Wednesday, August 10, 2022

Latest Posts

ಮಂಗಳೂರು| ಮಾದಕ ದ್ರವ್ಯ ಮಾರಾಟ: ಆರೋಪಿಗಳು ಪೊಲೀಸ್ ಕಸ್ಟಡಿಗೆ

ಮಂಗಳೂರು: ಮಾದಕ ದ್ರವ್ಯ ಮಾರಾಟ ಮತ್ತು ಸೇವನೆಯ ಆರೋಪದಲ್ಲಿ ಶನಿವಾರ ಬಂಧಿತರಾಗಿದ್ದ ಡ್ಯಾನ್ಸರ್, ಕೊರಿಯೊಗ್ರಾಫರ್ ಕಿಶೋರ್ ಅಮನ್ ಶೆಟ್ಟಿ (30) ಮತ್ತು ಅಕೀಲ್ ನೌಶೀಲ್ (28) ಅವರನ್ನು ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಆರೋಪಿಗಳನ್ನು ನ್ಯಾಯಾಧೀಶರ ಮನೆಗೆ ಹಾಜರುಪಡಿಸಿದ ಬಳಿಕ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ.
ಭಾನುವಾರ ಇಬ್ಬರನ್ನೂ ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ಸೋಮವಾರ ವರದಿ ದೊರೆಯುವ ನಿರೀಕ್ಷೆಯಿದೆ. ಅಲ್ಲಿಯವರೆಗೆ ಪೂರ್ಣ ಪ್ರಮಾಣದಲ್ಲಿ ವಿಚಾರಣೆ ಆರಂಭಿಸುವಂತಿಲ್ಲ. ನೆಗೆಟಿವ್ ವರದಿ ಬಂದರೆ ವಿಚಾರಣೆ ಮುಂದುವರಿಯಲಿದೆ, ಪಾಸಿಟಿವ್ ಬಂದರೆ ಸರಕಾರದ ಮಾರ್ಗಸೂಚಿ ಅನ್ವಯ ಚಿಕಿತ್ಸೆ ಪ್ರಕ್ರಿಯೆ ನಡೆಯಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆರ್ಥಿಕ ಸಂಕಷ್ಟದಿಂದ ದಂಧೆ ಶುರುಮಾಡಿದ್ದ
ಪ್ರಾಥಮಿಕ ವಿಚಾರಣೆಯಲ್ಲಿ ಕಿಶೋರ್ ಕುಮಾರ್ ಮಾದಕ ದ್ರವ್ಯ ವ್ಯಸನಿಯಾಗಿದ್ದರೂ ಡ್ರಗ್ಸ್ ದಂಧೆ ಶುರು ಮಾಡಿದ್ದು ತೀರ ಇತ್ತೀಚೆಗೆ ಎನ್ನುವ ಅಂಶ ತಿಳಿದುಬಂದಿದೆ. ಮುಂಬೈನಲ್ಲಿ ಕೆಲವು ಚಿತ್ರಗಳಲ್ಲಿ ಚಿಕ್ಕ ಪುಟ್ಟ ಪಾತ್ರ ನಿರ್ವಹಿಸುತ್ತ, ಡ್ಯಾನ್ಸರ್ ಆಗಿದ್ದ ಆತ ಕೆಲ ತಿಂಗಳ ಹಿಂದೆ ಮಂಗಳೂರಿಗೆ ಆಗಮಿಸಿದ್ದ. ಇಲ್ಲಿನ ಕುಳಾಯಿಗುಡ್ಡೆಯಲ್ಲಿ ಚಿಕ್ಕ ಹಂಚಿನ ಮನೆಯಲ್ಲಿ ಅವನ ಕುಟುಂಬ ವಾಸವಾಗಿದೆ. ಕೊರೋನಾ ಲಾಕ್‌ಡೌನ್ ಬಳಿಕ ತೀವ್ರ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದ. ಹಾಗಾಗಿ ಡ್ರಗ್ಸ್ ದಂಧೆಯನ್ನು ಶುರು ಮಾಡಿಕೊಂಡಿದ್ದ. ಮುಂಬೈ ಸ್ನೇಹಿತರ ನಂಟು ಇದ್ದುದರಿಂದ ಅನ್‌ಲಾಕ್ ಬಳಿಕ ಅಲ್ಲಿಂದ ಡ್ರಗ್ಸ್ ತರಿಸಿಕೊಂಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss