Wednesday, August 10, 2022

Latest Posts

ಮಂಗಳೂರು| ಮೊಬೈಲ್ ಅಂಗಡಿಯ ಗೋಡೆ ಕುಸಿತ: ಯುವಕನಿಗೆ ಗಾಯ

ಮಂಗಳೂರು: ನಗರದ ಸ್ಟೇಟ್‌ಬ್ಯಾಂಕ್ ಬಳಿಯ ರಾವ್ ಆಂಡ್ ರಾವ್ ವೃತ್ತದ ನೆಲ್ಲಿಕಾಯಿ ರಸ್ತೆ ಬಳಿ ಶನಿವಾರ ಮೊಬೈಲ್ ಅಂಗಡಿಯೊಂದರ ಗೋಡೆ ಕುಸಿದು ಯುವಕನೊಬ್ಬ ಗಾಯಗೊಂಡಿದ್ದಾರೆ.
ಸಂಶುದ್ದೀನ್ (26) ಗಾಯಗೊಂಡ ಯುವಕ. ಮೊಬೈಲ್ ಅಂಗಡಿಯಲ್ಲಿ ತಾತ್ಕಾಲಿಕ ರಚನೆಯನ್ನು ವಿಸ್ತರಿಸುತ್ತಿದ್ದ ವೇಳೆ ಶೀಟ್ ಸಹಿತ ಗೋಡೆ ಕೂಡಾ ಕುಸಿದಿದೆ. ಗೋಡೆ ಕುಸಿದ ಪರಿಣಾಮ ಸಂಶುದ್ದೀನ್ ಅವರಿಗೆ ಗಾಯವಾಗಿದ್ದು, ತಕ್ಷಣ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸ್ಥಳದಲ್ಲಿ ಪರಿಶೀಲನೆ ನಡೆಸಲಾಗಿದ್ದು, ಇತರ ಯಾರಿಗೂ ಗಾಯಗಳಾಗಿಲ್ಲ ಎಂದು ಸ್ಥಳಕ್ಕೆ ಭೇಟಿ ನೀಡಿದ ಮಂಗಳೂರು ದಕ್ಷಿಣ ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss