Friday, July 1, 2022

Latest Posts

ಮಂಗಳೂರು: ಹಾಲು ಸಾಗಿಸುವ ವಾಹನದಲ್ಲಿ ಗೋ ಮಾಂಸ ಅಕ್ರಮ ಸಾಗಾಟ ಪತ್ತೆ

ಮಂಗಳೂರು: ನಗರದಲ್ಲಿ ಮಂಗಳವಾರ ಮುಂಜಾನೆ ಹಾಲು ಸಾಗಿಸುವ ವಾಹನದಲ್ಲಿ ಗೋ ಮಾಂಸ ಅಕ್ರಮ ಸಾಗಾಟ ಪತ್ತೆ ಹಚ್ಚಿರುವ ಬಜರಂಗದಳ ಕಾರ್ಯಕರ್ತರು ಓರ್ವ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.
ಬಿಸಿರೋಡ್ ಕಡೆಯಿಂದ ಮಂಗಳೂರು ನಗರದೊಳಗೆ ಆಗಮಿಸುತ್ತಿದ್ದ ಆರೋಕ್ಯ ಹಾಲು ಪೂರೈಕೆ ವಾಹನದಲ್ಲಿ ಗೋಮಾಂಸ ಸಾಗಾಟ ಮಾಡಲಾಗುತ್ತಿದೆ ಎಂಬ ಅನುಮಾನದ ಮೇರೆಗೆ ಬಜರಂಗದಳ ಕಾರ್ಯಕರ್ತರು ಪಂಪ್ ವೆಲ್ ನಲ್ಲಿ ವಾಹನವನ್ನು ಅಡ್ಡಗಟ್ಟಿದ್ದರು. ವಾಹನ ಪರಾರಿಯಾಗಲು ಯತ್ನಿಸಿದಾಗ ನಗರದ ವೆನ್ಲಾಕ್ ಆಸ್ಪತ್ರೆ ಬಳಿ ವಾಹನ ಅಡ್ಡಗಟ್ಟುವಲ್ಲಿ ಕಾರ್ಯಕರ್ತರು ಯಶಸ್ವಿಯಾಗಿದ್ದಾರೆ. ಈ ವೇಳೆ ಒಬ್ಬ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದರು. ಇನ್ನಿಬ್ಬರು ಪರಾರಿಯಾಗಿದ್ದಾರೆ. ವಾಹನದಲ್ಲಿ ಐದು ಕ್ವಿಂಟಾಲ್ ಗೂ ಅಧಿಕ ಗೋ ಮಾಂಸ ಪತ್ತೆಯಾಗಿದೆ. ವಾಹನವನ್ನು ಬಂದರು ಠಾಣೆಗೆ ಒಯ್ಯಲಾಗಿದೆ.
ಬಿಸಿರೋಡ್ ಕಡೆಯಿಂದ ನಗರದ ಕಸಾಯಿಖಾನೆಗೆ ಹಾಲಿನ ವಾಹನದಲ್ಲಿ ಗೋ ಮಾಂಸವನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಇತ್ತು.ಅದರಂತೆ ಇಂದು ಬೆಳಗ್ಗಿನ ಜಾವ ಕಾದು ಕುಳಿತು ಕಾರ್ಯಾಚರಣೆ ನಡೆಸಲಾಗಿದೆ. ಹಾಲಿನ ವಾಹನದಲ್ಲಿ ಪ್ರತಿದಿನ ಗೋಮಾಂಸವನ್ನು ಕಸಾಯಿಖಾನೆಗೆ ಸಾಗಾಟ ಮಾಡಿ, ಅಲ್ಲಿಂದ ನಗರದ ವಿವಿಧ ಕಡೆಗಳಿಗೆ ಪೂರೈಸಲಾಗುತ್ತಿದೆ ಎಂದು ಬಜರಂಗದಳ ಮಂಗಳೂರು ಸಂಚಾಲಕ ಪುನೀತ್ ಅತ್ತಾವರ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss