Sunday, April 11, 2021

Latest Posts

ಮಂಗಳೂರು| ಮೊದಲ ಲಸಿಕೆ ಪಡೆದ ವೆನ್ಲಾಕ್ ಆಸ್ಪತ್ರೆಯ ಡಿ ಗ್ರೂಪ್ ಸಿಬ್ಬಂದಿ ರಾಬಿನ್ ಆ್ಯಂಟನಿ

ಹೊಸ ದಿಗಂತ ವರದಿ ಮಂಗಳೂರು:

ಬಹುನಿರೀಕ್ಷಿತ ಕೋವಿಡ್ – 19 ಲಸಿಕೆ ವಿತರಣೆ ಗೆ ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಯಲ್ಲಿ ಶನಿವಾರ ಚಾಲನೆ ನೀಡಲಾಯಿತು.

ವೆನ್ಲಾಕ್ ಆಸ್ಪತ್ರೆ ವೈದ್ಯಕೀಯ ವಿಭಾಗದ ಡಿ ಗ್ರೂಪ್ ಸಿಬ್ಬಂದಿ ರಾಬಿನ್ ಆ್ಯಂಟನಿ ಮೊಂತೆರೊ ಮೊದಲ ಲಸಿಕೆ ಪಡೆದುಕೊಂಡರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 52381 ಮಂದಿ ಆರೋಗ್ಯ ಸಿಬ್ಬಂದಿ ಗೆ ಲಸಿಕೆ ನೀಡುವ ಗುರಿ ಹೊಂದಲಾಗಿದ್ದು, ಶನಿವಾರ ವೆನ್ಲಾಕ್ ನಲ್ಲಿ 100 ಮಂದಿಗೆ ಲಸಿಕೆ ವಿತರಿಸಲಾಗುತ್ತಿದೆ.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕೊರೋನಾ ನಿಯಂತ್ರಣದಲ್ಲಿ ನಮ್ಮ ದೇಶ ಯಶಸ್ವಿಯಾಗುತ್ತಿದೆ. ಲಸಿಕೆ ಮೂಲಕ ಕೊರೋನಾ ವಿರುದ್ಧದ ಹೋರಾಟದಲ್ಲಿ ನಾವು ಮೈಲಿಗಲ್ಲು ಸಾಧಿಸಿದ್ದೇವೆ . ಲಸಿಕೆ ಬಂತೆಂದು ಮಾಸ್ಕ್ ಧರಿಸುವುದನ್ನು ಮರೆಯಬಾರದು ಎಂದರು.

ಸಚಿವ ಎಸ್. ಅಂಗಾರ ಮಾತನಾಡಿ, ಕೋವಿಡ್ ಗೆ ಲಸಿಕೆ ಬಂದರೂ , ಕೊರೋನಾ ಗೆ ಸಂಬಂಧಿಸಿ ಸರಕಾರದ ನಿಯಮಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು. ಲಸಿಕೆ ವಿಚಾರದಲ್ಲಿ ಯಾರೂ ಅಪಪ್ರಚಾರ ಮಾಡಬಾರದು. ಗಾಬರಿಪಡುವ ಅಗತ್ಯವೂ ಇಲ್ಲ ಎಂದರು.

ಶಾಸಕರಾದ ಡಾ. ವೈ. ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಮೇಯರ್ ದಿವಾಕರ ಪಾಂಡೇಶ್ವರ, ಡಿಸಿ ಡಾ. ರಾಜೇಂದ್ರ ಕೆ.ವಿ. ಮತ್ತಿತರರು ಉಪಸ್ಥಿತರಿದ್ದರು

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss