Monday, August 15, 2022

Latest Posts

ಮಂಗಳೂರು ವಿವಿ ವ್ಯಾಪ್ತಿಯಲ್ಲಿ ಡ್ರಗ್ಸ್ ವಿರುದ್ಧ ಜನಜಾಗೃತಿ

ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಡ್ರಗ್ಸ್ ಬಗ್ಗೆ ಜನಜಾಗೃತಿ ನಡೆಸಲು ವಿಶೇಷ ಪ್ರಯತ್ನ ನಡೆಸಲಾಗುವುದು. ಮಂಗಳೂರು ವಿವಿ ಸಿಂಡಿಕೇಟ್ ಸಭೆಯಲ್ಲೂ ಈ ಬಗ್ಗೆ ವಿಶೇಷ ಚರ್ಚೆನಡೆಸಿ ಮುಂದಿನ ಕ್ರಮಗಳ ಬಗ್ಗೆ ಯೋಜನೆ ರೂಪಿಸಲಾಗುವುದು ಎಂದು ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯರಾದ ರವಿಚಂದ್ರ ಪಿ.ಎಂ. ಮತ್ತು ರಮೇಶ್ ಕೆ. ತಿಳಿಸಿದರು.
ಪ್ರತಿ ಕಾಲೇಜಿನಲ್ಲಿ ಡ್ರಗ್ಸ್ ಬಗ್ಗೆ ಜಾಗೃತಿ ಹಾಗೂ ಅದರ ದುಷ್ಪರಿಣಾಮಗಳ ಬಗ್ಗೆ ನಿಯಂತ್ರಣಕ್ಕಾಗಿ ಸಮಿತಿ ರಚನೆ ಮಾಡಿದ್ದು, ಇದನ್ನು ಇನ್ನಷ್ಟು ಬಲಿಷ್ಠಗೊಳಿಸಲಾಗುವುದು. ಕಾಲೇಜಿನ ವಿದ್ಯಾರ್ಥಿ ಸಂಘ, ಎನ್‌ಎಸ್‌ಎಸ್, ಎನ್‌ಸಿಸಿ ಮುಂತಾದ ಘಟಕಗಳು ಈ ಬಗ್ಗೆ ವಿಶೇಷ ಪ್ರಯತ್ನ ಮಾಡುವಂತೆ ತರಬೇತಿ ನೀಡಲಾಗುವುದು ಎಂದು ಗುರುವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಡ್ರಗ್ಸ್ ಜನಜಾಗೃತಿ
ಕಾಲೇಜಿನಲ್ಲಿ ವಾರ್ಷಿಕ ಆರಂಭದಲ್ಲಿ ವಿದ್ಯಾರ್ಥಿ ಜಾಗೃತಿ ಸಭೆ. ಕಾಲೇಜಿನಲ್ಲಿ ಈ ಬಗ್ಗೆ ಕಾರ್ಯಪಡೆ ರೂಪಿಸುವಿಕೆ. ಸ್ವಯಂಸೇವಾ ಸಂಸ್ಥೆ ಜತೆ ಸೇರಿ ಜನಜಾಗೃತಿ ಅಭಿಯಾನ. ಡ್ರಗ್ಸ್ ವಿರುದ್ಧ ಕಠಿಣ ಕಾನೂನು ರೂಪಿಸುವಂತೆ ರಾಜ್ಯ ಸರಕಾರಕ್ಕೆ ಮನವಿ. ವಿದ್ಯಾರ್ಥಿಗಳಿಂದ ನಾನು ಡ್ರಗ್ಸ್ ಸೇವನೆ ಮಾಡುವುದಿಲ್ಲ ಹಾಗೂ ಡ್ರಗ್ಸ್ ಬಗ್ಗೆ ಜಾಗೃತಿ ಕೆಲಸ ಬಗ್ಗೆ
ಸಂಕಲ್ಪ. ಡ್ರಗ್ಸ್ ಸಮಸ್ಯೆ ಬಗ್ಗೆ ಸಾಕ್ಷ್ಯಚಿತ್ರ ಪ್ರದರ್ಶನ ನಡೆಸಲಾಗುವುದು. ಡ್ರಗ್ಸ್ ಮಾರಾಟಗಾರರನ್ನು, ದುಶ್ಚಟಕ್ಕೆ ಬಲಿ ಬಿಳಿಸುತ್ತಿರುವರನ್ನು ಅದರ ಮೋಹಕ- ಸರ್ವನಾಶಕ ಜಾಲ ಸೃಷ್ಟಿಸುತ್ತಿರುವರನ್ನು ಬಗ್ಗು ಬಡಿಯಬೇಕು. ರಾಜ್ಯದ ಸಮಸ್ತ ಜನತೆ ಸರಕಾರದ ಕಠಿಣ ಕ್ರಮಗಳನ್ನು ಎದುರು ನೋಡುತ್ತದೆ ಎಂದರು.
ಡ್ರಗ್ಸ್ ನಿಯಂತ್ರಣ ಕೇವಲ ಪೋಲಿಸರ ಮತ್ತು ಸರಕಾರದ ಕೆಲಸವಲ್ಲ ಪ್ರತಿಯೊಬ್ಬ ಜಾಗೃತ ನಾಗರಿಕನೂ ಈ ಬಗ್ಗೆ ಸ್ಪಂದಿಸಬೇಕು. ಕಾನೂನು ರಕ್ಷಕರಿಗೆ ಸಕಾಲಕ್ಕೆ ಮಾಹಿತಿ ನೀಡಿ ಮುಂದೆ ಆಗುವ ಅನರ್ಥ ತಪ್ಪಿಸಬೇಕು. ಡ್ರಗ್ಸ್ ದಂಧೆಗೂ ದೇಶದ್ರೋಹಕ್ಕೂ ನಂಟಿದೆ. ಈ ದಂಧೆಯವರನ್ನು ರಕ್ಷಿಸುವುದು ದೇಶದ್ರೋಹದ ಕೃತ್ಯವಾಗುತ್ತದೆ. ಅದಕ್ಕೂ ಕಠಿಣ ದಂಡನೆಯಾಗಬೇಕು ಎಂದು ಆಗ್ರಹಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss