ಮಂಗಳೂರು: ಸಂಸ್ಕೃತ ಭಾರತಿ ಮಂಗಳೂರು ವತಿಯಿಂದ ಆನ್ಲೈನ್ನಲ್ಲಿ ಉಚಿತವಾಗಿ ಸಂಸ್ಕೃತ ಕಲಿಸುವ ‘ಸರಳ ಸಂಸ್ಕೃತ’ ಯೋಜನೆ ಘೋಷಿಸಲಾಗಿದ್ದು, 10 ವರ್ಷ ಮೇಲ್ಪಟ್ಟವರು ಮನೆಯಲ್ಲಿದ್ದುಕೊಂಡೇ ಸುಲಭವಾಗಿ ಸಂಸ್ಕೃತ ಕಲಿಯಬಹುದು ಎಂದು ಸಂಸ್ಥೆಯ ಅಧ್ಯಕ್ಷ ಎಂ.ಆರ್. ವಾಸುದೇವ ತಿಳಿಸಿದರು.
ಸಂಸ್ಕೃತ ಭಾರತಿ ಕರ್ನಾಟಕ ದಕ್ಷಿಣ ಪ್ರಾಂತದ ಸುಮಾರು 40 ಶಿಕ್ಷಕರು ನೋಂದಾಯಿತ ವಿದ್ಯಾರ್ಥಿಗಳಿಗೆ ಸಂಸ್ಕೃತ ಕಲಿಕಾ ಶಿಕ್ಷಣ ನೀಡಲಿದ್ದಾರೆ. ಶಿಕ್ಷಕರಿಗೆ ಪ್ರಶಿಕ್ಷಣ ಪ್ರಮುಖರಾಗಿ ಮಂಗಳೂರು ವಿಭಾಗದಿಂದ ತಲಪಾಡಿ ಶಾರದಾ ವಿದ್ಯಾನಿಕೇತನ ಶಾಲೆ ಶಿಕ್ಷಕಿ ಶೀಲಾಶಂಕರಿ ನಿಯುಕ್ತಿಗೊಂಡಿದ್ದಾರೆ. ಸೆಪ್ಟೆಂಬರ್ ಅಂತ್ಯದೊಳಗೆ ಹೆಸರು ನೋಂದಾಯಿಸಲು ಅವಕಾಶವಿದೆ. ಫೆಬ್ರವರಿಯಲ್ಲಿ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷಾ ಶುಲ್ಕ120 ರೂ. ಪಾವತಿಸಬೇಕು. ವಿವರಗಳಿಗೆ ದೂ. 9740071306, 8197503174 ಸಂಪರ್ಕಿಸಬಹುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
ಕೋವಿಡ್-19ನಿಂದಾಗಿ ಸಂಸ್ಕೃತ ಭಾರತಿ ನಡೆಸುವ ಪ್ರವೇಶ, ಪರಿಚಯ, ಶಿಕ್ಷಾ, ಕೋವಿದ ಕಲಿಯುವ ವಿದ್ಯಾರ್ಥಿಗಳಿಗೆ ಆನ್ಲೈನ್ನಲ್ಲಿ ಉಚಿತವಾಗಿ ಪಾಠ ಹೇಳಿಕೊಡಲಾಗುತ್ತಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮಂಗಳೂರು ವಿಭಾಗದಿಂದ ೫೦೦ಕ್ಕೂ ಅಕ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆಯುವ ನಿರೀಕ್ಷೆಯಿದೆ ಎಂದರು.
ಮಂಗಳೂರು ಸಂಸ್ಕೃತ ಭಾರತಿ ವಿಭಾಗ ಸಂಯೋಜಕ ಸತ್ಯನಾರಾಯಣ ಕೆ.ವಿ., ಸಂಯೋಜಕ ಗಜಾನನ ಬೋವಿಕಾನ, ಶಿಕ್ಷಣ ಪ್ರಮುಖ್ ಡಾ.ಮಧುಕೇಶ್ವರ ಶಾಸ್ತ್ರಿ ಉಪಸ್ಥಿತರಿದ್ದರು.