Wednesday, June 29, 2022

Latest Posts

ಮಂಗಳೂರು| ಲಾಕ್‌ಡೌನ್ ನಡುವೆ ನಗರಕ್ಕೆ ವಿಸಿಟ್ ಕೊಟ್ಟಿದ್ದ ಕಾಡುಕೋಣ ಸಾವು

ಮಂಗಳೂರು: ಮಂಗಳವಾರ ಬೆಳ್ಳಬೆಳಗ್ಗೆ ನಗರದಲ್ಲಿ ಪ್ರತ್ಯಕ್ಷವಾಗಿದ್ದ ಕಾಡುಕೋಣ ಸಂಜೆಯ ವೇಳೆಗೆ ಸಾವನ್ನಪ್ಪಿದೆ.
ಬಳ್ಳಾಲ್‌ಭಾಗ್, ಹ್ಯಾಟ್‌ಹಿಲ್, ಮಣ್ಣಗುಡ್ಡ ಪರಿಸರದಲ್ಲಿ ಕಾಣಿಸಿಕೊಂಡಿದ್ದ ಈ ಕಾಡುಕೋಣ, ಜನರನ್ನು ನೋಡುತ್ತಲೇ ಒಂದು ಕಡೆಯಿಂದ ಇನ್ನೊಂದು ಕಡೆ ಓಡಲು ಪ್ರಾರಂಭಿಸಿತ್ತು. ತಕ್ಷಣ ಸ್ಥಳೀಯರು ಪೊಲೀಸ್ ಮತ್ತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಳಗ್ಗೆ 8 ರಿಂದ ಕಾರ್ಯಾಚರಣೆ ಕೈಗೊಂಡರು. ಸುಮಾರು ಮೂರುವರೆ ತಾಸಿನ ಕಾರ್ಯಾಚರಣೆಯಲ್ಲಿ ಅರಣ್ಯ ಅಧಿಕಾರಿಗಳು ಅರಿವಳಿಕೆ ಇಂಜೆಕ್ಷನ್ ನೀಡಿ ಕಾಡುಕೋಣವನ್ನು ಸೆರೆ ಹಿಡಿದಿದ್ದಾರೆ. ಸ್ಥಳೀಯರ ಸಹಾಯದಿಂದ ಮಣ್ಣಗುಡ್ಡದ ವೇರ್ ಹೌಸ್ ಬಳಿ ಕಾಡುಕೋಣವನ್ನು ಸೆರೆ ಹಿಡಿಯಲಾಯಿತು. ಬಳಿಕ ಕಾಡುಕೋಣವನ್ನು ನಗರದ ಪಿಲಿಕುಳ ಡಾ. ಶಿವರಾಮ ಕಾರಂತ ನಿಸರ್ಗಧಾಮಕ್ಕೆ ರವಾನಿಸಲಾಗಿತ್ತು. ಇದೀಗ ಆ ಕಾಡುಕೋಣ ಸಾವನ್ನಪ್ಪಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss