Saturday, September 26, 2020
Saturday, September 26, 2020

Latest Posts

ಮನರಂಜನಾ ಕ್ಷೇತ್ರಕ್ಕೆ ವಿನಾಯಿತಿ ಕೊಟ್ಟ ದೀದಿ ಸರಕಾರ: ಅ. 1 ರಿಂದ ಚಿತ್ರಮಂದಿರಗಳು ಓಪನ್!

ಹೊಸದಿಲ್ಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೆಲವು ಷರತ್ತುಗಳೊಂದಿಗೆ ಮನರಂಜನಾ ಕ್ಷೇತ್ರಕ್ಕೆ ವಿನಾಯಿತಿ ನೀಡಿದ್ದಾರೆ. ಆದರೆ ಯಾವ ಕಾರ್ಯಕ್ರಮಗಳಿಗೂ ಹೆಚ್ಚು ಜನರು ಸೇರುವಂತಿಲ್ಲ, ವೈಯಕ್ತಿಕ ಅಂತರ ಕಾಪಾಡಿಕೊಳ್ಳಬೇಕು ಹಾಗೂ ಕಡ್ಡಾಯವಾಗಿ ಮಾಸ್ಕ್...

ಕೋವಿಡ್ ಟೆಸ್ಟ್​ ಬೆಲೆ ಮತ್ತಷ್ಟು ಕಡಿಮೆ ಮಾಡಿದ ರಾಜ್ಯ ಸರಕಾರ

ಬೆಂಗಳೂರು: ರಾಜ್ಯದಲ್ಲಿ ಕಾಡುತ್ತಿರುವ ಕೊರೋನಾ ಸೋಂಕಿನ ಪತ್ತೆಗೆ ಅನುಕೂಲ ಮಾಡಿಕೊಡಲು ಕೋವಿಡ್ ಟೆಸ್ಟ್​ ಬೆಲೆಯನ್ನು ಸರ್ಕಾರ ಮತ್ತಷ್ಟು ಕಡಿಮೆ ಮಾಡಿದೆ. ಈ ಮೂಲಕ ಸಾರ್ವಜನಿಕರಿಗೆ ಟೆಸ್ಟ್​ ಹೊರೆ ಕಡಿಮೆ ಆಗುವಂತೆ ಮಾಡಿದೆ. ರಾಜ್ಯ ಸರ್ಕಾರ...

32 ವರ್ಷಗಳ ಬಳಿಕ ಸಿಕ್ಕಿತು ಭಾರತೀಯ ಪೌರತ್ವ: ಸರಕಾರಕ್ಕೆ ಧನ್ಯವಾದ ಅರ್ಪಿಸಿದ ಪಾಕಿಸ್ತಾನದ ಫಕ್ರಾ ನೌರೀನ್!

ಬುಲಂದ್‌ಶಹರ್ (ಉತ್ತರ ಪ್ರದೇಶ): ಕಳೆದ 32 ವರ್ಷಗಳಿಂದ ಹೋರಾಡುತ್ತಿರುವ ಪಾಕಿಸ್ತಾನದ ಫಕ್ರಾ ನೌರೀನ್ ಗೆ ಕೊನೆಗೂ ಸಿಕ್ಕಿತು ಭಾರತೀಯ ಪೌರತ್ವ. ಹೌದು , ನಿಕಾಹ್ ನಂತರ, ಪಾಕಿಸ್ತಾನ ಮೂಲದ ಫಕ್ರಾ ನೌರೀನ್ ಕಳೆದ 32...

ಮಂಗಳೂರು| 5 ಮಂದಿ ಬೈಕ್ ಕಳ್ಳರ ಸೆರೆ: 7 ಬೈಕ್ ವಶ

ಮಂಗಳೂರು: ಬೈಕ್ ಕಳ್ಳತನ ಸೇರಿದಂತೆ ವಿವಿಧ ಪ್ರಕರಣಗಳಲಿ ಭಾಗಿಯಾಗಿದ್ದ ಮಾಡುತ್ತಿದ್ದ 5 ಮಂದಿ ಖದೀಮರನ್ನು ಬಂಧಿಸಿರುವ ಬಜಪೆ ಠಾಣಾ ಪೊಲೀಸರು ಆರೋಪಿಗಳಿಂದ ಸುಮಾರು 5 ಲಕ್ಷ ಮೊತ್ತದ 7  ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಸುರತ್ಕಲ್ ಜನತಾ ಕಾಲೋನಿಯ ವಿಜಯ ಬೋವಿ ಯಾನೆ ಆಂಜನೇಯ(23), ಉಳಾಯಿಬೆಟ್ಟುವಿನ ಪ್ರದೀಪ್ ಪೂಜಾರಿ ಯಾನೆ ಚೇತನ(27), ಮುಲ್ಕಿ ಚಿತ್ರಾಪುವಿನ ಅಭಿಜಿತ್ (26), ಕೃಷ್ಣಾಪುರದ ರಕ್ಷಿತ ಕುಲಾಲ್(22), ಬಂಟ್ವಾಳ ತಾಲೂಕಿನ ಕೈರಂಗಳದ ಸುದೀಶ್ ನಾಯರ್  ಯಾನೆ ಸುಧೀಶ್ ಕೆ.ಕೆ ಯಾನೆ ಮುನ್ನಾ(20) ಬಂಧಿತ ಆರೋಪಿಗಳು.
ಬಜಪೆ ಠಾಣಾ ವ್ಯಾಪ್ತಿಯ ದಡ್ಡಿ ಕ್ರಾಸ್ ಎಂಬಲ್ಲಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದ ಸಂದರ್ಭ ಸಂಶಯಾಸ್ಪದ ರೀತಿಯಲ್ಲಿ 2 ಬೈಕ್‌ಗಳಲ್ಲಿ ಬರುತ್ತಿದ್ದ ೪ಜನ ಯುವಕರನ್ನು ತಡೆದು ನಿಲ್ಲಿಸಿದ ಪೊಲೀಸರು ಬೈಕ್‌ಗಳ ದಾಖಲಾತಿಗಳನ್ನು ಹಾಜರುಪಡಿಸುವಂತೆ ತಿಳಿಸಿದಾಗ ಬೈಕ್ ಕಳ್ಳರ ಬಣ್ಣ ಬಯಲಾಗಿದೆ. ಯಾವುದೇ ದಾಖಲೆಗಳು ಇಲ್ಲದೆ ಇದ್ದುದರಿಂದ ಕೂಲಂಕಷವಾಗಿ ವಿಚಾರಣೆಗೊಳಪಡಿಸಿದಾಗ ಕಳ್ಳತನ ಪ್ರಕರಣಗಳು ಬಯಲಾಗಿವೆ.
ಪ್ರಥಮ ಆರೋಪಿ ವಿಜಯ ಎಂಬಾತನ ವಿರುದ್ಧ ಬಜಪೆ ಪೊಲೀಸ್ ಠಾಣೆಯಲ್ಲಿ 3 ಬೈಕ್ ಕಳವು ಪ್ರಕರಣಗಳು, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ 3 ಬೈಕ್ ಕಳವು ಪ್ರಕರಣ, ಮೂಡುಬಿದ್ರೆ ಪೊಲೀಸ್ ಠಾಣೆಯಲ್ಲಿ 1 ಬೈಕ್ ಕಳವು ಪ್ರಕರಣ, ಪಣಂಬೂರು ಪೊಲೀಸ್ ಠಾಣೆಯಲ್ಲಿ 1 ಬೈಕ್ ಕಳವು ಪ್ರಕರಣ, ಕಾವೂರಿನಲ್ಲಿ ಒಂದು ಬೈಕ್ ಕಳವು ಮತ್ತು ಒಂದು ಗಾಂಜಾ ಪ್ರಕರಣಗಳಲ್ಲಿ ಭಾಗಿಯಾದ ಬಗ್ಗೆ ಕೇಸು ದಾಖಲಾಗಿದೆ.
2ನೇ ಆರೋಪಿ ಪ್ರದೀಪ್‌ನ ವಿರುದ್ದ ಬರ್ಕೆ ಪೊಲೀಸ್ ಠಾಣೆಯಲ್ಲಿ ಭೂಗತ ಪಾತಕಿ ಮಾಡೂರು ಯುಸೂಫ್ ಕೊಲೆ ಪ್ರಕರಣ, ಮುಲ್ಕಿ ಪೊಲೀಸ್ ಠಾಣೆಯಲ್ಲಿ ದರೋಡೆಗೆ ಸಂಚು-ಆಮ್ಸ್ ಆಕ್ಟ್ ಪ್ರಕರಣ, ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಟಿಕ್ಕಿ ಮೋಹನ್ ಕೊಲೆಗೆ ಯತ್ನ, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ 3 ಬೈಕ್ ಕಳವು, ಮೂಡುಬಿದ್ರೆ ಪೊಲೀಸ್ ಠಾಣೆಯಲ್ಲಿ 1 ಬೈಕ್ ಕಳವು ಪ್ರಕರಣಗಳು ದಾಖಲಾಗಿವೆ.
ಮೂರನೇ ಆರೋಪಿ ಅಭಿಜಿತ್ ಮೇಲೆ ಕಾಪು ಪೊಲೀಸ್ ಠಾಣೆಯಲ್ಲಿ ಹಲ್ಲೆ ಮತ್ತು ಗಲಾಟೆಗೆ ಸಂಬಂಧಿಸಿದ ೩ ಪ್ರಕರಣಗಳು, ಮೈಸೂರು ನರಸಿಂಹ ರಾಜ ಪೊಲೀಸ್ ಠಾಣೆಯಲ್ಲಿ ಕೊಲೆಗೆ ಯತ್ನ ಪ್ರಕರಣ, ಬಜಪೆ ಪೊಲೀಸ್ ಠಾಣೆಯಲ್ಲಿ 2 ಬೈಕ್ ಕಳವು ಪ್ರಕರಣಗಳು ದಾಖಲಾಗಿವೆ.
ನಾಲ್ಕನೇ ಆರೋಪಿ ರಕ್ಷಿತ್‌ನ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ, ಬಜಪೆ ಮತ್ತು ಕಾವೂರು ಪೊಲೀಸ್ ಠಾಣೆಯಲ್ಲಿ ತಲಾ ಒಂದೊಂದು ಬೈಕ್ ಕಳವು ಪ್ರಕರಣಗಳು ದಾಖಲಾಗಿವೆ.
5 ನೇ ಆರೋಪಿ ಸುದೀಶ್ ನಾಯರ್ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ 3 ಬೈಕ್ ಕಳವು ಪ್ರಕರಣ, ಉಳ್ಳಾಲ್ ಪೊಲೀಸ್ ಠಾಣೆಯಲ್ಲಿ ಗಲಾಟೆಗೆ ಸಂಬಂಧಿಸಿದ  ಪ್ರಕರಣ, ಬಜಪೆ ಮತ್ತು ಪಣಂಬೂರು ಪೊಲೀಸ್ ಠಾಣೆಯಲ್ಲಿ ತಲಾ ಒಂದೊಂದು ಬೈಖ್ ಕಳವು ಪ್ರಕರಣಗಳು ದಾಖಲಾಗಿವೆ. ಈ ಆರೋಪಿಗಳನ್ನು ವಿಚಾರಣೆ ಮಾಡುವ ಸಮಯದಲ್ಲಿ ಮೂಡಬಿದ್ರೆ ಪೇಟೆಯ ಆಂಜನೇಯ ದೇವಸ್ಥಾನದ ಎದುರು ಇರುವ ಚಿನ್ನದ ಅಂಗಡಿಯೊಂದರ ದರೋಡೆ ಮಾಡಲು ಸಂಚು ರೂಪಿಸಿರುವುದಾಗಿ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಬೆಳ್ಳಿಯಪ್ಪ ಮತ್ತು ಪೊಲೀಸ್ ನಿರೀಕ್ಷಕ ಕೆ.ಆರ್ ನಾಯ್ಕ್ ರವರ ನೇತೃತ್ವದಲ್ಲಿ ಬಜಪೆ ಪೊಲೀಸ್ ಠಾಣೆಯ ಅಪರಾಧ ಪತ್ತೆ ವಿಭಾಗದ ಪಿ.ಎಸ್.ಐ ಕಮಲಾ, ಪಿ.ಎಸ್.ಐ ಸತೀಶ್ ಎಂ.ಪಿ, ಪಿ.ಎಸ್.ಐ ರಾಘವೇಂದ್ರ ನಾಯ್ಕ ಸಿಬ್ಬಂದಿಗಳಾದ ಎ.ಎಸ್.ಐ ರಾಮ ಪೂಜಾರಿ, ರಾಮಚಂದ್ರ, ಹೊನ್ನಪ್ಪ ಗೌಡ, ಸುದೀರ್ ಶೆಟ್ಟಿ, ರಾಜೇಶ್,  ಸಂತೋಷ ಡಿ.ಕೆ, ರೋಹಿತ್ ಕುಮಾರ್, ವಕೀಲ್ ಎನ್ ಲಮಾಣಿ, ರಶೀದ ಶೇಖ, ಕುಮಾರ್ ಸ್ವಾಮಿ ಮತ್ತು ಸಂಜೀವ ಇವರುಗಳು ಈ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Latest Posts

ಮನರಂಜನಾ ಕ್ಷೇತ್ರಕ್ಕೆ ವಿನಾಯಿತಿ ಕೊಟ್ಟ ದೀದಿ ಸರಕಾರ: ಅ. 1 ರಿಂದ ಚಿತ್ರಮಂದಿರಗಳು ಓಪನ್!

ಹೊಸದಿಲ್ಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೆಲವು ಷರತ್ತುಗಳೊಂದಿಗೆ ಮನರಂಜನಾ ಕ್ಷೇತ್ರಕ್ಕೆ ವಿನಾಯಿತಿ ನೀಡಿದ್ದಾರೆ. ಆದರೆ ಯಾವ ಕಾರ್ಯಕ್ರಮಗಳಿಗೂ ಹೆಚ್ಚು ಜನರು ಸೇರುವಂತಿಲ್ಲ, ವೈಯಕ್ತಿಕ ಅಂತರ ಕಾಪಾಡಿಕೊಳ್ಳಬೇಕು ಹಾಗೂ ಕಡ್ಡಾಯವಾಗಿ ಮಾಸ್ಕ್...

ಕೋವಿಡ್ ಟೆಸ್ಟ್​ ಬೆಲೆ ಮತ್ತಷ್ಟು ಕಡಿಮೆ ಮಾಡಿದ ರಾಜ್ಯ ಸರಕಾರ

ಬೆಂಗಳೂರು: ರಾಜ್ಯದಲ್ಲಿ ಕಾಡುತ್ತಿರುವ ಕೊರೋನಾ ಸೋಂಕಿನ ಪತ್ತೆಗೆ ಅನುಕೂಲ ಮಾಡಿಕೊಡಲು ಕೋವಿಡ್ ಟೆಸ್ಟ್​ ಬೆಲೆಯನ್ನು ಸರ್ಕಾರ ಮತ್ತಷ್ಟು ಕಡಿಮೆ ಮಾಡಿದೆ. ಈ ಮೂಲಕ ಸಾರ್ವಜನಿಕರಿಗೆ ಟೆಸ್ಟ್​ ಹೊರೆ ಕಡಿಮೆ ಆಗುವಂತೆ ಮಾಡಿದೆ. ರಾಜ್ಯ ಸರ್ಕಾರ...

32 ವರ್ಷಗಳ ಬಳಿಕ ಸಿಕ್ಕಿತು ಭಾರತೀಯ ಪೌರತ್ವ: ಸರಕಾರಕ್ಕೆ ಧನ್ಯವಾದ ಅರ್ಪಿಸಿದ ಪಾಕಿಸ್ತಾನದ ಫಕ್ರಾ ನೌರೀನ್!

ಬುಲಂದ್‌ಶಹರ್ (ಉತ್ತರ ಪ್ರದೇಶ): ಕಳೆದ 32 ವರ್ಷಗಳಿಂದ ಹೋರಾಡುತ್ತಿರುವ ಪಾಕಿಸ್ತಾನದ ಫಕ್ರಾ ನೌರೀನ್ ಗೆ ಕೊನೆಗೂ ಸಿಕ್ಕಿತು ಭಾರತೀಯ ಪೌರತ್ವ. ಹೌದು , ನಿಕಾಹ್ ನಂತರ, ಪಾಕಿಸ್ತಾನ ಮೂಲದ ಫಕ್ರಾ ನೌರೀನ್ ಕಳೆದ 32...

ಗೆಲುವಿಗಾಗಿ ಕೋಲ್ಕತ್ತಾ ನೈಟ್​ ರೈಡರ್ಸ್ ಗೆ 143 ರನ್​ಗಳ ಸಾಧಾರಣ ಗುರಿ ನೀಡಿದ ಸನ್​ರೈಸರ್ಸ್​ ಹೈದರಾಬಾದ್!

ಅಬುಧಾಬಿ: ಯುಎಇ ಯಲ್ಲಿ ನಡೆಯುತ್ತಿರುವ 13 ನೇ ಐಪಿಎಲ್ ಸರಣಿಯ 8 ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್​ ವಿರುದ್ಧ ಸನ್​ರೈಸರ್ಸ್​ ಹೈದರಾಬಾದ್​ 20 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 142 ರನ್​ಗಳ...

Don't Miss

ಮನರಂಜನಾ ಕ್ಷೇತ್ರಕ್ಕೆ ವಿನಾಯಿತಿ ಕೊಟ್ಟ ದೀದಿ ಸರಕಾರ: ಅ. 1 ರಿಂದ ಚಿತ್ರಮಂದಿರಗಳು ಓಪನ್!

ಹೊಸದಿಲ್ಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೆಲವು ಷರತ್ತುಗಳೊಂದಿಗೆ ಮನರಂಜನಾ ಕ್ಷೇತ್ರಕ್ಕೆ ವಿನಾಯಿತಿ ನೀಡಿದ್ದಾರೆ. ಆದರೆ ಯಾವ ಕಾರ್ಯಕ್ರಮಗಳಿಗೂ ಹೆಚ್ಚು ಜನರು ಸೇರುವಂತಿಲ್ಲ, ವೈಯಕ್ತಿಕ ಅಂತರ ಕಾಪಾಡಿಕೊಳ್ಳಬೇಕು ಹಾಗೂ ಕಡ್ಡಾಯವಾಗಿ ಮಾಸ್ಕ್...

ಕೋವಿಡ್ ಟೆಸ್ಟ್​ ಬೆಲೆ ಮತ್ತಷ್ಟು ಕಡಿಮೆ ಮಾಡಿದ ರಾಜ್ಯ ಸರಕಾರ

ಬೆಂಗಳೂರು: ರಾಜ್ಯದಲ್ಲಿ ಕಾಡುತ್ತಿರುವ ಕೊರೋನಾ ಸೋಂಕಿನ ಪತ್ತೆಗೆ ಅನುಕೂಲ ಮಾಡಿಕೊಡಲು ಕೋವಿಡ್ ಟೆಸ್ಟ್​ ಬೆಲೆಯನ್ನು ಸರ್ಕಾರ ಮತ್ತಷ್ಟು ಕಡಿಮೆ ಮಾಡಿದೆ. ಈ ಮೂಲಕ ಸಾರ್ವಜನಿಕರಿಗೆ ಟೆಸ್ಟ್​ ಹೊರೆ ಕಡಿಮೆ ಆಗುವಂತೆ ಮಾಡಿದೆ. ರಾಜ್ಯ ಸರ್ಕಾರ...

32 ವರ್ಷಗಳ ಬಳಿಕ ಸಿಕ್ಕಿತು ಭಾರತೀಯ ಪೌರತ್ವ: ಸರಕಾರಕ್ಕೆ ಧನ್ಯವಾದ ಅರ್ಪಿಸಿದ ಪಾಕಿಸ್ತಾನದ ಫಕ್ರಾ ನೌರೀನ್!

ಬುಲಂದ್‌ಶಹರ್ (ಉತ್ತರ ಪ್ರದೇಶ): ಕಳೆದ 32 ವರ್ಷಗಳಿಂದ ಹೋರಾಡುತ್ತಿರುವ ಪಾಕಿಸ್ತಾನದ ಫಕ್ರಾ ನೌರೀನ್ ಗೆ ಕೊನೆಗೂ ಸಿಕ್ಕಿತು ಭಾರತೀಯ ಪೌರತ್ವ. ಹೌದು , ನಿಕಾಹ್ ನಂತರ, ಪಾಕಿಸ್ತಾನ ಮೂಲದ ಫಕ್ರಾ ನೌರೀನ್ ಕಳೆದ 32...
error: Content is protected !!