ಹೊಸ ದಿಗಂತ ವರದಿ, ಮಂಗಳೂರು:
ಸೇವಾ ಕ್ಷೇತ್ರದಲ್ಲಿ ತನ್ನದೇ ಆದ ಹೆಗ್ಗುರುತು ಮೂಡಿಸಿರುವ ಸೇವಾಂಜಲಿ ಟ್ರಸ್ಟ್ ಮಂಗಳೂರು ಇದೀಗ ವಿಮಾ ಕಂಪನಿಯ ಸಹಯೋಗದಿಂದ `ಸೇವಾಂಜಲಿ ಆರೋಗ್ಯ ಕಾರ್ಡ್’ನ್ನು ಪ್ರಾರಂಭಿಸಿದೆ. ಈ ಆರೋಗ್ಯ ಕಾರ್ಡ್ನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನ.5ರಂದು ಮಂಗಳೂರಿನಲ್ಲಿ ಬಿಡುಗಡೆಗೊಳಿಸಿದ್ದಾರೆ.
ಈ ಯೋಜನೆಯಲ್ಲಿ ಒಂದು ಕುಟುಂಬಕ್ಕೆ 50,000 ರೂಪಾಯಿ ವಿಮೆ ದೊರೆಯಲಿದೆ. 91 ದಿನದ ಮಗುವಿನಿಂದ ಹಿಡಿದು 85 ವರ್ಷದ ವರೆಗಿನವರು ಈ ಕಾರ್ಡ್ನ್ನು ಪಡೆಯಬಹುದು. ಕುಟುಂಬದ ಐದು ಸದಸ್ಯರು ಒಂದು ಕಾರ್ಡಿನಲ್ಲಿ ಸೇರಬಹುದು. ಇದರಲ್ಲಿ ಒಳರೋಗಿ, ಹೊರರೋಗಿ, ಮೊದಲ ಎರಡು ಮಕ್ಕಳ ಹೆರಿಗೆ ಸೇರಿದಂತೆ ಅಪಘಾತಕ್ಕೂ ವಿಮೆ ದೊರೆಯಲಿದೆ. ಒಳರೋಗಿ ಚಿಕಿತ್ಸೆಯ ಶೇ.೯೦ಬಿಲ್ಲನ್ನು ಕ್ಯಾಶ್ ಲೆಸ್ ಮೂಲಕ ಪಾವತಿಸಲಾಗುವುದು ಹಾಗೂ ಲ್ಯಾಬ್ ಟೆಸ್ಟ್, ಮೆಡಿಸಿನ್ ಹಾಗೂ ಹೊರರೋಗಿಗಳಿಗೆ ವೈದ್ಯರ ಪರೀಕ್ಷಾ ಶುಲ್ಕದಲ್ಲಿ ವಿನಾಯಿತಿ ದೊರೆಯಲಿದೆ. ಒಳರೋಗಿ ಸೌಲಭ್ಯ ಜನರಲ್ ವಾರ್ಡ್ ಗೆ ಸೀಮಿತವಾಗಿದೆ. ಅದಲ್ಲದೆ ಡಯಾಲೀಸಿಸ್, ಕಿಮಿಯೋಥೆರಪಿ, ಕಿಡ್ನಿಯಲ್ಲಿ ಕಲ್ಲು ತರಹದ ಚಿಕಿತ್ಸೆಯನ್ನು ಡೇ ಕೇರ್ ಮಾದರಿಯಲ್ಲಿ ಪಡೆಯಬಹುದು.
ಅಪಘಾತದಲ್ಲಿ ಮರಣಹೊಂದಿದರೆ ಕುಟುಂಬದವರಿಗೆ ವಿಮಾ ಪರಿಹಾರವಾಗಿ ರೂಪಾಯಿ 50,000 ದೊರೆಯಲಿದೆ. ಅಪಘಾತದಿಂದ ಶಾಶ್ವತ ಅಥವಾ ಪೂರ್ತಿ ಅಂಗವೈಕಲ್ಯತೆಯನ್ನು ಹೊಂದಿದ್ದಲ್ಲಿ ರೂ.50 ಸಾವಿರದ ವರೆಗೆ ವಿಮಾ ಪರಿಹಾರ ದೊರೆಯಲಿದೆ. ಈ ಎಲ್ಲಾ ಚಿಕಿತ್ಸೆ ಹಾಗೂ ಸೌಲಭ್ಯ ಕೆಎಂಸಿ ಆಸ್ಪತ್ರೆಗಳಲ್ಲಿ ಮಾತ್ರ ಒದಗಿಸಲಾಗುವುದು. ಈ ಹಿಂದೆ ಕೊಂಕಣಿ ಕಾರ್ಡ್ ಪಡೆದುಕೊಂಡವರು ತಮ್ಮ ಹಿಂದೆ ಪಡೆದ ಕಾರ್ಡಿನ ಜೆರಾಕ್ಸ್ ಪ್ರತಿ ಕೊಡಬೇಕು. ಕಾರ್ಡ್ ಪಡೆಯದೇ ಇರುವ ಸದಸ್ಯರು ಕೂಡ ಈ ಯೋಜನೆಯಲ್ಲಿ ಸೇರಬಹುದು. ವಿಮಾ ಕಂಪೆನಿಯ ಶರ್ತಗಳು ಅನ್ವಯವಾಗುತ್ತವೆ. ಒಂದು ಕಾರ್ಡಿಗೆ ರೂಪಾಯಿ ೧೫೦೦ ದೇಣಿಗೆ ಪಾವತಿಸಬೇಕು ಎಂದು ಸೇವಾಂಜಲಿ ಟ್ರಸ್ಟ್ ಪ್ರಕಟಣೆ ತಿಳಿಸಿದೆ.
ಹಿಂದೆ ಕಾರ್ಡ್ ಇರುವವರು ಹಾಗೂ ಹೊಸ ಕಾರ್ಡ್ ಬೇಕಾದ ಸದಸ್ಯರು ಅರ್ಜಿ ಮತ್ತು ಹೆಚ್ಚಿನ ವಿವರಗಳಿಗೆ ಶ್ರೀ ವಿಠೋಬಾ ರುಕುಮಾಯಿ ದೇವಸ್ಥಾನ, ವಿ ಟಿ ರಸ್ತೆ, ಮಂಗಳೂರು ಇಲ್ಲಿ ಸಂಜೆ ೫ ರಿಂದ ೭.೩೦ರ ಅವಧಿಯಲ್ಲಿ ಸಂಪರ್ಕಿಸಿ ಮಾಹಿತಿ ಪಡೆಯಬಹುದು. ಅಲ್ಲದೆ ಹೆಚ್ಚಿನ ಮಾಹಿತಿಗೆ ದಿನಕರ್ ಕಾಮತ್-9945296878, ಗೋವಿಂದ ಪ್ರಭು- ಅಟಲ್ ಸೇವಾ ಕೇಂದ್ರ, ಕಲಾ ಕುಂಜ, ಮಂಗಳೂರು-9481263237, ಕಾಶೀ ಮಠ, ಸುರತ್ಕಲ್ – ಮ್ಯಾನೇಜರ್- 9972272955, ಶ್ರೀ ವೆಂಕಟರಮಣ ದೇವಸ್ಥಾನ, ಪಡುಬಿದ್ರೆ- ರಾಮಚಂದ್ರ ಶೆಣೈ- 0820-2555403, ಶ್ರೀ ಲಕ್ಷ್ಮಿ ವೆಂಕಟೇಶ ದೇವಸ್ಥಾನ, ಉಡುಪಿ- ಸುರೇಶ್ ಭಟ್- 9480250207, ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನ, ಕೋಟೇಶ್ವರ- ಶ್ರೀಧರ್ ಕಾಮತ್- 9448221494, ಶ್ರೀ ವೆಂಕಟರಮಣ ದೇವಸ್ಥಾನ, ಕುಂದಾಪುರ- ನಾಗೇಶ್- 9341445118 ಇವರನ್ನು ಸಂಪರ್ಕಿಸಬಹುದು.