ನಿರ್ವಹಣೆಯಲ್ಲಿ ಕರ್ನಾಟಕ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಶ್ಲಾಘಿಸಿದರು.ಸಂಸ್ಥೆಯ ಉನ್ನತ ಅಕಾರಿಗಳಾದ ಅನಂತ ನಾರಾಯಣ್, ಜಿತೇಂದ್ರ ಚೆಡ್ಡಾ, ಆನಂದ್ ದೇಶಪಾಂಡೆ, ಅಂಜಲಿ ರಾವ್ ವರ್ಟಿಕಲ್ ಸೊಲ್ಯೂಷನ್ಸ್ ಉಪಾದ್ಯಕ್ಷ ಕಿಶೋರ್ ರಾಮಿ ಸೆಟ್ಟಿ ,ಡಾ. ಅಶ್ವಥ್ ನಾರಾಯಣ್ ಅವರೊಂದಿಗೆ ವಿಡಿಯೋ ಕಾನ್ಪರೆನ್ಸ್ ಸಂವಾದ ನಡೆಸಿದರು.

LEAVE A REPLY

Please enter your comment!
Please enter your name here